ಅಮೆರಿಕ ಹೌಸ್ ಆಫ್ ಪ್ಯಾನಲ್ ಸದಸ್ಯರಾದ ನಾಲ್ವರು ಭಾರತೀಯರು

Social Share

ವಾಷಿಂಗ್ಟನ್,ಫೆ.4- ಭಾರತೀಯ ಮೂಲದ ನಾಲ್ವರು ಅಮೇರಿದ ಪ್ರಮುಖ ಹೌಸ್ ಆಫ್ ಪ್ಯಾನಲ್‍ಗಳ ಸದಸ್ಯರಾಗಿ ನಿಯೋಜನೆಗೊಂಡಿದ್ದಾರೆ. ಅಮೆರಿಕಾ ರಾಜಕೀಯದಲ್ಲಿ ಭಾರತೀಯರ ಪ್ರಭಾವ ಹೆಚ್ಚಾಗುತ್ತಿದೆ ಎನ್ನುವುದಕ್ಕೆ ಈ ನೇಮಕ ಪುರಾವೆಯಂತಿದೆ.

ಪ್ರಮೀಳಾ ಜಯಪಾಲ, ಅಮಿ ಬೇರಾ, ರಾಜಾ ಕೃಷ್ಣಮೂರ್ತಿ ಮತ್ತು ರೋ ಖನ್ನಾ ಅವರು ಅಮೆರಿಕಾದ ಪ್ರಮುಖ ಹುದ್ದೆ ಆಲಂಕರಿಸಿರುವ ಭಾರತೀಯ ಮೂಲದ ಗಣ್ಯರು ಎಂದು ಗುರುತಿಸಲಾಗಿದೆ.

ಪ್ರಮೀಳಾ ಜಯಪಾಲ್ ಅವರನ್ನು ಜುಡಿಷಿಯರಿ ಕಮಿಟಿಯ ವಲಸೆ ಸಮಿತಿಯ ಶ್ರೇಯಾಂಕದ ಸದಸ್ಯರನ್ನಾಗಿ ನಿಯೋಜಿಸಲಾಗಿದೆ. ಉಪಸಮಿತಿಗೆ ನಾಯಕತ್ವದ ಪಾತ್ರದಲ್ಲಿ ಸೇವೆ ಸಲ್ಲಿಸಿದ ಮೊದಲ ವಲಸೆಗಾರರು ಎಂಬ ಕೀರ್ತಿಗೂ ಇವರು ಪಾತ್ರರಾಗಿದ್ದಾರೆ.

ವಾಷಿಂಗ್ಟನ್ ರಾಜ್ಯದ 7ನೇ ಕಾಂಗ್ರೆಷನಲ್ ಡಿಸ್ಟ್ರೀಕ್ ಅನ್ನು ಪ್ರತಿನಿಧಿಸುತ್ತಿರುವ ಜಯಪಾಲï ಅವರು ವಲಸೆ ಸಮಗ್ರತೆ, ಭದ್ರತೆ ಮತ್ತು ಜಾರಿ ಮೇಲಿನ ಉಪಸಮಿತಿಯಲ್ಲಿ ಸೇವೆ ಸಲ್ಲಿಸಲು ಕಾಂಗ್ರೆಸ್ ಮಹಿಳೆ ಜೊಯ್ ಲೋಫ್‍ಗ್ರೆನ್ ಅವರ ಉತ್ತರಾಧಿಕಾರಿಯಾಗಿದ್ದಾರೆ ಎಂದು ಮಾಧ್ಯಮ ಪ್ರಕಟಣೆ ತಿಳಿಸಿದೆ.

ಮಗಳೊಂದಿಗೆ ಗೂಡ್ಸ್ ರೈಲಿಗೆ ತಲೆ ಕೊಟ್ಟ ತಾಯಿ

ಅದೇ ರೀತಿ ಅಮಿಬೇರಾ ಅವರನ್ನು ಗುಪ್ತಚರ ಸಂಬಂಧಿತ ವಿಷಯಗಳ ಮೇಲೆ ನಿಗಾಇರಿಸುವ ಅಮೆರಿಕಾದ ಹೌಸ್ ಸಮತಿ ಸದಸ್ಯರಾಗಿ ನಿಯೋಜನೆಗೊಂಡಿದ್ದಾರೆ. ಕೇಂದ್ರ ಗುಪ್ತಚರ ಸಂಸ್ಥೆ , ರಾಷ್ಟ್ರೀಯ ಗುಪ್ತಚರ ನಿರ್ದೇಶಕರ ಕಛೇರಿ , ರಾಷ್ಟ್ರೀಯ ಭದ್ರತಾ ಸಂಸ್ಥೆ ಹಾಗೂ ಮಿಲಿಟರಿ ಗುಪ್ತಚರ ಸೇರಿದಂತೆ ದೇಶದ ಗುಪ್ತಚರ ಚಟುವಟಿಕೆಗಳ ಮೇಲ್ವಿಚಾರಣೆಯನ್ನು ಗುಪ್ತಚರ ಸದನದ ಖಾಯಂ ಆಯ್ಕೆ ಸಮಿತಿಯಲ್ಲಿ ಬೇರಾ ಇರಲಿದ್ದಾರೆ.

ರಾಜಾ ಕೃಷ್ಣಮೂರ್ತಿ ಅವರನ್ನು ಚೀನಾದ ಚಲನವಲನಗಳನ್ನು ಪರಿಶೀಲಿಸುವ ಉದ್ದೇಶದಿಂದ ಹೊಸದಾಗಿ ರಚಿಸಲಾದ ಸದನ ಸಮಿತಿಯ ಶ್ರೇಯಾಂಕದ ಸದಸ್ಯರನ್ನಾಗಿ ಮಾಡಲಾಗಿದೆ.

ಮರಣದಂಡನೆ ಆರೋಪದಿಂದ ಬಚಾವಾಗಿ ಕೊಲೆ ಕೇಸ್‍ನಲ್ಲಿ ಸಿಕ್ಕಿಬಿದ್ದ..!

ಯುನೈಟೆಡ್ ಸ್ಟೇಟ್ಸ್‍ನ ಆರ್ಥಿಕ, ತಾಂತ್ರಿಕ ಮತ್ತು ಭದ್ರತಾ ಸ್ಪರ್ಧೆಯನ್ನು ಪರಿಹರಿಸಲು ನೀತಿಯನ್ನು ತನಿಖೆ ಮಾಡುವ ಮತ್ತು ಅಭಿವೃದ್ಧಿಪಡಿಸುವ ನಿರ್ದಿಷ್ಟ ಉದ್ದೇಶಕ್ಕಾಗಿ ರಿಪಬ್ಲಿಕನ್ ಹೌಸ್ ಸ್ಪೀಕರ್ ಕೆವಿನ್ ಮೆಕಾರ್ಥಿ ಅವರು 118 ನೇ ಕಾಂಗ್ರೆಸ್‍ನಲ್ಲಿ ರಚಿಸಲಾದ ಈ ಹೊಸ ಸಮಿತಿಗೆ ಇನ್ನೊಬ್ಬ ಭಾರತೀಯ-ಅಮೆರಿಕನ್ ಕಾಂಗ್ರೆಸ್‍ಮನ್ ರೋ ಖನ್ನಾ ಅವರನ್ನು ಸದಸ್ಯರನ್ನಾಗಿ ಮಾಡಲಾಗಿದೆ.

Four, Indian, Americans, US House Panels,

Articles You Might Like

Share This Article