ಕಠ್ಮಂಡು, ಜು 21 – ಯಾವುದೇ ದಾಖಲೆಗಳಿಲ್ಲದೆ 41.55 ಲಕ್ಷ ರೂ (ಭಾರತೀಯ ಹಣ) ನಗದು ಸಾಗಿಸುತ್ತಿದ್ದ ಭಾರತೀಯನನ್ನುಇಲ್ಲಿ ವಿಶೇಷ ಪೊಲೀಸರ ತಂಡ ಬಂಸಿದೆ. ಸುಮಾರು 41,55,000 ನಗದು ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ನೇಪಾಳದಲ್ಲಿ ಯಾವುದೇ ಪೂರಕ ದಾಖಲೆಗಳಿಲ್ಲದೆ 25,000 ರೂ.ಗಿಂತ ಹೆಚ್ಚಿನ ಹಣವನ್ನು ಸಾಗಿಸುವುದು ಕಾನೂನುಬಾಹಿರವಾಗಿದೆ. ಭಾರತ ಮೂಲದ ವ್ಯಕ್ತಿಯು ಮೋಟಾರು ಬೈಕ್‍ನ ಸೀಟಿನ ಕೆಳಗೆ ಮತ್ತು ಪೆಟ್ರೋಲ್ ಟ್ಯಾಂಕ್‍ನಲ್ಲಿ ನೋಟುಗಳನ್ನು ಬಚ್ಚಿಟ್ಟಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಭಂದಿಸಿದಂತೆ ರಾಯಭಾರ ಕಛೇರಿಗೆ ಮಾಹಿತಿ ನೀಡಲಾಗಿದೆ.ಕಾನೂನಿನ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.ಭಾರತೀಯ ಹೆಸರು ಮೂಲ ವಿವರ ತಿಳಿಸಲಾಗಿಲ್ಲ.ಹವಾಲ ದಂಧೆ ಶಂಕೆ ವ್ಯಕ್ತವಾಗಿದೆ