ಬೆಂಗಳೂರು, ಫೆ. 15 : ಬ್ಯಾಂಕಿನ ವಿವಿಧ“ ಆಜಾದಿ ಕಾ ಅಮೃತ್ ಮಹೋತ್ಸವ”ಆಚರಣೆಯ ಭಾಗವಾಗಿಇಂಡಿಯನ್ ಬ್ಯಾಂಕ್, ತನ್ನ ಸಾಂಸ್ಥಿಕ ಸಾಮಾಜಿಕಜವಾಬ್ದಾರಿ(ಸಿಎಸ್‍ಆರ್) ಅಡಿ ಬೆಂಗಳೂರಿನ ಶ್ರೀ ಅಟಲ್ ಬಿಹಾರಿ ವಾಜ್ಪಯೀ ವೈದ್ಯಕೀಯಕಾಲೇಜ್ ಮತ್ತು ಸಂಶೋಧನಾ ಸಂಸ್ಥೆಗೆ ಆ್ಯಂಬ್ಯುಲೆನ್ಸ್ ಪ್ರಾಯೋಜಿಸಿದೆ.
ಬ್ಯಾಂಕಿನ ಪರವಾಗಿ ಶ್ರೀ ಎಸ್‍ಎಲ್‍ಜೈನ್, ಎಮ್‍ಡಿ ಹಾಗೂ ಸಿಇಓ ಅವರುಡಾ. ಮನೋಜ್‍ಕುಮಾರ್ ಹೆಚ್ ವಿ ( ಡೀನ್ ಮತ್ತು ನಿರ್ದೇಶಕರು, ಶ್ರೀ ಅಟಲ್ ಬಿಹಾರಿ ವಾಜ್ಪಯೀ ವೈದ್ಯಕೀಯಕಾಲೇಜ್ ಮತ್ತು ಸಂಶೋಧನಾ ಸಂಸ್ಥೆ) ಅವರಿಗೆಆ್ಯಂಬ್ಯುಲೆನ್ಸ್‍ನ ಕೀಲಿಗಳನ್ನು ಹಸ್ತಾಂತರಿಸಿದರು. ತಮ್ಮ ಭಾಷಣದಲ್ಲಿಅವರು, ಕೋವಿಡ್-19 ವೈರಾಣು ಪ್ತಭೇದಗಳಿಂದ ಉದ್ಭವವಾಗಬಹುದಾದಯಾವುದೇಆರೋಗ್ಯ ಸ್ಥಿತಿಯನ್ನು ನಿಭಾಯಿಸಲುಆರೋಗ್ಯ ಮೂಲಭೂತಸೌಕರ್ಯದ ಲಭ್ಯತೆಯನ್ನು ವಿಸ್ತಾರಗೊಳಿಸಬೇಕಾದ ಅವಶ್ಯಕತೆಯನ್ನುಒತ್ತಿ ಹೇಳಿದರು.
ತನ್ನ ಸಿಎಸ್‍ಆರ್ ಚಟುವಟಿಕೆಗಳ ಭಾಗವಾಗಿ, ಇಂಡಿಯನ್ ಬ್ಯಾಂಕ್, ಸಾಮಜದಲ್ಲಿ ನೆರವು-ಬೆಂಬಲ ಅಗತ್ಯವಿರುವ ವರ್ಗದವರಿಗೆ ನೆರವು/ಬೆಂಬಲ ಒದಗಿಸುವಲ್ಲಿ ಬ್ಯಾಂಕ್ ಸದಾ ಮುಂಚೂಣಿಯಲ್ಲಿದೆಎಂದೂಅವರು ಹೇಳಿದರು. “ಒಬ್ಬಜವಾಬ್ದಾರಿಯುತ ಸಾಂಸ್ಥಿಕ ಪ್ರಜೆಯಾಗಿ, ಸಮಾಜದ ಹಿತಾಸಕ್ತಿಗ್‍ಅಳನ್ನು ಕಾಪಾಡುವ ನಿಟ್ಟಿನಲ್ಲಿಎಲ್ಲಾ ಉಪಕ್ರಮಗಳಿಗೆ ತಮ್ಮ ಬ್ಯಾಂಕ್‍ಅರ್ಥಪೂರ್ಣಕೊಡುಗೆ ಲಭ್ಯವಾಗುವಂತೆ ಮಾಡುವುದು ನಮ್ಮ ನೈತಿಕಕರ್ತವ್ಯ.
ಆರೋಗ್ಯದ ಪ್ರಾಮುಖ್ಯತೆ ಬಗ್ಗೆ ಎಷ್ಟು ಹೇಳಿದರೂ ಸಾಲದು ಮತ್ತು ಇಂದಿನ ಪರಿಸ್ಥಿತಿಯಲ್ಲಂತೂ ಹಾಗೂ ಕಳೆದ ಎರಡು ವರ್ಷಗಳಲ್ಲಿ ವಿಶ್ವಾದ್ಯಂತಏರುಪೇರಾಗುತ್ತಿರುವಆರೋಗ್ಯ ಸನ್ನಿವೇಶಗಳ ಹಿನ್ನೆಲೆಯಲ್ಲಿ, ಜಾಗತಿಕವಾಗಿ ಸಂಸ್ಥೆಗಳು ತನ್ನಜನರಿಗೆ ಸಮಯಕ್ಕೆ ಸರಿಯಾಗಿ ಹಾಗೂ ಗುಣಮಟ್ಟದಆರೋಗ್ಯ ಶುಷ್ರೂಷೆಒದಗಿಸುವಲ್ಲಿ ಅನೇಕ ಸವಾಲುಗಳನ್ನು ಎದುರಿಸಿವೆ”ಎಂದರು.
ಭಾರತ ವ್ಯಾಪಿಯಾಗಿ ವಿವಿಧ ಆಸ್ಪತ್ರೆಗಳಲ್ಲಿ ಆ್ಯಂಬ್ಯುಲೆನ್ಸ್ ನೆರವನ್ನು ಬಲಪಡಿಸಲುತನ್ನ ನಿರಂತರ ಪ್ರಯತ್ನದ ಹಾದಿಯಲ್ಲಿ, ಬೆಂಗಲೂರುಅಲ್ಲದೆ ಪಾಟ್ನ, ಮೀರಟ್, ಲಕ್ನೋಗಳಲ್ಲಿ ಆ್ಯಂಬ್ಯುಲೆನ್ಸ್ ನೆರವನ್ನು ಒದಗಿಸಿದೆ. ಬೆಂಗಲೂರಿನಎಫ್ ಜಿ ಎಮ್ ಶ್ರೀ ಸುಧೀರ್‍ಕುಮಾರ್ ಗುಪ್ತ ಹಾಗೂ ಬ್ಯಾಂಕಿನಇತರ ಸಿಬ್ಬಂದಿವರ್ಗದವರು ಈ ಕಾರ್ಯಕ್ರಮದಲ್ಲಿಆಸ್ಪತ್ರೆಯ ಅಧಿಕಾರಗಳ ಜೊತೆ ಭಾಗವಹಿಸಿದರು.
# ಇಂಡಿಯನ್ ಬ್ಯಾಂಕ್‍ಕುರಿತು :
1907 ಸ್ಥಾಪಿತವಾದಇಂಡಿಯನ್ ಬ್ಯಾಂಕ್, ಭಾರತ ವ್ಯಾಪಿಯಾಗಿಗಮನಾರ್ಹ ಸಂಖ್ಯೆಯಲ್ಲಿ ಅಸ್ತಿತ್ವದಲ್ಲಿರುವ ಪ್ರಮುಖ ಸಾರ್ವಜನಿಕಕ್ಷೇತ್ರ ಬ್ಯಾಂಕ್‍ಆಗಿದೆ. ಭಾರತ ಸರ್ಕಾರವು ಬ್ಯಾಂಕಿನಲ್ಲಿ 88.06% ಪಾಲನ್ನು ಹೊಂದಿದೆ. 1989 ರಲ್ಲಿ ಮದ್ರಾಸ್ ಬಂದರಿನಲ್ಲಿ ಎ ಟಿ ಎಮ್ ಸ್ಥಾಪಿಸಿದ ಮೊದಲ ಬ್ಯಾಂಕ್‍ಇಂಡಿಯನ್ ಬ್ಯಾಂಕ್. 6004 ಶಾಖೆಗಳು, 5428 ಎ ಟಿ ಎಮ್ ಮತ್ತು ಬಿ ಎನ್ ಎ ಗಳನ್ನು ಹಾಗೂ 225 ಕ್ಕೂ ಹೆಚ್ಚು ವಿದೇಶಿ ಬ್ಯಾಂಕ್‍ಗಳಲ್ಲದೆ ಕೊಲೊಂಬೊ ಹಾಗೂ ಸಿಂಗಾಪುರದಲ್ಲಿ ವಿದೇಶಿ ಶಾಖೆಗಳೊಂದಿಗೆ ಬ್ಯಾಂಕ್ ಬಹಳ ವಿಸ್ತಾರವಾಗಿ ವ್ಯಾಪಿಸಿದೆ. 155 ವರ್ಷಗಳ ಇತಿಹಾಸವಿದ್ದಅಲ್ಲಹಾಬಾದ್ ಬ್ಯಾಂಕ್‍ಅನ್ನು 2019 ಇಂಡಿಯನ್ ಬ್ಯಾಂಕ್‍ಜೊತೆಗೆ ವಿಲೀನವನ್ನು ಭಾರತ ಸರ್ಕಾರ ಪ್ರಕಟಿಸಿತು. 1 ಏಪ್ರಿಲ್ 2020 ರಂದುಏಕೀಕೃತಗೊಂಡ ಸಂಸ್ಥೆಯಗೈಇಂಡಿಯನ್ ಬ್ಯಾಂಕ್‍ತನ್ನಕಾರ್ಯಾಚರಣೆ ಆರಂಭಿಸಿತು.
14 ಫೆಬ್ರವರಿ 2020 ರಂದುಎರಡೂ ಬ್ಯಾಂಕ್‍ಗಳ ಸಿ ಬಿ ಎಸ್ ವ್ಯವಸ್ಥೆಯನ್ನು ಸಂಯೀಜಿಸಲಾಯಿತು. ಅತ್ಯಾಧುನಿಕತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ಹಾಗೂತನ್ನ ತಂತ್ರಗಳನ್ನು ಬದಲಾಯಿಸುವಲ್ಲಿಇಂಡಿಯನ್ ಬ್ಯಾಂಕ್ ನಿರಂತರ ಪ್ರಯತ್ನ ಮಾಡಿದೆ.ಇಂಡಿಯನ್ ಬ್ಯಾಂಕ್‍ಕೈಗೊಂಡಿರುವ ಅನೇಕ ಉಪಕ್ರಮಗಳಲ್ಲದೆ ಎಮ್‍ಎಸ್‍ಎಮ್ ಇ ಉದ್ಯಮಿಗಳಿಗೆ ಭಾರತ ವ್ಯಾಪಿ ಕಾರ್ಯಕ್ರಮವಾದಆನ್‍ಲೈನ್ ವ್ಯಾಪಾರ ಮಾರ್ಗದರ್ಶನಕಾರ್ಯಕ್ರಮವಾದಎಮ್‍ಎಸ್‍ಎಮ್ ಇ ಪ್ರೇರಣ, ವಿನೂತನಕಾರ್ಯಕ್ರಮವಾಗಿದೆ.
ಈ ಉಪಕ್ರಮವನ್ನು ಬಲಪಡಿಸಲುಇಂಡಿಯನ್ ಬ್ಯಾಂಕ್, ಆರಂಭಿಕ ಉದ್ದಿಮೆಗಳಿಗೆ ಹಣಕಾಸು ನೆರವುಒದಗಿಸಲು‘ಇಂಡ್ ಸ್ಪ್ರಿಂಗ್ ಬೋರ್ಡ್’ ಆರಂಭಿಸಿತು ಮತ್ತು ಮದರಾಸಿನ ಐಐಟಿಜೊತೆ ಸಹಯೋಗ ಏರ್ಪಡಿಸಿಕೊಂಡಿತು. ಕಳೆದ ಹಲವಾರು ವರ್ಷಗಳಲ್ಲಿ, ತನ್ನ ವೈವಿಧ್ಯಗ್ರಾಹಕ ಸಮೂಹಗಳಿಗೆ ಸಕ್ಷಮ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಲುಇಂಡಿಯನ್ ಬ್ಯಾಂಕ್ ಹೊಸ ಮಾನದಂಡಗಳನ್ನು ರೂಪಿಸಿದೆ. ಅತ್ಯುತ್ತಮಗ್ರಾಹಕ ಸೇವೆ ಒದಗಿಸುವಲ್ಲಿಇಂಡಿಯನ್ ಬ್ಯಾಂಕ್ ಮುಂಚೂಣಿಯಲ್ಲಿದೆ.
ಹೆಚ್ಚಿನ ಮಾಹಿತಿ/ಮಾಧ್ಯಮ ಸಂಬಂಧಿತ ವಿಚಾರಣೆಗಳಿಗೆ ದಯವಿಟ್ಟು ಸಂಪರ್ಕಿಸಿ:
ವೆರಿಟಾಸ್‍ರೆಪ್ಯುಟೇಷನ್ ಪಿಆರ್
ನೇಹ ಶರ್ಮ/ಮೋಹಿತ್ ಮಿಶ್ರ
9664372349 / 8433889619
neha.sharma@veritasreputation.com / mohit.mishra@veritasreputation.com
