ಮುಂಬೈ,ಜ.8-ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಭಾರತದ ಸಿರಿವಂತ ವಾಣಿಜ್ಯೋದ್ಯಮಿ ಗೌತಮ್ ಅದಾನಿ ಅವರು 26/11 ರ ದಾಳಿಯಲ್ಲಿ ಅದೃಷ್ಟವಶಾತ್ ಪಾರಾಗಿದ್ದನ್ನು ಸ್ಮರಿಸಿಕೊಂಡಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಮುಂಬೈನ ತಾಜ್ ಹೋಟೆಲ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದಾಗ ನಾನು ಅದೇ ಹೋಟೆಲ್ನಲ್ಲಿ ಸಭೆ ನಡೆಸುತ್ತಿದೆ ಎನ್ನುವುದನ್ನು ಇಷ್ಟು ವರ್ಷಗಳ ನಂತರ ಬಹಿರಂಗಗೊಳಿಸಿದ್ದಾರೆ.
10 ಗಂಟೆಗಳ ಕಾಲ ನಡೆದ ಭೀಕರ ದಾಳಿಯ ನಂತರವೂ ನಾನು ಪ್ರಾಣಾಪಾಯದಿಂದ ಪಾರಾಗಲು ತಾಜ್ ಹೋಟೆಲ್ ಸಿಬ್ಬಂದಿಗಳೇ ಕಾರಣ ಎನ್ನುವುದನ್ನು ಅವರು ತಮ್ಮ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
ಪಾಕ್ ಮೂಲದ ಲಷ್ಕರ್ ಸಂಘಟನೆಯ 10 ಭಯೋತ್ಪಾದಕರು 2008ರ ನವಂಬರ್ ತಿಂಗಳಿನಲ್ಲಿ ಮುಂಬೈನಾದ್ಯಂತ 4 ದಿನಗಳ ಕಾಲ 12 ಸಂಘಟಿತ ಗುಂಡಿನ ಹಾಗೂ ಬಾಂಬ್ ದಾಳಿ ನಡೆಸಿದ್ದರು.
ವಿಶ್ವಸಂಸ್ಥೆ 2023ನ್ನು ಅಂತಾರಾಷ್ಟ್ರೀಯ ರಾಗಿ ವರ್ಷವೆಂದು ಘೋಷಿಸಿದೆ : ಮೋದಿ
ಉಗ್ರರು ತಾಜ್ ಹೋಟೆಲ್ ಮೇಲೆ ದಾಳಿ ನಡೆಸಿದಾಗ ನಾನು ದುಬೈನ ನನ್ನ ಸ್ನೇಹಿತರೊಂದಿಗೆ ಸಭೆ ನಡೆಸುತ್ತಿದ್ದೆ. ನಂತರ ಬಿಲ್ ಪಾವತಿಸಿ ಹೊರ ಹೋಗುತ್ತಿದ್ದಾಗ ನನ್ನ ಇತರ ಸ್ನೇಹಿತರು ಮತ್ತೊಂದು ಸುತ್ತಿನ ಸಭೆ ನಡೆಸುವಂತೆ ಕೇಳಿ ಕೊಂಡಿದ್ದರಿಂದ ಹೋಟೆಲ್ನಲ್ಲೇ ಉಳಿಯುವಂತಾಯಿತು.
ಹೋಟೆಲ್ ತಾಜ್ ಮೇಲೆ ಭಯೋತ್ಪಾದಕರು ದಾಳಿ ಮಾಡಿದಾಗ ನಾನು ಸ್ನೇಹಿತರೊಂದಿಗೆ ಸಭೆ ನಡೆಸುತ್ತಿದ್ದಾಗ ಭಯೋತ್ಪಾದಕರು ಹೋಟೆಲ್ ಮೇಲೆ ದಾಳಿ ನಡೆಸಿರುವುದು ಗೊತ್ತಾಯಿತು.
ಆ ಸಂದರ್ಭದಲ್ಲೇ ಹೋಟೆಲ್ ಸಿಬ್ಬಂದಿಗಳು ನನ್ನನ್ನು ಅಡುಗೆ ಮನೆಗೆ ಕರೆದೊಯ್ದು ಅಲ್ಲಿಂದ ನನ್ನನ್ನು ಸುರಕ್ಷಿತವಾಗಿ ಹೊರ ಕಳುಹಿಸಿದ್ದರಿಂದ ಇಂದು ನಾನು ಈ ಸ್ಥಾನದಲ್ಲಿರಲು ಕಾರಣವಾಯಿತು ಎಂದು ಅವರು ಸ್ಮರಿಸಿಕೊಂಡಿದ್ದಾರೆ.
ತಾಯಿ ಸತ್ತಾಗ ದುಃಖ ವ್ಯಕ್ತಪಡಿಸಲಾಗದಿರುವುದು ನನ್ನನ್ನು ಬಾಧಿಸುತ್ತಿದೆ : ಪ್ರಿನ್ಸ್ ಹ್ಯಾರಿ
#IndianBillionaire, #GautamAdani , #MumbaiAttacks,