ವಿದೇಶಿ ಪೈಲಟ್‍ಗಳ ಮೊರೆ ಹೋದ ಏರ್ ಇಂಡಿಯಾ..!

Social Share

ದನವದೆಹಲಿ,ನ.22- ಎದುರಾಗಿರುವ ಪೈಲಟ್‍ಗಳ ಕೊರತೆ ನೀಗಿಸಿಕೊಳ್ಳಲು ವಿದೇಶಿ ಪೈಲಟ್‍ಗಳನ್ನು ನೇಮಕ ಮಾಡಿಕೊಳ್ಳಲು ಏರ್ ಇಂಡಿಯಾ ತೀರ್ಮಾನಿಸಿದೆ ಎಂದು ವರದಿಯಾಗಿದೆ. ಟಾಟಾ ಸಮೂಹದ ಒಡೆತನದ ಏರ್ ಇಂಡಿಯಾ ಸಂಸ್ಥೆ ವಿಶಾಲವಾಗಿರುವ ಬೋಯಿಂಗ್ 777 ವಿಮಾನಗಳ ಹಾರಾಟ ಮಾಡುವ ಪೈಲಟ್‍ಗಳ ಕೊರತೆ ಎದುರಿಸುತ್ತಿರುವುದರಿಂದ ವಿದೇಶಿ ಪೈಲಟ್‍ಗಳನ್ನು ನೇಮಿಸಿಕೊಳ್ಳಲು ಯೋಜಿಸಿದೆ ಎಂದು ತಿಳಿದುಬಂದಿದೆ.

ವಿಶಾಲವಾದ ಬೋಯಿಂಗ್ 777 ವಿಮಾನಗಳ ಹಾರಾಟಕ್ಕೆ ಸುಮಾರು 100 ವಿದೇಶಿ ಪೈಲಟ್‍ಗಳನ್ನು ನಿಯೋಜಿಸಲು ಬಯಸಿದ್ದು, ಈ ಕುರಿತಂತೆ ಈಗಾಗಲೇ ಕೆಲವು ಏಜೆನ್ಸಿಗಳನ್ನು ಸಂಪರ್ಕಿಸಿದೆ ಎನ್ನಲಾಗಿದೆ.

ಆಪ್ ಶಾಸಕನಿಗೆ ಕಾರ್ಯಕರ್ತರಿಂದಲೇ ಬಿತ್ತು ಗೂಸಾ

ಜನವರಿ 2022 ರಲ್ಲಿ ಟಾಟಾ ಗ್ರೂಪ್ ಏರ್ ಇಂಡಿಯಾ ಒಡೆತನ ಸಾಧಿಸುವವರೆಗೆ ನಷ್ಟದಲ್ಲಿದ್ದ ಏರ್ ಇಂಡಿಯಾ ಸಂಸ್ಥೆ ವೆಚ್ಚ ಉಳಿಸುವ ಉದ್ಧೇಶದಿಂದ ವಿದೇಶೀ ಪೈಲಟ್‍ಗಳನ್ನು ನೇಮಿಸಿಕೊಳ್ಳುವುದನ್ನು ತಡೆ ಹಿಡಿಯಲಾಗಿತ್ತು.

AICC ಕಚೇರಿಯಲ್ಲಿ ಇನ್ನು ಕಾಣಿಸಿಕೊಳ್ಳದ ಖರ್ಗೆ ಭಾವಚಿತ್ರ

ಏರ್ ಇಂಡಿಯಾಗೆ ಇನ್ನು ಕೆಲವೇ ತಿಂಗಳುಗಳಲ್ಲಿ 5 ಬೋಯಿಂಗ್ ವಿಮಾನಗಳು ಸೇರ್ಪಡೆಗೊಳ್ಳುತ್ತಿರುವುದರಿಂದ ಪೈಲಟ್‍ಗಳ ಕೊರತೆ ಎದುರಾಗಿದೆ. ಈ ಕೊರತೆ ನೀಗಿಸುವ ಉದ್ದೇಶದಿಂದ ವಿದೇಶಿ ಪೈಲಟ್‍ಗಳ ಮೊರೆ ಹೋಗಲಾಗುತ್ತಿದೆ. ವಿದೇಶಿ ಪೈಲಟ್‍ಗಳ ವೇತನ ಭಾರತೀಯ ಪೈಲಟ್‍ಗಳಿಗಿಂತ ದುಪ್ಪಟ್ಟಾಗಿದ್ದರೂ ಅನಿವಾರ್ಯವಾಗಿ ಇಂತಹ ಸಾಹಸಕ್ಕೆ ಕೈ ಹಾಕುವಂತಾಗಿದೆ.

Air India, plans, hire, foreign, pilots, Boeing 777, fleet,

Articles You Might Like

Share This Article