ಪೂಜಾರ ಭೇಟಿ ಖುಷಿ ತಂದಿದೆ : ಪ್ರಧಾನಿ ಮೋದಿ

Social Share

ನವದೆಹಲಿ, ಫೆ. 15- ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ಪ್ರತಿನಿಸುತ್ತಿರುವ ಚೇತೇಶ್ವರ್ ಪೂಜಾರ ಅವರನ್ನು ಭೇಟಿ ಮಾಡಿದ ಕ್ಷಣ ನನ್ನಲ್ಲಿ ಸಂತಸ ಮೂಡಿಸಿದ್ದು, ಅವರ 100ನೇ ಟೆಸ್ಟ್ ಮತ್ತು ಮುಂದಿನ ಕ್ರಿಕೆಟ್ ಜೀವನ ಉತ್ತಮವಾಗಿರಲಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟ್ ಮಾಡಿ ಹಾರೈಸಿದ್ದಾರೆ.

` ನನ್ನ ಟೆಸ್ಟ್ ಜೀವನದ 100ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿರುವುದು ಹೆಮ್ಮೆಯ ಸಂಗತಿ. ಅವರ ಸಂವಹನ ಮತ್ತು ಪೊ್ರೀತ್ಸಾಹದಿಂದ ನನ್ನಲ್ಲಿ ಉತ್ಸಾಹ ಹೆಚ್ಚಿದೆ, ಧನ್ಯವಾದಗಳು’ ಎಂದು ಚೇತೇಶ್ವರ್ ಪೂಜಾ ಮರು ಟ್ವೀಟ್ ಮಾಡಿ ಪ್ರಧಾನಿಗೆ ಧನ್ಯವಾದ ತಿಳಿಸಿದ್ದಾರೆ.

ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಫೆಬ್ರವರಿ 17 ರಿಂದ ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳ ನಡುವೆ ಬಾರ್ಡರ್- ಗವಾಸ್ಕರ್ ಸರಣಿಯ 2ನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಇಂದು ಚೇತೇಶ್ವರ್ ಪೂಜಾರ ಅವರು ಪ್ರಧಾನಿ ಅವರನ್ನು ಭೇಟಿ ಮಾಡಿ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಚೇತೇಶ್ವರ್ ಪೂಜಾರ ತಮ್ಮ 99 ಟೆಸ್ಟ್ ಪಂದ್ಯಗಳಿಂದ 19 ಶತಕ ಹಾಗೂ 34 ಅರ್ಧಶತಕಗಳೊಂದಿಗೆ 7021 ರನ್ ಗಳಿಸಿದ್ದಾರೆ.

#Indiancricketer, #CheteshwarPujara, #PrimeMinister, #NarendraModi, #100thTestMatch,

Articles You Might Like

Share This Article