ಲಂಡನ್,ಮಾ.5- ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಭಾರತದಲ್ಲಿ ಪ್ರಜಾಪ್ರಭುತ್ವದ ಸಂಸ್ಥೆಗಳು ಕ್ರೂರ ದಾಳಿಗೆ ಒಳಗಾಗಿವೆ ಮತ್ತು ಗಂಭೀರ ಪ್ರಮಾಣದ ಹಾನಿಗೆ ತುತ್ತಾಗಿವೆ ಎಂದು ಆರೋಪಿಸಿದ್ದಾರೆ.
ಬ್ರಿಟನ್ ಪ್ರವಾಸದ ಭಾಗವಾಗಿ ಲಂಡನಲ್ಲಿ ಇರುವ ರಾಹುಲ್‍ಗಾಂಧಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನಿರುದ್ಯೋಗ, ಬೆಲೆ ಏರಿಕೆ, ಕೆಲವೇ ವ್ಯಕ್ತಿಗಳ ಬಳಿ ಸಂಪತ್ತು ಕ್ರೋಢಿಕರಣ ಮತ್ತು ಮಹಿಳಾ ದೌರ್ಜನ್ಯ ಪ್ರಕರಣಗಳಲ್ಲಿ ಪ್ರಸ್ತುತ ಸರ್ಕಾರದ ವಿರುದ್ಧ ಕಂಡು ಬರುತ್ತಿರುವ ಜನಾಕ್ರೋಶಕ್ಕೆ ಧ್ವನಿಯಾಗಲು ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಚರ್ಚೆಗಳು ನಡೆಯುತ್ತಿವೆ ಎಂದಿದ್ದಾರೆ.
ಪ್ರಧಾನಿ ವಿರುದ್ಧ ಸುದ್ದಿ ಸಂಸ್ಥೆ ಬಿಬಿಸಿ ಸಾಕ್ಷ್ಯ ಚಿತ್ರ ರಚನೆ ಮಾಡಿದೆ ಎಂಬ ಕಾರಣಕ್ಕೆ ಭಾರತದಲ್ಲಿದ್ದ ಬಿಬಿಸಿ ಕಚೇರಿಯ ದೆಹಲಿ ಮತ್ತು ಮುಂಬೈನಲ್ಲಿ ಆದಾಯ ತೆರಿಗೆ ದಾಳಿ ನಡೆಸಿದ್ದನ್ನು ರಾಹುಲ್‍ಗಾಂಧಿ ಉಲ್ಲೇಖಿಸಿದ್ದಾರೆ.
ಐಫೋನ್ ಘಟಕ ಸ್ಥಾಪನೆ ಕುರಿತು ಬೊಮ್ಮಾಯಿ ಸುಳ್ಳು ಹೇಳಿದ್ದಾರೆ : ಕಾಂಗ್ರೆಸ್
ಈ ರೀತಿಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಯತ್ನಿಸಿದ್ದರಿಂದಲೇ ತಾವು ಭಾರತ್ ಜೋಡೋ ಯಾತ್ರೆ ನಡೆಸಬೇಕಾಯಿತು. ಪ್ರಭುತ್ವ ಜನಾಕ್ರೋಶದ ಧ್ವನಿಯನ್ನು ಧಮನಿಸಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದ್ದಾರೆ.
ಮಾಧ್ಯಮ, ಸಾಂಸ್ಥಿಕ ಚೌಕಟ್ಟುಗಳು, ನ್ಯಾಯಾಂಗ, ಸಂಸತ್ತು ಎಲ್ಲವೂ ದಾಳಿಗೆ ಒಳಗಾಗಿವೆ. ಜನ ಸಾಮಾನ್ಯವ ಧ್ವನಿಗೆ ಬೆಂಬಲವೇ ಇಲ್ಲವಾಗಿದೆ. ಸುದ್ದಿವಾಹಿನಿಗಳು ಸರ್ಕಾರದ ವಿರುದ್ಧದ ಹೇಳಿಕೆಗಳನ್ನು ಪ್ರಸಾರ ಮಾಡದಂತೆ ತಡೆಯಲಾಗುತ್ತಿದೆ. ಕಳೆದ ಒಂಬತ್ತು ವರ್ಷಗಳಿಂದ ಇದು ನಿರಂತರವಾಗಿ ನಡೆಯುತ್ತಿದೆ. ಪತ್ರಕರ್ತರನ್ನು ಹೆದರಿಸಲಾಗುತ್ತಿದೆ, ಅವರ ಮೇಲೆ ದಾಳಿ ಮಾಡಲಾಗುತ್ತಿದೆ, ಬೆದರಿಕೆ ಹಾಕಲಾಗುತ್ತಿದೆ. ಇದರಿಂದಾಗ ಮಾಧ್ಯಮಗಳು ಏಕಮುಖವಾಗಿದ್ದು, ನಾವು ಸಕಾರಾತ್ಮಕ ಪ್ರಜಾಪ್ರತ್ವವನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.
ಅಮೆರಿಕಾ ಮತ್ತು ಯೂರೋಪ್ ಭಾಗಗಳು ಭಾರತದಲ್ಲಿನ ಪ್ರಜಾಪ್ರಭುತ್ವ ವೈಪಲ್ಯಗಳನ್ನು ಗಮನಿಸುವಲ್ಲಿ ವಿಫಲವಾಗಿವೆ. ಭಾರತ ಸಂಪೂರ್ಣವಾಗಿ ಮೌನವಾಗಿರಬೇಕೆಂದು ಬಿಜೆಪಿ ಬಯಸುತ್ತದೆ. ಹಾಗಾದಾಗ ಮಾತ್ರ ಭಾರತದ ಸಂಪತ್ತನ್ನು ತನ್ನ ಉದ್ಯಮಿ ಸ್ನೇಹಿತರಿಗೆ ನೀಡಲು ಸಾಧ್ಯವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಉಲ್ಲೇಖಿಸದೆ ರಾಹುಲ್‍ಗಾಂಧಿ ಆರೋಪಿಸಿದರು.
ಕಳೆದ ಮೂರು ದಿನಗಳ ಹಿಂದೆ ರಾಹುಲ್‍ಗಾಂಧಿ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಮಾಡಿದ ಭಾಷಣವನ್ನು ಬಿಜೆಪಿ ಟೀಕಿಸಿತ್ತು. ರಾಹುಲ್ ಗಾಂಧಿ ವಿದೇಶದಲ್ಲಿ ಭಾರತದ ಘನತೆಗೆ ಧಕ್ಕೆ ತರುತ್ತಿದ್ದಾರೆ ಎಂಬ ಆರೋಪಗಳನ್ನು ಬಿಜೆಪಿ ಬೆಂಬಲಿಗರು ಮಾಡಿದ್ದರು. ಕೇಂದ್ರ ಸಚಿವ ಅನುರಾಗ್‍ಸಿಂಗ್ ಠಾಕೂರ್ ತಮ್ಮ ಸುದ್ದಿಗೋಷ್ಠಿಯಲ್ಲಿ ರಾಹುಲ್ ವಿರುದ್ಧ ಕಠಿಣ ಟೀಕೆ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ರಾಹುಲ್‍ಗಾಂಧಿ, ನಾನು ನನ್ನ ದೇಶವನ್ನು ಗೌರವಿಸುತ್ತೇನೆ, ಅದರ ಘನತೆಯನ್ನು ಎತ್ತಿ ಹಿಡಿಯುತ್ತೇನೆ. ಚುನಾವಣೆ ಕಾಲದಲ್ಲಿ ಲಾಭ ಗಳಿಸಲು ಹಿಂದೆ ಪ್ರಧಾನಿ ವಿದೇಶಿ ಪ್ರವಾಸದಲ್ಲಿ ಭಾರತದ ಹಿಂದಿನ ಆಡಳಿತವನ್ನು ಟೀಕಿಸಿ ಅವಹೇಳನ ಮಾಡಿದ್ದರು. ಆಗ ಯಾರು ಪ್ರಶ್ನಿಸಲಿಲ್ಲ. ನಾನು ದೇಶದ ಘನತೆಗೆ ಧಕ್ಕೆ ತರುತ್ತಿಲ್ಲ. ದೇಶದ ಪ್ರಜಾಪ್ರಭುತ್ವಕ್ಕೆ ಆಗುತ್ತಿರುವ ಅನ್ಯಾಯವನ್ನು ಪ್ರಸ್ತಾಪಿಸುತ್ತಿದ್ದೇನೆ. ನನ್ನ ಮಾತುಗಳನ್ನು ತಿರುಚಿ ಟೀಕೆ ಮಾಡುವ ಮೂಲಕ ನನ್ನನ್ನು ಮೌನವಾಗಿರಿಸಲು ಸಾಧ್ಯವಿಲ್ಲ. ದೇಶದ ಸಂಪತ್ತನ್ನು ಒಂದಿಬ್ಬರಿಗೆ ಬಿಟ್ಟುಕೊಡುವ ಹುನ್ನಾರಕ್ಕೆ ತಟಸ್ಥವಾಗಿರಲು ಸಾಧ್ಯವಿಲ್ಲ ಎಂದಿದ್ದಾರೆ.
ಮತ್ತೊಂದು ಪ್ರಕರಣ : ವಿಮಾನದಲ್ಲಿ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜಿನೆ
ನಾನು ನನ್ನ ದೇಶದ ಮಾನಹಾನಿಯನ್ನು ಎಂದಿಗೂ ಮಾಡಿಲ್ಲ, ನನಗೆ ಅದರಲ್ಲಿ ಆಸಕ್ತಿ ಇಲ್ಲ, ನಾನು ಅದನ್ನು ಎಂದಿಗೂ ಮಾಡುವುದಿಲ್ಲ. ಬಿಜೆಪಿಯವರು ನಾನು ಹೇಳುವುದನ್ನು ತಿರುಚಲು ಇಷ್ಟಪಡುತ್ತಾರೆ. ನರೇಂದ್ರ ಮೋದಿ ವಿದೇಶಕ್ಕೆ ಹೋದಾಗ ಸ್ವತಂತ್ರ್ಯ ನಂತರ ಭಾರತದಲ್ಲಿ ಏನು ಆಗಿಲ್ಲ ಎಂದು ಹೇಳುತ್ತಾ, ಜಾಗತಿಕವಾಗಿ ಭಾರತವನ್ನು ದೀನ ಸ್ಥಿತಿಯಲ್ಲಿ ಬಿಂಬಿಸಿಲ್ಲವೇ. ತಮ್ಮ ಆಡಳಿತ ಅವಧಿಯಲ್ಲೇ ಎಲ್ಲ ಆಗಿದೆ ಎಂದು ಬೇರೆಯವರ ಸಾಧನೆಗಳನ್ನು ತಮ್ಮ ಕೊಡುಗೆ ಎಂದು ತೋರಿಸಿಕೊಳ್ಳಲು ಯತ್ನಿಸಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಮುಂದಿನ ಸಾರ್ವತ್ರಿಕ ಚುನಾವಣೆ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಹುಲ್‍ಗಾಂಧಿ, ಚುನಾವಣೆ ಎಂಬ ಸಂಘರ್ಷ ರಾಜಕೀಯ ಪಕ್ಷಗಳ ನಡುವೆ ಮಾತ್ರವಲ್ಲದೆ, ಕೆಲವು ಸಂಸ್ಥೆಗಳ ವಿರುದ್ಧವೂ ಆಗಿದೆ. ಆರ್‍ಎಸ್‍ಎಸ್ ಮತ್ತು ಬಿಜೆಪಿಯನ್ನು ಹೋರಾಡಿ ಸೋಲಿಸಬೇಕು ಎಂಬ ಮೂಲ ಕಲ್ಪನೆಯೊಂದಿಗೆ ಪ್ರತಿಪಕ್ಷಗಳು ಒಗ್ಗಟ್ಟು ಪ್ರದರ್ಶನ ಮಾಡುತ್ತಿವೆ. ಎಲ್ಲರಿಗೂ ಧಮಕಾರಿ ಪ್ರವೃತ್ತಿಯನ್ನು ಸೋಲಿಸಬೇಕು ಎಂಬ ಇರಾದೆಯಿದೆ ಎಂದಿದ್ದಾರೆ.
ಯುದ್ಧಕ್ಕೆ ಹೊರಟ ಸಾಮಂತರಿಗೆ ದಂಡನಾಯಕನ ಕೊರತೆ
ಮೋದಿ ಅವರ ಆಪ್ತ ಅದಾನಿ ಸರ್ಕಾರ ಪ್ರತಿಯೊಂದು ಟೆಂಡರ್ ಅನ್ನು ಗೆಲ್ಲುತ್ತಿದ್ದಾರೆ. ಅವರ ಸಂಪತ್ತು ಶತಕೋಟಿ ಡಾಲರ್ ಮೀರಿ ಬೆಳೆದಿದೆ. ಈ ಬಗ್ಗೆ ಪ್ರಧಾನಿ ಸ್ಪಷ್ಟನೆ ನೀಡಿಲ್ಲ ಎಂದರು. ಗಡಿಯಲ್ಲಿ ಚೀನಿಯರ ಪ್ರತಿಕೂಲ ಮತ್ತು ಆಕ್ರಮಣಕಾರಿ ನಡೆಗಳ ಬಗ್ಗೆ ಭಾರತವು ಬಹಳ ಜಾಗರೂಕರಾಗಿರಬೇಕು ಎಂದು ರಾಹುಲ್ ಹೇಳಿದರು.
Indian, democracy, attack, Rahul Gandhi, targets, Modi, govt, UK,