ಕಿಸಾನ್ ಸಮೃದ್ಧಿ ಕೇಂದ್ರಕ್ಕೆ ಚಾಲನೆ

Social Share

ನವದೆಹಲಿ,ಅ.17-ಪ್ರಧಾನಿ ನರೇಂದ್ರಮೋದಿ ಅವರು ಸಬ್ಸಿಡಿ ಸಹಿ0ತ ರಸಗೊಬ್ಬರಗಳಿಗಾಗಿ ಒಂದೇ ಬ್ರಾಂಡ್ ಭಾರತ್‍ನ್ನು ಪರಿಚಯಿಸಿದ್ದು, ದೇಶಾದ್ಯಂತ 600 ಕಿಸಾನ್ ಸಮೃದ್ದಿ ಕೇಂದ್ರಗಳಿಗೆ ಚಾಲನೆ ನೀಡಿದ್ದಾರೆ.

ದೆಹಲಿಯಲ್ಲಿ ನಡೆಯುತ್ತಿರುವ 2022ರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಎರಡು ದಿನಗಳ ಸಮ್ಮೇಳನದಲ್ಲಿ ಮೋದಿಯವರು ಭಾರತೀಯ ಜನ ಊರ್ವರಕ್ ಪರಿಯೋಜನೆ ಎಂಬ ಕಾರ್ಯಕ್ರಮದಡಿ ಒಂದು ದೇಶ, ಒಂದು ರಸಗೊಬ್ಬರ ಯೋಜನೆಯನ್ನು ಘೋಷಿಸಿದ್ದಾರೆ.

ಇನ್ನು ಮುಂದೆ ಸಬ್ಸಿಡಿ ದರದಲ್ಲಿ ಮಾರಾಟವಾಗುವ ಗೊಬ್ಬರವನ್ನು ಕಡ್ಡಾಯವಾಗಿ ಭಾರತ್ ಎಂಬ ಬ್ರಾಂಡ್‍ನಡಿ ಮಾರಾಟ ಮಾಡಬಹುದು. ಇನ್ನು ಮುಂದೆ ರಸಗೊಬ್ಬರದ ಸಾಗಾಟ ವೆಚ್ಚ ತಗ್ಗಲಿದ್ದು, ಗೊಬ್ಬರದ ಕೊರತೆ ಕೂಡ ಕಡಿಮೆಯಾಗಲಿದೆ.

ಡಿಎಪಿ, ಪೋಟಾಶ್, ಎಂಪಿಕೆ ಎಂಬ ಗೊಬ್ಬರಗಳು ಭಾರತ್ ಬ್ರಾಂಡ್‍ನಡಿ ವಿಕ್ರಯಗೊಳ್ಳಲಿದೆ. ದೇಶಾದ್ಯಂತ ಚಾಲ್ತಿಯಲ್ಲಿರುವ 3.3 ಲಕ್ಷ ರಸಗೊಬ್ಬರಗಳ ಮಾರಾಟ ಕೇಂದ್ರಗಳನ್ನು ಹಂತ ಹಂತವಾಗಿ ಪ್ರಧಾನಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳನ್ನಾಗಿ ಪರಿವರ್ತಿ ಸಲಾಗುತ್ತದೆ. ಇಲ್ಲಿ ರೈತರಿಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಒದಗಿಸುವ ಜೊತೆಗೆ ಅಗತ್ಯ ಮಾಹಿತಿ ಪೂರೈಸಲಾಗುವುದು ಎಂದು ಹೇಳಲಾಗಿದೆ.

ಇದೇ ವೇಳೆ ಪ್ರಧಾನಮಂತ್ರಿಯವರು ಕಿಸಾನ್ ಸಮ್ಮಾನ್ ಯೋಜನೆಯಡಿ 12ನೇ ಕಂತಿನ 16 ಸಾವಿರ ಕೋಟಿ ರೂ.ಗಳನ್ನು 11 ಕೋಟಿ ರೈತರಿಗೆ ಬಿಡುಗಡೆ ಮಾಡಿದ್ದಾರೆ.

Articles You Might Like

Share This Article