ಉಕ್ರೇನ್‍ನಲ್ಲಿ ಪಾಕಿಸ್ತಾನಿಯರಿಗೂ ನೆರವಾದ ತ್ರಿವರ್ಣ ಧ್ವಜ

Social Share

ಕ್ಯಿವ್,ಮಾ.2- ಭಾರತದ ತ್ರಿವರ್ಣ ಧ್ವಜ ಭಾರತೀಯರಿಗಷ್ಟೇ ಅಲ್ಲ ಪಾಕಿಸ್ತಾನ ಹಾಗೂ ತುರ್ಕೀಸ್ ವಿದ್ಯಾರ್ಥಿಗಳ ಜೀವಕ್ಕೂ ರಕ್ಷಣೆ ನೀಡಿದ್ದು, ಅಂತಿಮವಾಗಿ ಅಪಾಯದಿಂದ ಪಾರಾದ ಪಾಕಿಸ್ತಾನದ ವಿದ್ಯಾರ್ಥಿಗಳು ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗಿದ್ದಾರೆ.
ಯುದ್ಧಕಾಲದಲ್ಲಷ್ಟೇ ಶಾಂತಿಯ ಬೆಲೆ ತಿಳಿಯುತ್ತದೆ ಎಂಬ ನಾಣ್ಣುಡಿಯಂತೆ ಸಾಂಪ್ರದಾಯಿಕ ಎದುರಾಳಿಗಳೆಂದೇ ಬಿಂಬಿಸಲಾಗಿರುವ ಪಾಕಿಸ್ತಾನ ಮತ್ತು ಭಾರತದ ವಿದ್ಯಾರ್ಥಿಗಳ ಜೀವ ರಕ್ಷಣೆಗೆ ತ್ರಿವರ್ಣ ಧ್ವಜವೇ ಆಸರೆಯಾಗಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.
ಭಾರತೀಯ ವಿದ್ಯಾರ್ಥಿಗಳು ಕ್ಯಿವ್‍ನಿಂದ ಗಡಿ ಭಾಗದ ದೇಶಗಳಿಗೆ ತ್ರಿವರ್ಣ ರಾಷ್ಟ್ರಧ್ವಜವನ್ನು ಬಳಸಿ ಆಗಮಿಸುವಂತೆ ರಾಯಭಾರ ಕಚೇರಿ ಸೂಚನೆ ನೀಡಿತ್ತು. ಆದರೆ, ಯುದ್ಧ ಪೀಡಿತ ಭಾಗದಲ್ಲಿ ಸುಲುಕಿದ್ದ ವಿದ್ಯಾರ್ಥಿಗಳ ಬಳಿ ತ್ರಿವರ್ಣ ಧ್ವಜ ಇರಲಿಲ್ಲ.


ಆ ವೇಳೆ ನಾನು ಮಾರುಕಟ್ಟೆಗೆ ಓಡಿ ಹೋಗಿ ಒಂದಷ್ಟು ಬಟ್ಟೆ ಹಾಗೂ ಬಣ್ಣಗಳನ್ನು ಖರೀದಿಸಿ ತಂದೆ. ಬಟ್ಟೆಯನ್ನು ನಿರ್ದಿಷ್ಟ ಸ್ವರೂಪಕ್ಕೆ ಕತ್ತರಿಸಿ ಅದಕ್ಕೆ ತ್ರಿವರ್ಣ ಬಣ್ಣವನ್ನು ಲೇಪಿಸಿ ಧ್ವಜ ತಯಾರು ಮಾಡಿಕೊಂಡೆವು.ಅದನ್ನು ಹಿಡಿದು ಹೊರ ಬರುವಾಗ ಪಾಕಿಸ್ತಾನ ಹಾಗೂ ತುರ್ಕೀಸ್ ವಿದ್ಯಾರ್ಥಿಗಳು ನಮ್ಮ ಜತೆಗೆ ಬಂದರು. ರಾಷ್ಟ್ರಧ್ವಜ ನಮ್ಮ ಬಳಿ ಇದ್ದುದ್ದರಿಂದ ಉಕ್ರೇನ್ ಸೈನಿಕರು ತೊಂದರೆ ನೀಡಲಿಲ್ಲ.
ಸರಾಗವಾಗಿ ಗಡಿ ಭಾಗಕ್ಕೆ ಪ್ರಯಾಣ ಮಾಡಿದೆವು ಎಂದು ದಕ್ಷಿಣ ಉಕ್ರೇನ್‍ನ ಒಡೆಸ್ಸಾದಿಂದ ಪರಾಗಿ ಬಂದ ವೈದ್ಯಕೀಯ ವಿದ್ಯಾರ್ಥಿ ಹೇಳಿದ್ದಾರೆ. ಒಡೆಸ್ಸಾದಿಂದ ನಾವು ಮಾಲ್ಡೋವಾಗೆ ಬಸ್‍ನಲ್ಲಿ ಪ್ರಯಾಣ ಮಾಡಿದೆವು. ಮಾಲ್ಡೋವಾದ ಪ್ರಜೆಗಳು ಒಳ್ಳೆಯವರು.
ನಮಗೆ ಉಚಿತ ಆಶ್ರಯ ಮತ್ತು ಟ್ಯಾಕ್ಸಿಗಳನ್ನು ಒದಗಿಸಿ ರೊಮೆನಿಯಾ ತಲುಪಲು ಸಹಾಯ ಮಾಡಿದರು. ಯಾವುದೇ ಸಮಸ್ಯೆಯಾಗದಂತೆ ನಾವು ಸುರಕ್ಷಿತ ತಾಣಕ್ಕೆ ಆಗಮಿಸಿದೆವು. ಅಲ್ಲಿ ಭಾರತ ರಾಯಭಾರ ಕಚೇರಿ ಅಕಾರಿಗಳು ಆಹಾರ ಹಾಗೂ ವಸತಿ ವ್ಯವಸ್ಥೆ ಮಾಡಿದರು.
ವಿಮಾನಗಳು ನಮಗಾಗಿ ಕಾಯುತ್ತಿದ್ದವು ಎಂದಿದ್ದಾರೆ. ಈ ನಡುವೆ ನಮ್ಮೊಂದಿಗೆ ಪಾರಾಗಿ ಬಂದ ಪಾಕಿಸ್ತಾನ ಹಾಗೂ ತುರ್ಕೀಸ್‍ನ 7 ಮಂದಿ ವಿದ್ಯಾರ್ಥಿಗಳು ಧನ್ಯವಾದ ಹೇಳಿದ್ದಲ್ಲದೆ. ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗಿದರು ಎಂದು ಭಾರತೀಯ ವಿದ್ಯಾರ್ಥಿಗಳು
ತಿಳಿಸಿದ್ದಾರೆ.

Articles You Might Like

Share This Article