Wednesday, May 31, 2023
Homeಅಂತಾರಾಷ್ಟ್ರೀಯಸಿಂಗಾಪುರದಲ್ಲಿ 5 ಮಿಲಿಯನ್ ವಂಚಿಸಿದ ಭಾರತೀಯನಿಗೆ 30 ತಿಂಗಳ ಸಜೆ

ಸಿಂಗಾಪುರದಲ್ಲಿ 5 ಮಿಲಿಯನ್ ವಂಚಿಸಿದ ಭಾರತೀಯನಿಗೆ 30 ತಿಂಗಳ ಸಜೆ

- Advertisement -

ಸಿಂಗಾಪುರ,ಮೇ.26- ತಾನು ಕೆಲಸ ಮಾಡುತ್ತಿದ್ದ ಸಂಸ್ಥೆಗೆ 5.1 ಮಿಲಿಯನ್ ಡಾಲರ್ ಹಣ ವಂಚಿಸಿದ ಆರೋಪದ ಮೇಲೆ ಸಿಂಗಾಪುರದಲ್ಲಿ ನೆಲೆಸಿರುವ ಭಾರತೀಯ ಮೂಲದ ವ್ಯಕ್ತಿಗೆ 30 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಶಿಕ್ಷೆಗೊಳಗಾಗಿರುವ ಭಾರತೀಯ ಮೂಲದ ವ್ಯಕ್ತಿಯನ್ನು ಹುಸೇನ್ ನೈನಾ ಮೊಹಮ್ಮದ್ (47) ಎಂದು ಗುರುತಿಸಲಾಗಿದೆ.

ಈತ ಸಿಂಗಾಪುರದ ಕಟ್ಟಡ ನಿರ್ಮಾಣ ಸಂಸ್ಥೆ ಉಟ್ರಾಕಾನ್ ಕಾರ್ಪ್‍ನಲ್ಲಿ ಕೆಲಸ ಮಾಡುತಿದ್ದು, ಅಲ್ಲಿನ ಅಕೌಂಟ್‍ನಿಂದ ತನಗೆ ನೇರ ಸಂಬಂಧವಿರುವ ಸಂಸ್ಥೆಗಳಿಗೆ ಅಕ್ರಮವಾಗಿ ಕೋಟ್ಯಂತರ ರೂ. ಹಣ ವರ್ಗಾವಣೆ ಮಾಡಿದ ಆರೋಪ ಎದುರಿಸುತ್ತಿದ್ದ. ಆತ ತಾನು ಮಾಡಿರುವ ತಪ್ಪಿನ ಬಗ್ಗೆ ತನಿಖಾಧಿಕಾರಿಗಳಿಗೆ ತಿಳಿಸಿದ್ದು, ತನ್ನ ತಂದೆ-ತಾಯಿಯ ಮನೆಯ ಖರ್ಚನ್ನು ಭರಿಸಲು ಈ ಹಣವನ್ನು ಭಾರತಕ್ಕೆ ಕಳುಹಿಸಿರುವುದಾಗಿ ತಿಳಿಸಿದ್ದಾನೆ.

ಸಂಸತ್ ಭವನ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳುತ್ತೇನೆ : ಹೆಚ್‌ಡಿಡಿ

ಏಕೆಂದರೆ ಅವನು ಪಾಲುದಾರನಾಗಿದ್ದ ಅಲ್ ರೆಹಮಾನ್ ಎಂಟರ್‍ಪ್ರೈಸಸ್ ಟ್ರೇಡಿಂಗ್ (ಅರೆಟ) ನಲ್ಲಿ ಭಾಗಿಯಾಗಲು ಉಟ್ರಾಕಾನ್ ಸಂಸ್ಥೆಯ ಹಣ ದುರುಪಯೋಗಪಡಿಸಿಕೊಂಡಿದ್ದ ಎನ್ನಲಾಗಿದೆ.

ಅಕ್ರಮ ಪಾವತಿಗಳು 2009 ಮತ್ತು 2019 ರ ನಡುವೆ ನಡೆದಿವೆ, ಇದು ಉಟ್ರಾಕಾನ್‍ಗೆ ಕನಿಷ್ಠ 5 ಮಿಲಿಯನ್ ಹಣ ನಷ್ಟವನ್ನು ಉಂಟುಮಾಡಿದೆ ಎಂದು ಸಿಂಗಾಪುರ್ ದೈನಂದಿನ ಪತ್ರಿಕೆ ವರದಿ ಮಾಡಿದೆ.

Indian, #Jailed, #Cheating, #Singapore, #ConstructionCompany, #5.1Million

- Advertisement -
RELATED ARTICLES
- Advertisment -

Most Popular