ಹಾಂಗ್‍ಕಾಂಗ್,ಸೆ.13-ದಕ್ಷಿಣ ಕೋರಿಯಾದ ಪ್ರವಾಸಿಗರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಭಾರತೀಯ ಮೂಲದ ವ್ಯಕ್ತಿಯನ್ನು ಹಾಂಗ್‍ಕಾಂಗ್ ಪೊಲೀಸರು ಬಂಧಿಸಿದ್ದಾರೆ. ಕೋರಿಯಾ ಮಹಿಳೆ ಹಾಂಗ್ ಕಾಂಗ್‍ನಲ್ಲಿ ತನ್ನ ದಿನದ ಪ್ರವಾಸದ ಚಿತ್ರಿಕರಣ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.
ಚಿತ್ರಿಕರಣದ ಸಂದರ್ಭದಲ್ಲಿ ಸಭ್ಯನಂತೆ ಮಾತನಾಡಿದ ವ್ಯಕ್ತಿ ನಂತರ ಅವನು ಅವಳ ಕೈಯನ್ನು ಹಿಡಿದು, ಕೇಳು, ನನ್ನೊಂದಿಗೆ ಬಾ. ನಾನು ಒಬ್ಬಂಟಿಯಾಗಿದ್ದೇನೆ ಎಂದು ಆಕೆಯನ್ನು ತಬ್ಬಿಕೊಳ್ಳಲು ಪ್ರಯತ್ನಿಸಿದ ಎಂಬ ಆರೋಪ ಕೇಳಿಬಂದಿದೆ.
ನಿಗದಿತ ಕೇಂದ್ರದಲ್ಲಿ ಅಂಚೆ ಮತ ಚಲಾವಣೆ ಕಡ್ಡಾಯ: ಕೇಂದ್ರ ಸರ್ಕಾರ
ಬೇಡ ಎಂದರೂ ಪಟ್ಟುಬಿಡದ ಆತ ಆಕೆಯನ್ನು ಹಿಂಬಾಲಿಸಿ ಅಸಭ್ಯವಾಗಿ ವರ್ತಿಸಿದ್ದೇ ಅಲ್ಲದೆ ಚುಂಬಿಸಲು ಮುಂದಾದ ಎಂಬ ಆರೋಪದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತನ ಎಲ್ಲಾ ಕುಚೇಷ್ಟೆಗಳು ವೀಡಿಯೊದಲ್ಲಿ ಸೆರೆಯಾಗಿದ್ದು, ಆತನ ವರ್ತನೆಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಆಕ್ರೋಶವನ್ನು ಹುಟ್ಟುಹಾಕಿದೆ.ಘಟನೆಯ ನಂತರ, ವ್ಲಾಗರ್ ಮಕಾವುಗೆ ಪ್ರಯಾಣ ಬೆಳೆಸಿದಳು, ಅಲ್ಲಿ ಅವಳು ತನ್ನ ಸಂಕಟವನ್ನು ಮತ್ತೊಂದು ಲೈವ್‍ಸ್ಟ್ರೀಮ್‍ನಲ್ಲಿ ಹಂಚಿಕೊಂಡಳು ಮತ್ತು ದಾಳಿಯ ಸಮಯದಲ್ಲಿ ತನಗೆ ಉಂಟಾದ ಮೂಗೇಟುಗಳನ್ನು ಸಹ ತೋರಿಸಿದಳು.
#IndianMan, #Arrested, #AllegedlyMolesting, #SouthKoreanWoman, #HongKong,