ಜಗತ್ತನ್ನು ಆರೋಗ್ಯಕರ ತಾಣವನ್ನಾಗಿಸುವ ಭಾರತೀಯ ಸಿರಿಧಾನ್ಯಗಳು

Social Share

ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ 2023 ರಲ್ಲಿ ಒಟ್ಟಿಗೆ ಚೇತರಿಸಿಕೊಳ್ಳಿ, ಬಲಶಾಲಿಯಾಗಿ ಚೇತರಿಸಿಕೊಳ್ಳಿ ಎಂಬ ಜಿ-20 ಧ್ಯೇಯದೊಂದಿಗೆ, ಭಾರತವು ತನ್ನ ಪೌಷ್ಟಿಕಾಂಶಯುಕ್ತ ಸಿರಿಧಾನ್ಯಗಳ ರಫ್ತಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಜಗತ್ತನ್ನು ಆರೋಗ್ಯಕರ ತಾಣವನ್ನಾಗಿ ಮಾಡಲು ಸಿದ್ಧವಾಗಿದೆ.

ಸಾಂಪ್ರದಾಯಿಕವಾಗಿ ಬೆಳೆದ ಆರೋಗ್ಯಕರ ಪೌಷ್ಟಿಕಾಂಶಯುಕ್ತ ಏಕದಳ ಧಾನ್ಯಗಳು ಭಾರತದ ಹೊಸ ಗುರುತಾಗುತ್ತಿವೆ. ಸಜ್ಜೆ, ರಾಗಿ, ನವಣೆ, ಜೋಳ ಮತ್ತು ಬಕ್ವೀಟ್ ಈಗ ಜಾಗತಿಕವಾಗಿ ಸೇವಿಸುವ ಧಾನ್ಯಗಳಾಗಿವೆ.

ಕೋವಿಡ್-19, ಹವಾಮಾನ ಬದಲಾವಣೆ, ಕ್ಯಾಲೋರಿ ಸೇವನೆಯ ಬಗೆಗಿನ ಅರಿವು ಈ ಸ್ಮಾರ್ಟ್ ಆಹಾರ ಮತ್ತು ಅದರ ಪೌಷ್ಟಿಕಾಂಶದ ಪ್ರಯೋಜನಗಳ ಕಡೆಗೆ ಜಗತ್ತನ್ನು ತಿರುಗಿಸಿವೆ. ಜಾಗತಿಕವಾಗಿ ಶೇ.19 ರಷ್ಟು ಪಾಲನ್ನು ಹೊಂದಿರುವ ಭಾರತವು ಸಿರಿಧಾನ್ಯಗಳ ಅತಿದೊಡ್ಡ ಉತ್ಪಾದಕ ದೇಶವಾಗಿದ್ದು, ಸಿರಿಧಾನ್ಯಗಳಲ್ಲಿ ಕ್ರಾಂತಿಯನ್ನು ತರುವ ಮತ್ತು ಎಪಿಇಡಿಎ (ಅಪೆಡಾ) ಯ ಮಾರುಕಟ್ಟೆ ತಂತ್ರದೊಂದಿಗೆ ಜಾಗತಿಕ ಸಿರಿಧಾನ್ಯ ಆಮದುಗಳನ್ನು ಗುರಿಯಾಗಿಸಿಕೊಂಡು ಭಾರತದ ರಫ್ತುಗಳಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರುವ ಸಂಪೂರ್ಣ ಜವಾಬ್ದಾರಿಯನ್ನು ಇದು ವಹಿಸಿಕೊಂಡಿದೆ.

ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಬಿಗ್ ರಿಲೀಫ್, ಜಾಮೀನು ಮಂಜೂರು

ಸಿರಿಧಾನ್ಯ ರಫ್ತು ಉತ್ತೇಜನಾ ಕಾರ್ಯತಂತ್ರದ ಭಾಗವಾಗಿ, ವಿವಿಧ ಪೌಷ್ಟಿಕಾಂಶದ ಮೌಲ್ಯಗಳೊಂದಿಗೆ ವ್ಯಾಪಕ ಶ್ರೇಣಿಯ ಮೌಲ್ಯರ್ವತ ನವೀನ ಉತ್ಪನ್ನಗಳನ್ನು ಪ್ರದರ್ಶಿಸುವ ಮೂಲಕ ಉನ್ನತ ವ್ಯಾಪಾರದ 100 ರಾಷ್ಟ್ರಗಳ ನಡುವೆ ಜಾಗೃತಿ ಮೂಡಿಸಲು, ಖರೀದಿದಾರರಿಗೆ ಭಾರತವು ಒದಗಿಸುವ ವಿಶಿಷ್ಟ ಉತ್ಪನ್ನಗಳನ್ನು ಪ್ರದರ್ಶಿಸಲು ಮತ್ತು ಅಂತಿಮವಾಗಿ ಪ್ರಪಂಚದಾದ್ಯಂತದ ಪ್ರತಿಯೊಂದು ಆಹಾರ ಪದ್ಧತಿ ಮತ್ತು ಪ್ರತಿ ಊಟದಲ್ಲಿ ಭಾರತೀಯ ಸಿರಿಧಾನ್ಯಗಳಿಗೆ ಸ್ಥಳವನ್ನು ಭದ್ರಪಡಿಸಲು ಅಪೆಡಾ ಸಂಸ್ಥೆಯು ಸಮಾವೇಶವನ್ನು ಆಯೋಜಿಸಿತು.

ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಅಪೆಡಾ), 2025 ರ ವೇಳೆಗೆ 100 ಮಿಲಿಯನ್ ಡಾಲರ್ ಗುರಿಯನ್ನು ಸಾಸಲು ಯೋಜಿಸಿದೆ.

ಭಾರತದ ಸಾಮಥ್ರ್ಯವನ್ನು ಮೌಲ್ಯಮಾಪನ ಮಾಡುವ ಸಮಗ್ರ ಜಾಗತಿಕ ಮಾರುಕಟ್ಟೆ ಪ್ರಚಾರ ಅಭಿಯಾನವನ್ನು ಸಿದ್ಧಪಡಿಸಲಾಗುತ್ತಿದೆ. ಅದರಂತೆ 30 ಆಮದು ರಾಷ್ಟ್ರಗಳು ಮತ್ತು 21 ಸಿರಿಧಾನ್ಯ ಬೆಳೆಯುವ ರಾಜ್ಯಗಳ ಇ-ಕ್ಯಾಟಲಾಗ್ ಅನ್ನು ಸಿದ್ಧಪಡಿಸಲಾಗಿದೆ ಮತ್ತು ಸಿರಿಧಾನ್ಯ ಮತ್ತು ಅವುಗಳ ಮೌಲ್ಯರ್ವತ ಉತ್ಪನ್ನಗಳ ರಫ್ತಿಗೆ ಉತ್ತೇಜನ ನೀಡಲು ವರ್ಚುವಲ್ ಟ್ರೇಡ್ ಫೇರ್ ವೇದಿಕೆಯನ್ನು ಪ್ರಾರಂಭಿಸಲಾಗಿದೆ.

ಭಾರತದ ಸಿರಿಧಾನ್ಯಗಳ ರಫ್ತು ಮುಖ್ಯವಾಗಿ ಸಂಪೂರ್ಣ ಧಾನ್ಯಗಳನ್ನು ಒಳಗೊಂಡಿರುತ್ತದೆ ಮತ್ತು ಭಾರತದಿಂದ ಸಿರಿಧಾನ್ಯಗಳ ಮೌಲ್ಯರ್ವತ ಉತ್ಪನ್ನಗಳ ರಫ್ತು ಅತ್ಯಲ್ಪವಾಗಿದೆ. ನೂಡಲ್ಸï, ಪಾಸ್ತಾ, ಬೆಳಗಿನ ಉಪಾಹಾರದ ಮಿಶ್ರಣ, ಬಿಸ್ಕತ್ತುಗಳು, ಕುಕೀಸï, ತಿಂಡಿಗಳು, ಸಿಹಿತಿಂಡಿಗಳಂತಹ ರೆಡಿ-ಟು-ಈಟ್ ಮತ್ತು ರೆಡಿ-ಟು-ಸರ್ವ್ ವಿಭಾಗದಲ್ಲಿ ಮËಲ್ಯರ್ವತ ಉತ್ಪನ್ನಗಳ ರಫ್ತು ಉತ್ತೇಜನಕ್ಕಾಗಿ ಸರ್ಕಾರವು ಸ್ಟಾರ್ಟ್ ಅಪ್‍ಗಳನ್ನು ಸಜ್ಜುಗೊಳಿಸುತ್ತಿದೆ.

ಭಾರತವು ಸಿರಿಧಾನ್ಯ ರಫ್ತು ಮಾಡುವ ಪ್ರಮುಖ ದೇಶಗಳೆಂದರೆ ಯುಎಇ, ನೇಪಾಳ, ಸೌದಿ ಅರೇಬಿಯಾ, ಲಿಬಿಯಾ, ಓಮನï, ಈಜಿಪ್ಟï, ಟುನೀಶಿಯಾ, ಯೆಮೆನ್, ಯುಕೆ ಮತ್ತು ಅಮೆರಿಕಾ. ಭಾರತದಿಂದ ರಫ್ತು ಮಾಡುವ ಸಿರಿಧಾನ್ಯ ವಿಧಗಳಲ್ಲಿ ಸಜ್ಜೆ, ರಾಗಿ, ನವಣೆ, ಜೋಳ ಮತ್ತು ಬಕ್ವೀಟ್ ಸೇರಿವೆ. ಜೋಳ, ನವಣೆ, ಸಜ್ಜೆ ಮತ್ತು ರಾಗಿಯ ರಫ್ತಿಗೆ ಉತ್ತಮ ಬೆಲೆ ನೀಡುವಲ್ಲಿ ಅಮೆರಿಕಾ ಅಗ್ರಸ್ಥಾನದಲ್ಲಿದೆ.

ಮಾಡಾಳ್ ಮಿಸ್ಸಿಂಗ್ : ಹುಡುಕಿಕೊಡುವಂತೆ ಕಾಂಗ್ರೆಸ್ ಪೋಸ್ಟರ್ ಪಾಲಿಟಿಕ್ಸ್

ಸೌದಿ ಅರೇಬಿಯಾ ಬಕ್ವೀಟ್ ಮತ್ತು ಇತರ ಸಿರಿಧಾನ್ಯ ರಫ್ತುಗಳ ಮೇಲೆ ಉತ್ತಮ ಆದಾಯವನ್ನು ನೀಡಿದೆ. ಸಾಮಾನ್ಯವಾಗಿ, ಜೋಳ ಮತ್ತು ಇತರ ಸಿರಿಧಾನ್ಯಗಳಿಗೆ ಹೋಲಿಸಿದರೆ ಬಕ್ವೀಟ್ ಹೆಚ್ಚಿನ ಬೆಲೆಗಳನ್ನು ಪಡೆದಿದೆ. ವಿಶ್ವದ ಪ್ರಮುಖ ಸಿರಿಧಾನ್ಯ ಆಮದು ಮಾಡಿಕೊಳ್ಳುವ ದೇಶಗಳೆಂದರೆ ಇಂಡೋನೇಷ್ಯಾ, ಬೆಲ್ಜಿಯಂ, ಜಪಾನï, ಜರ್ಮನಿ, ಮೆಕ್ಸಿಕೋ, ಇಟಲಿ, ಅಮೆರಿಕಾ, ಯುಕೆ, ಬ್ರೆಜಿಲ್ ಮತ್ತು ನೆದಲ್ರ್ಯಾಂಡ್ಸ್.

ಪ್ರತಿ ಆಹಾರ ಪದ್ಧತಿಯಲ್ಲಿ ಆಹಾರದ ಪ್ರಧಾನ ಭಾಗವಾಗಿ ಸಿರಿಧಾನ್ಯವನ್ನು ಒಳಗೊಳ್ಳುವ ಉದ್ದೇಶದಿಂದ ಪ್ರಪಂಚದಾದ್ಯಂತ ಸಿರಿಧಾನ್ಯಗಳನ್ನು ಉತ್ತೇಜಿಸುವಲ್ಲಿ ಭಾರತವು ಮುಂಚೂಣಿಯಲ್ಲಿದೆ.

  • ಡಾ. ಎಂ ಅಂಗಮುತ್ತು
    ಅಧ್ಯಕ್ಷರು, ಎಪಿಇಡಿಎ(ಅಪೆಡಾ)
  • Indian, millets, healthier, future,

Articles You Might Like

Share This Article