ಕ್ಯಾಲಿಫೋರ್ನಿಯ,ಅ.6- ಅಮೆರಿಕದ ಸೆಂಟ್ರಲ್ ಕ್ಯಾಲಿಫೋರ್ನಿಯಾದಿಂದ ಅಪಹರಣಗೊಂಡಿದ್ದ ಭಾರತೀಯ ಮೂಲದ ಕುಟುಂಬದವರ ಶವಗಳು ಮರ್ಸಿಡ್ ಕೌಂಟಿಯ ಹಣ್ಣಿನ ತೋಟದಲ್ಲಿ ಪತ್ತೆಯಾಗಿವೆ.
ಎರಡು ದಿನಗಳ ಹಿಂದೆ ಬಂಧೂಕಿನಿಂದ ಬೆದರಿಸಿ ದುಷ್ಕರ್ಮಿಗಳು 8 ತಿಂಗಳ ಹೆಣ್ಣು ಮಗು ಅರೂಹಿ ಧೇರಿ, ತಾಯಿ ಜಸ್ಲೀನ್ ಕೌರ್( 27), ತಂದೆ ಜಸ್ದೀಪ್ ಸಿಂಗ್ (36) ಮತ್ತು ಸಂಬಂದಿ ಅಮನದೀಪ್ ಸಿಂಗ್( 39)ರನ್ನು ಅಪಹರಿಸಲಾಗಿತ್ತು.
ಘಟನೆ ಬಗ್ಗೆ ತನಿಖೆ ನಡೆಯುತ್ತಿದ್ದು ಜಸ್ದೀಪ್ ಸಿಂಗ್ ಅವರು ಉದ್ಯಮಿಯಾಗಿದ್ದು ಮರ್ಸೆಡ್‍ನಲ್ಲಿ ಕಛೇರಿ ಇದೆ. ದುಷ್ಕರ್ಮಿಗಳು ಹಣ ಸುಲಿಗೆ ಮಾಡಲು ಪ್ರಯತ್ನಿಸಿದ್ದು, ಶೀಘ್ರದಲ್ಲೇ ಬಂದಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಅಪರಣಗೊಂಡಿದ್ದ ಒಬ್ಬರ ಎಟಿಎಂ ಕಾರ್ಡ್‍ಅನ್ನು ಮರ್ಸಿಡ್‍ನಿಂದ ಉತ್ತರಕ್ಕೆ ಸುಮಾರು 14 ಕಿಲೋಮೀಟರ್ ಅಟ್‍ವಾಟರ್‍ನಲ್ಲಿ ಬಳಸಲಾಗಿದೆ. ಇವರನ್ನು ಕಾರ್ಖಾನೆಗೂ ಕರೆದೊಯ್ದು ಹಿಂಸಿಸಲಾಗಿದೆ ಅದರೆ ಅಲ್ಲಿ ಎನ್ನನೂ ದೋಚಿಲ್ಲ ಎಂದು ಕಾರ್ಮಿಕರು ತಿಳಿಸಿದ್ದಾರೆ. ಈ ಘಟನೆ ಹಿಂದೆ ಶಂಕಿತನೊಬ್ಬನನ್ನು ವಶಕ್ಕೆ ಪಡೆಯಲಾಗಿದೆ. ಈ ದುರಂತ ದುರಾದೃಷ್ಠಕರ ಎಂದು ಹೇಳಿದ್ದಾರೆ.