ವಾಷಿಂಗ್ಟನ್,ಜ.22- ಅಮೆರಿಕಾರದಲ್ಲಿ ನಡೆದ ಇನ್ನೊಂದು ದರೋಡೆ ಪ್ರಕರಣದಲ್ಲಿ ಭಾರತೀಯ ಮೂಲಕ ಮತ್ತೊಬ್ಬ ಗುಂಡೇಟಿನಿಂದ ಹತ್ಯೆಯಾಗಿದ್ದಾರೆ.
ಅಮೆರಿಕದ ಫಿಲಡೆಲಿಯಾ ನಗರದಲ್ಲಿ ಗ್ಯಾಸ್ಸ್ಟೇಷನ್ ಉದ್ಯೋಗಿಯಾಗಿದ್ದ 66 ವರ್ಷದ ಭಾರತೀಯ ಮೂಲದ ಪಾತ್ರೋ ಸಿಬೊರಾಮ್ ಕೊಲೆಯಾಗಿದ್ದಾರೆ. ಗ್ಯಾಸ್ಸ್ಟೇಷನ್ಗೆ ಹೊಂದಿಕೊಂಡಿರುವ ಮಿನಿ ಮಾರ್ಟ್ಗೆ ನುಗ್ಗಿದ ಮೂವರು ಮುಸುಕುಧಾರಿಗಳು ಸಿಬ್ಬಂದಿಯಾಗಿದ್ದ ಪಾತ್ರೋ ಮೇಲೆ ದಾಳಿ ಮಾಡಿದ್ದಾರೆ.
ಹಿಂದಿನಿಂದ ಗುಂಡು ಹಾರಿಸಿದ್ದು ಬೆನ್ನು ಮೂಲಕ ಒಳನುಗ್ಗಿದ ಗುಂಡುಗಳು ಗಂಭೀರವಾಗಿ ಗಾಯಗೊಳಿಸಿವೆ. ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಮೃತಪಟ್ಟಿರುವುದಾಗಿ ಘೋಷಿಸಲಾಗಿದೆ.
ಆರೋಗ್ಯಯುತ ಜೀವನಕ್ಕೆ ಯೋಗಾಸನ ರಹದಾರಿ: ಸಚಿವ ಅಶೋಕ್
ಆರೋಪಿಗಳು ಮಿನಿ ಮಾರ್ಟ್ನಲ್ಲಿದ್ದ ಹಣದೊಂದಿಗೆ ಪರಾರಿಯಾಗಿದ್ದಾರೆ. ಪೊಲೀಸರು ಸಿಸಿಟಿವಿಯನ್ನು ಪರಿಶೀಲಿಸಿದ್ದು, ವಿಡಿಯೋ ಬಿಡುಗಡೆ ಮಾಡಿ ಆರೋಪಿಗಳ ಗುರುತು ಪತ್ತೆಗೆ ಸಹಕರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಆರೋಪಿಗಳ ಸುಳಿವು ನೀಡಿದವರಿಗೆ 20 ಸಾವಿರ ಡಾಲರ್ ಬಹುಮಾನ ಘೋಷಿಸಲಾಗಿದೆ.
ಕೊಲೆಯಾದ ಪಾತ್ರೋ ಕುರಿತು ಗ್ರಾಹಕರು ಸದಾಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆತ ಉತ್ತಮ ವ್ಯಕ್ತಿಯಾಗಿದ್ದರು. ಇತ್ತೀಚೆಗಷ್ಟೆ ವಿದೇಶ ಪ್ರವಾಸ ಮುಗಿಸಿ ವಾಪಾಸ್ ಬಂದು ಕೆಲಸ ಮುಂದುವರೆಸಿದ್ದರು. ಗ್ರಾಹಕರಿಗೆ ಉತ್ತಮ ಸಹಾಯಗಳನ್ನು ಮಾಡುತ್ತಿದ್ದರು ಎಂದು ಹೇಳಲಾಗಿದೆ.
ಬಾಲಕನನ್ನ ಕೊಂದು ತಿಂದ ಚಿರತೆ, ಅರಣ್ಯ ಇಲಾಖೆ ವಿರುದ್ಧಗ್ರಾಮಸ್ಥರ ಆಕ್ರೋಶ
ಅಮೆರಿಕಾರದಲ್ಲಿ ಹತ್ಯೆಯಾಗುತ್ತಿರುವ ಎರಡನೇ ಭಾರತೀಯ ಪಾತ್ರೋ ಆಗಿದ್ದಾರೆ. ಕಳೆದ ಸೆಪ್ಟಂಬರ್ನಲ್ಲಿ ಮಿಸ್ಸಿಸ್ಸಿಪ್ಪಿಯ ಟುಪೆಲೋದಲ್ಲಿನ ಪೆಟ್ರೋಲ್ ಬಂಕ್ನಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರ ಹತ್ಯೆಯಾಗಿತ್ತು. ಅಮೆರಿಕಾದ ಪೆಟ್ರೋಲ್ ಬಂಕ್ಗಳಲ್ಲಿ ಕೆಲಸ ಮಾಡಲು ಭಾರತ ಸೇರಿದಂತೆ ದಕ್ಷಿಣ ಏಷ್ಯಾದ ವ್ಯಕ್ತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಈ ಹತ್ಯೆಗಳು ಅವರನ್ನು ಬೆದರಿಸುತ್ತಿವೆ.
Indian, origin, man, killed, robbery, US, petrol, station,