ಮಾದಕವಸ್ತು ಕಳ್ಳಸಾಗಣೆ : ಭಾರತೀಯ ಮೂಲದ ವ್ಯಕ್ತಿಗೆ ಸಿಂಗಾಪುರದಲ್ಲಿ ಮರಣದಂಡನೆ

ಕೌಲಾಲಂಪುರ್, ಏ.21 – ಮಾನಸಿಕ ಅಸ್ವಸ್ಥ ಎನ್ನಲಾದ ಮತ್ತು ಮಾದಕವಸ್ತು ಕಳ್ಳಸಾಗಣೆಯಲ್ಲಿ ಅಪರಾಧಿಯಾಗಿರುವ ಭಾರತೀಯ ಮೂಲದ ಮಲೇಷಿಯಾದ ವ್ಯಕ್ತಿಗೆ ಸಿಂಗಾಪುರದ ಚಾಂಗಿ ಜೈಲಿನಲ್ಲಿ ಬುಧವಾರ ಗಲ್ಲಿಗೇರಿಸಲು ಸಿದ್ದತೆ ನಡೆದಿದೆ ಕಳೆದ 2009 ರಲ್ಲಿ ನಾಗೇಂದ್ರನ್ ಧರ್ಮಲಿಂಗಂ (34)ಅವರನ್ನು ಹೆರಾಯಿನ್ ಕಳ್ಳಸಾಗಣೆ ಆರೋಪದ ಮೇಲೆ ಬಂಧಿಸಲಾಗಿತ್ತು ಮತ್ತು 2010 ಅಪರಾಧಿ ಎಂದು ಘೋಷಿಸಲಾಗಿತ್ತು. ಮಾದಕವಸ್ತು ಮಾರಾಟ ,ಸಾಗಣೆ ಸಿಂಗಾಪುರದ ಕಾನೂನಿನ ಅಡಿಯಲ್ಲಿ ಮರಣದಂಡನೆ ಶಿಕ್ಷೆಗೆ ಕಡ್ಡಾಯವಾಗಿದೆ.

ಮುಂದಿನ ಬುಧವಾರ ನಾಗೇಂದ್ರನ್ನನ್ನು ಗಲ್ಲಿಗೇರಿಸಲಾಗುವುದು ಎಂಬ ಹೃದಯ ವಿದ್ರಾವಕ ಸುದ್ದಿ ಸಿಕ್ಕಿದೆ ಎಂದು ಮಲೇಷಿಯಾದ ದಿನಪತ್ರಿಕೆ ದಿ ಸ್ಟಾನರ್‍ನಲ್ಲಿ ಧರ್ಮಲಿಂಗಂ ಅವರ ಸಿಂಗಾಪುರದ ಮಾಜಿ ವಕೀಲ ಎಂ ರವಿ ಹೇಳಿದ್ದಾರೆ. ಗಲ್ಲು ಶಿಕ್ಷೆಯ ವಿರುದ್ಧ ಸಿಂಗಾಪುರದ ನ್ಯಾಯಾಲಯವು ಮಾರ್ಚ್ 29 ರಂದು ಅಂತಿಮ ಮನವಿಯನ್ನು ತಿರಸ್ಕರಿಸಿದ ನಂತರ ಮರಣದಂಡನೆ ವಿಧಿಸಲಾಗಿದೆ.

2017 ರಲ್ಲಿ, ಸಿಂಗಾಪುರದ ಹೈಕೋರ್ಟ್ ನಾಲ್ಕು ಮಾನಸಿಕ ಮತ್ತು ಮನೋವೈದ್ಯಕೀಯ ತಜ್ಞರ ಸಾಕ್ಷ್ಯದ ಆಧಾರದ ಮೇಲೆ ಧರ್ಮಲಿಂಗಂಗೆ ಜೀವಾವಧಿ ಶಿಕ್ಷೆಯನ್ನು ನೀಡಲು ಅರ್ಹತೆ ಹೊಂದಿಲ್ಲ ಎಂದು ತೀರ್ಪು ನೀಡಿತು. ನವೆಂಬರ್ 10 ರಂದು ಅವರ ಮರಣದಂಡನೆ ಬಗ್ಗೆ ಸಿಂಗಾಪುರ್ ಜೈಲು ಅಧಿಕಾರಿಗಳು ಪತ್ರವನ್ನು ಇಪೋಹ್ನಲ್ಲಿರುವ ಅವರ ತಾಯಿಗೆ ಕಳುಹಿಸಿದ ನಂತರ ಪ್ರಕರಣ ಗಮನ ಸೆಳೆಯಿತು.

ಸಾಮಾಜಿಕ ಮಾಧ್ಯಮದಲ್ಲಿ ಕ್ಷಮಾದಾನಕ್ಕಾಗಿ ಅಭಿಯಾನವೇ ನಡೆದಿತ್ತು . ಮರಣದಂಡನೆಯನ್ನು ನಿಲ್ಲಿಸಲು ರವಿ ನ್ಯಾಯಾಲಯದಲ್ಲಿ ಮಾನವೀಯತೆ ವಾದ ಮಂಡಿಸಿದ್ದರು.