ಸಿಂಗಾಪುರ,ಸೆ.19- ಕೊರೊನಾ ನಿಯಮ ಉಲ್ಲಂಘನೆ ಮಾಡಿದ್ದ ಆರೋಪಕ್ಕೆ ಗುರಿಯಾಗಿದ್ದ ಭಾರತೀಯ ಮೂಲದ ವ್ಯಕ್ತಿಗೆ ಸಿಂಗಾಪುರದಲ್ಲಿ ಎರಡು ವಾರಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಕೊರೊನಾ ಸಂದರ್ಭದಲ್ಲಿ ಮಾಸ್ಕ್ ಧರಿಸದೆ ಕೊರೊನಾ ನಿಯಮಗಳನ್ನು ಉಲ್ಲಂಘನೆ ಮಾಡಿದ್ದನ್ನು ತಮಿಳುಸೆಲ್ವಂ ರಾಮಯ್ಯ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಅವರಿಗೆ ಈ ಶಿಕ್ಷೆ ವಿಧಿಸಲಾಗಿದೆ.
2021 ರಲ್ಲಿ ಕೊರೊನಾ ಧನಾತ್ಮಕ ಪರೀಕ್ಷೆ ಮಾಡಿದ್ದಾರೆ ಎಂದು ತಿಳಿದಿದ್ದರೂ, ತಮಿಳುಸೆಲ್ವಂ ರಾಮಯ್ಯ ಅವರು ಉದ್ದೇಶಪೂರ್ವಕವಾಗಿ ತಮ್ಮ ಸಹೋದ್ಯೋಗಿಗಳ ಬಳಿ ಹೋಗಿ ಕೆಮ್ಮಿದರು, ಒಂದು ಸಂದರ್ಭದಲ್ಲಿ ಹಾಗೆ ಮಾಡಲು ತಮ್ಮ ಮಾಸ್ಕ್ ತೆಗೆದಿದ್ದರು ಎಂದು ಚಾನೆಲ್ ನ್ಯೂಸ್ ಏಷ್ಯಾ ವರದಿ ಮಾಡಿತ್ತು.
ಮಹಿಳಾ ಮೀಸಲಾತಿ ಕಾಂಗ್ರೆಸ್ ಕಲ್ಪನೆಯ ಕೂಸು: ಸೋನಿಯಾ
ಆ ಸಮಯದಲ್ಲಿ ತಮಿಳ್ ಸೆಲ್ವಂ ಅವರು ಲಿಯಾಂಗ್ ಹಪ್ ಸಿಂಗಾಪುರದ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ನ್ಯಾಯಾಲಯವು ಕೇಳಿದೆ. ಅಕ್ಟೋಬರ್ 18, 2021 ರಂದು ಬೆಳಿಗ್ಗೆ 6 ರಂದು ಅಸ್ವಸ್ಥರಾದ ಸೆಲ್ವಂ ಅವರಿಗೆ ಪರೀಕ್ಷೆ ನಡೆಸಿದಾಗ ಅವರು ಕೊರೊನಾ ಇರುವುದು ದೃಢಪಟ್ಟಿತ್ತು.
ವಿಷಯ ತಿಳಿದು ಸೀದಾ ಮನೆಗೆ ಹೋಗದ ತಮಿಳ್‍ಸೆಲ್ವಂ ತಮ್ಮ ಕಂಪನಿಯ ಲಾಜಿಸ್ಟಿಕ್ಸ ಕಚೇರಿಗೆ ಹೋದ ಮಾತ್ರವಲ್ಲ, ಅಲ್ಲಿನ ಕೆಲವರಿಗೂ ಸೋಂಕು ಹರಡುವಂತೆ ಮಾಡಿದ್ದ.
IndianOrigin, #Singaporean, #Jailed, #COVID19, #Violations,