ನಿಷೇಧಿತ ಅಸಂಸದೀಯ ಪದಗಳ ಪರಿಷ್ಕೃತ ಪಟ್ಟಿ ರಿಲೀಸ್ ಮಾಡಿದ ಕೇಂದ್ರ ಸರ್ಕಾರ

Social Share

ನವದೆಹಲಿ, ಜು.14- ಪ್ರಜಾಪ್ರಭುತ್ವದಲ್ಲಿ ಟೀಕೆ, ಪ್ರತಿಭಟನೆ, ಆರೋಪಗಳು ಸರ್ವೆ ಸಾಮಾನ್ಯ. ಈ ಮೊದಲು ಕೋವಿಡ್ ನೆಪದಲ್ಲಿದೇಶಾದ್ಯಂತ ಪ್ರತಿಭಟನೆಗಳನ್ನು ಹತ್ತಿಕ್ಕಲಾಗಿತ್ತು. ಕಟುಟೀಕೆ ಮಾಡುವವರನ್ನು ದೇಶ ದ್ರೋಹದ ಆರೋಪದ ಮೇಲೆ ಜೈಲಿಗಟ್ಟಲಾಗಿತ್ತು. ಈಗ ಹೊಸದಾಗಿ ಸಂಸತ್‍ನಲ್ಲೂ ಅಸಂಸದೀಯ ಪದಗಳ ಪರಿಷ್ಕøತ ಪಟ್ಟಿ ಬಿಡುಗಡೆ ಮಾಡುವ ಮೂಲಕ ಪ್ರತಿಪಕ್ಷಗಳ ಬಾಯಿ ಮುಚ್ಚಿಸುವ ಯತ್ನ ನಡೆದಿದೆ.

ಜುಲೈ 18ರಿಂದ ಆರಂಭವಾಗುವ ಸಂಸತ್ ಕಲಾಪ ಕುರಿತು ಕಿರು ಹೊತ್ತಿಗೆ ಬಿಡುಗಡೆ ಮಾಡಿರುವ ಲೋಕಸಭಾ ಸಚಿವಾಲಯ ಅಸಂಸದೀಯ ಪದಗಳ ಉದ್ದನೆಯ ಪಟ್ಟಿಯನ್ನು ಪ್ರಕಟಿಸಿದೆ. ಅದರ ಪ್ರಕಾರ ಸಂಸತ್‍ನ ಚರ್ಚೆಯಲ್ಲಿ ಬಳಸಬೇಕಾದ ಬಹಳಷ್ಟು ಪದಗಳಿಗೆ ಕಡಿವಾಣ ಬೀಳಲಿದೆ.

ಪ್ರತಿ ವರ್ಷ ಈ ರೀತಿಯ ಪುಸ್ತಿಕೆ ಬಿಡುಗಡೆಯಾಗುವುದು ಸಾಮಾನ್ಯ. ಅದರಲ್ಲಿ ಅಸಂಸದೀಯ ಪದಗಳ ಪಟ್ಟಿ ಇರುತ್ತಿತ್ತು. ಈ ಬಾರಿ ಹೊಸದಾಗಿ ಹಲವಾರು ರೂಢಿಗತ ಪದಗಳನ್ನು ಅಸಂಸದೀಯ ಪದಗಳ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಈ ಮೂಲಕ ಟೀಕೆಗೆ ಬಳಕೆಯಾಗುವ ಪದಗಳನ್ನೇ ಸಂಸತ್‍ನಲ್ಲಿ ನಿಷೇಧಿಸಲಾಗುತ್ತಿದೆ. ಸಂಸತ್ ಸಚಿವಾಲಯದ ಈ ಕ್ರಮವನ್ನು ಪ್ರತಿಪಕ್ಷಗಳು ತೀವ್ರವಾಗಿ ವಿರೋಧಿಸಿವೆ.

ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಚಾರ ಎಂಬ ಆಕ್ರೋಶವನ್ನು ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಸೇರಿ ಹಲವು ಪಕ್ಷಗಳು ವ್ಯಕ್ತ ಪಡಿಸಿವೆ. ಮೊದಲ ಹಂತದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಪದಗಳ ನಿಷೇಧಿಸುವ ಯತ್ನ ನಡೆದಿದೆ. ನಂತರದ ಹಂತದಲ್ಲಿ ರಾಜ್ಯಗಳ ವಿಧಾನಸಭೆ ಮತ್ತು ವಿಧಾನ ಪರಿಷತ್‍ನಲ್ಲೂ ಇದು ಜಾರಿಯಾಗಲಿದೆ.

ಈ ಮೂಲಕ ಬಿಜೆಪಿ ತಮ್ಮನ್ನು ಟೀಕಿಸಲು ಅವಕಾಶವೇ ಇಲ್ಲದಂತೆ ಮಾಡುವ ಹುಸಿ ಪ್ರಯತ್ನ ನಡೆಸಿದೆ ಎಂದು ಪ್ರತಿಪಕ್ಷಗಳು ಆಕ್ಷೇಪಿಸಿವೆ. ಪರಿಷ್ಕøತ ಪಟ್ಟಿಯ ಪ್ರಕಾರ ಜುಮ್ಲಾಜೀವಿ, ಬಾಲಬುದ್ದಿ, ಕೋವಿಡ್ ಸ್ಪೇಡರ್, ಸ್ನೋಪ್‍ಗೇಟ್ ಪದಗಳನ್ನು ಅಸಂಸದೀಯ ಪದಗಳ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ.

ಅನರ್ಚಿಸ್ಟ್ (ಅರಾಜಕತಾವಾದಿ), ಶಕುನಿ, ಡಿಕ್ಟೋರಿಯಲ್, ತಾನಶಾಃ, ತನಾಶಾಹಿನ್(ಸರ್ವಾಧಿಕಾರಿ) , ಜೈಚಂದ್, ವಿನಾಶ ಪುರುಷ, ಕಾಲಿಸ್ಥಾನ, ಖೂನ್ ಸೆ ಖೇತಿ ಪದ ಬಳಕೆಗಳನ್ನು ಚರ್ಚೆಯಲ್ಲಿ ಬಳಸುವಂತಿಲ್ಲ ಎಂದು ಸೂಚಿಸಲಾಗಿದೆ.

ದ್ವಿಪಾತ್ರದಾರಿ, ಅನುಪಯುಕ್ತ, ಗಿಮಿಕ್, ಡ್ರಮ್ಮರ್, ಬಿಹಾರಿ ಸರ್ಕಾರ, ನೌಕಂಟಿ, ಲೈಂಗಿಕ ದೌರ್ಜನ್ಯ, ಕಾಳಸಂತೆ, ಕಪ್ಪು ದಿನ, ದಡ್ಡ, ಅಮಾಯಕ, ಲಾಲಿಪಪ್, ದಲ್ಲಾಳಿ, ದಾದಾಗಿರಿ ಎಂಬ ಅರ್ಥ ಬರುವ ಹಿಂದಿ ಪದಗಳನ್ನು, ರಕ್ತಪಾತ, ರಕ್ತಸಿಕ್ತ, ದ್ರೋಹ, ನಾಚಿಕೆಗೇಡು, ವಂಚನೆ, ಚಮ್ಚಾ, ಚಮಚಾಗಿರಿ, ಚೇಲಾ, ಬಾಲಿಶಃ, ಭ್ರಷ್ಟ, ಹೇಡಿ, ಅಪರಾಧ, ಮೊಸಳೆ ಕಣ್ಣೀರು, ಅವಮಾನ, ಕತ್ತೆ, ನಾಟಕ, ಕಣ್ಣಿರು ಒರೆಸುವ ನಾಟಕ, ಬೂಟಾಟಿಕೆ, ಗೂಂಡಾಗಿರಿ, ತಪ್ಪುದಾರಿಗೆಳೆಯುವುದು, ಸುಳ್ಳು, ಅಸತ್ಯ ಮುಂತಾದ ಅರ್ಥ ಬರುವ ಇಂಗ್ಲಿಷ್ ಪದಗಳನ್ನು ನಿಷೇಸಲಾಗಿದೆ.

ಹಿಂದಿ ಮತ್ತು ಇಂಗ್ಲಿಷ್‍ನಲ್ಲಿ ಆಕ್ಷೇಪಾರ್ಹ ಅರ್ಥ ಬರುವ ಪದಗಳನ್ನು ಬಳಕೆ ಮಾಡಿದಾಗ ಅವುಗಳನ್ನು ಪೀಠಾಧ್ಯಕ್ಷರು ಕಡತದಿಂದ ತೆಗೆದು ಹಾಕುವ ಅಕಾರ ಹೊಂದಿದ್ದಾರೆ, ರಾಜ್ಯಸಭೆ ಮತ್ತು ಲೋಕಸಭೆ ಅಧ್ಯಕ್ಷರು ಚರ್ಚೆ ಮಾಡಿದ ಬಳಿಕವೇ ಈ ಪದಗಳನ್ನು ಪರಿಷ್ಕøತ ಪಟ್ಟಿಯಲ್ಲಿ ಸೇರಿಸಿರುವುದಾಗಿ ಹೇಳಲಾಗಿದೆ.

Articles You Might Like

Share This Article