ಅಮೆರಿಕದಲ್ಲಿ ಭಾರತೀಯ ನೌಕರನ ಕಗ್ಗೊಲೆ

ಲಾಸ್‍ಏಂಜಲಿಸ್,ಫೆ.24(ಪಿಟಿಐ)- ಅಮೆರಿಕದಲ್ಲಿ ಭಾರತೀಯ ಮೂಲದ ನೌಕರರನ್ನು ಗುರಿಯಾಗಿಟ್ಟುಕೊಂಡು ದುಷ್ಕರ್ಮಿಗಳು ಹತ್ಯೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ಮತ್ತೊಂದು ಘಟನೆ ನಡೆದಿದೆ.  ಕ್ಯಾಲಿಫೋರ್ನಿಯ ಪ್ರಾಂತ್ಯದ ಲಾಸ್‍ಏಂಜಲಸ್‍ನ ವಿಟ್ಟಿಯರ್ ಪ್ರದೇಶದಲ್ಲಿದ್ದ ದಿನಸಿ ಅಂಗಡಿಯೊಂದಕ್ಕೆ ನುಗ್ಗಿದ ಮುಸುಕುಧಾರಿ ಶಸ್ತ್ರಸಜ್ಜಿತ ದುಷ್ಕರ್ಮಿಯೊಬ್ಬ ಮಣೀಯಂದರ್ ಸಿಂಗ್ ಸಾಹಿ ಎಂಬ ನೌಕರನನ್ನು ಗುಂಡಿಟ್ಟುಕೊಂದಿದ್ದಾನೆ.

ಮಣಿಂದರ್ ಸಿಂಗ್ ಸಾಹಿ ಜ.31ರಂದು ತಮ್ಮ ಜನ್ಮದಿನ ಆಚರಿಸಿಕೊಂಡಿದ್ದರು. ಆರು ತಿಂಗಳ ಹಿಂದಷ್ಟೇ ಅಮೆರಿಕಕ್ಕೆ ಬಂದಿದ್ದ ಅವರು ರಾಜಕೀಯ ಆಶ್ರಯ ಕೋರಿ ಮನವಿ ಸಲ್ಲಿಸಿದರು. ದಿನಸಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅವರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಲಾಸ್‍ಏಂಜಲಿಸ್ ಫೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿ ದ್ದಾರೆ.