ನವದೆಹಲಿ ಮಾ.5 – ನ್ಯೂಯಾರ್ಕ್ ನಿಂದ ನವದೆಹಲಿ ಬರುತ್ತಿದ್ದ ಅಮೆರಿಕನ್ ಅಮೇರಿಕನ್ ಏರ್ ಲೈನ್ ವಿಮಾನದಲ್ಲಿ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜಿನೆ ವಿಮಾನದಲ್ಲಿ ಪ್ರಯಾಣಿಕನೊಬ್ಬ ಕುಡಿದ ಮತ್ತಿನಲ್ಲಿದ್ದ ಸಹ ಪುರುಷ ಪ್ರಯಾಣಿಕನೊಬ್ಬನ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಘಟನೆ ನಡೆದಿದೆ.
ಕಳೆದ ಶುಕ್ರವಾರ ರಾತ್ರಿ 9:16 ಕ್ಕೆ ನ್ಯೂಯಾರ್ಕ್‍ನಿಂದ ಹೊರಟ ವಿಮಾನ ಸುಮಾರು 8 ತಾಸಿನ ಬಳಿಕ ಅಮೆರಿಕ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಯಾಗಿರುವ ಆರೋಪಿ ನಿದ್ರಾಹೀನ ಸ್ಥಿತಿಯಲ್ಲಿದ್ದನು ಮೂತ್ರ ವಿಸರ್ಜನೆ ಮಾಡಿದ್ದಾನೆ.ಅದು ಸಹ ಪ್ರಯಾಣಿಕರ ಮೇಲೆ ಬಿದ್ದಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ವಿದ್ಯಾರ್ಥಿಯು ಕ್ಷಮೆಯಾಚಿಸಿದ ನಂತರ ಸಹ ಪ್ರಯಾಣಿಕ ದೂರು ನೀಡಲಿಲ್ಲ ಆದರೆ, ವಿಮಾನಯಾನ ಸಂಸ್ಥೆ ಇದನ್ನು ಗಂಭೀರವಾಗಿ ಪರಿಗಣಿಸಿ ಐಜಿಐ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ)ಗೆ ವರದಿ ಮಾಡಿದೆ.
ಸುಮಾರು 14 ಗಂಟೆ 26 ನಿಮಿಷಗಳ ಹಾರಾಟದ ನಂತರ ಶನಿವಾರ ರಾತ್ರಿ 10:12 ಕ್ಕೆ ಇಂದಿರಾಗಾಂಧಿ ಅಂತರರಾಷ್ಟ್ರೀಯವಿಮಾನ ನಿಲ್ದಾಣದಲ್ಲಿ ಅಮೆರಿಕನ್ ಏರ್‍ಲೈನ್ಸ್ ವಿಮಾನ ಇಳಿದಿದೆ. ಅವನ ವೃತ್ತಿಜೀವನಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದು ದೂರು ಸಹಪ್ರಯಾಣಿಕ ದೂರು ನೀಡಿಲ್ಲ ಆದರೂ ಆರೋಪಿ ಪ್ರಯಾಣಿಕನನ್ನು ದೆಹಲಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸರು ಸಂಬಂಧಪಟ್ಟ ವ್ಯಕ್ತಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ . ನಾಗರಿಕ ವಿಮಾನಯಾನ ನಿಯಮಗಳ ಪ್ರಕಾರ, ಪ್ರಯಾಣಿಕರು ಅಶಿಸ್ತಿನ ವರ್ತನೆಗೆ ತಪ್ಪಿತಸ್ಥರೆಂದು ಕಂಡುಬಂದರೆ, ಕ್ರಿಮಿನಲ್ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳುವುದರ ಜೊತೆಗೆ, ಅಪರಾಧದ ಮಟ್ಟವನ್ನು ಅವಲಂಬಿಸಿ ನಿರ್ದಿಷ್ಟ ಅವಗೆ ವಿಮಾನಯಾನ ಮಾಡುವುದನ್ನು ನಿಷೇಸಲಾಗುತ್ತದೆ.
ಕಳೆದ ನವೆಂಬರ್ 26 ರಂದು ನ್ಯೂಯಾರ್ಕ-ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು.
Indian, Student, Banned, American, Airlines, Peeing, Co-Passenger,