ರಷ್ಯಾ ಸೈನಿಕರಿಂದ ಭಾರತೀಯರ ವಿದ್ಯಾರ್ಥಿಗಳ ಅಪಹರಣ..?

Social Share

ಕ್ಯಿವ್,ಮಾ.1-ರಷ್ಯಾ ಸೈನಿಕರು ಗುಂಡು ಹಾರಿಸಿ ಭಾರತೀಯ ವಿದ್ಯಾರ್ಥಿಗಳನ್ನು ಅಪಹರಿಸಿದ್ದಾರೆ ಎಂದು ಉತ್ತರ ಪ್ರದೇಶ ಮೂಲದ ವಿದ್ಯಾರ್ಥಿನಿಯೊಬ್ಬರು ಆರೋಪಿಸಿದ್ದು, ಭಾರತೀಯ ಸೇನೆಯನ್ನು ಕಳುಹಿಸಿ ನಮ್ಮನ್ನು ರಕ್ಷಿಸಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಲ್ಲಿ ಮನವಿ ಮಾಡಿದ್ದಾರೆ.
ವಿಡಿಯೋ ಸಂದೇಶದ ಮೂಲಕ ಉಕ್ರೇನಿನ ಪರಿಸ್ಥಿತಿಯನ್ನು ವಿವರಿಸಿರುವ ಯುವತಿ, ಇಲ್ಲಿ ನಮಗೆ ಯಾರೂ ಸಹಾಯ ಮಾಡುತ್ತಿಲ್ಲ. ರಾಯಭಾರಿ ಕಚೇರಿ ನಮ್ಮ ಕರೆಗಳನ್ನು ಸ್ವೀಕರಿಸುತ್ತಿಲ್ಲ. ಸಹಾಯವಾಣಿಯಿಂದಲೂ ನೆರವಾಗುತ್ತಿಲ್ಲ. ಬಹಳಷ್ಟು ಜನರು ಇಲ್ಲಿ ಜಮಾವಣೆಗೊಂಡಿದ್ದಾರೆ. ಬಸ್, ರೈಲು ಯಾವುದು ಲಭ್ಯವೋ ಅದರ ಮೂಲಕ ನಾವು ಆಗಮಿಸಿದ್ದೇವೆ. ನಿನ್ನೆ ರಷ್ಯಾದ ಸೈನಿಕರು ಗುಂಡು ಹಾರಿಸಿ ನಮ್ಮ ವಿದ್ಯಾರ್ಥಿನಿಯರನ್ನು ಕರೆದುಕೊಂಡು ಹೋಗಿದ್ದಾರೆ. ಎಲ್ಲಿಗೆ ಕರೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಇಲ್ಲ.
ರುಮಾನಿಯಾ ಗಡಿಯಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆಯಾಗಿದೆ. ನೀವು ಮಾಡುತ್ತೀರೋ ನಮಗೆ ಗೊತ್ತಿಲ್ಲ. ಭಾರತೀಯ ಸೇನೆ ಕಳುಹಿಸಿ ನಮ್ಮನ್ನು ರಕ್ಷಿಸಿ ಎಂದು ವಿದ್ಯಾರ್ಥಿನಿ ಮನವಿ ಮಾಡಿದ್ದಾರೆ.
ಕ್ಯಿವ್ ಬಿಟ್ಟು ಹೊರಡಿ: ರಷ್ಯಾ ಪಡೆಗಳು ಉಕ್ರೇನ್ ರಾಜಧಾನಿ ಕ್ಯಿವ್‍ಅನ್ನು ಸುತ್ತುವರೆದಿರುವುದರಿಂದ ಅಲ್ಲಿರುವ ಎಲ್ಲಾ ಭಾರತೀಯರು ತಕ್ಷಣವೇ ಹೊರಟು ಬರುವಂತೆ ಭಾರತೀಯ ರಾಯಭಾರಿ ಕಚೇರಿ ಎಚ್ಚರಿಕೆ ನೀಡಿದೆ.
ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ರೈಲು, ಬಸ್, ಕ್ಯಾಬ್ ಯಾವ ಮಾರ್ಗದಿಂದಲಾದರೂ ಸರಿ ಗಡಿ ಭಾಗಕ್ಕೆ ಸೇರಿಕೊಳ್ಳಿ. ಕೇಂದ್ರ ಸರ್ಕಾರ ನಿಮ್ಮನ್ನು ಅಲ್ಲಿಂದ ಭಾರತಕ್ಕೆ ಸುರಕ್ಷಿತವಾಗಿ ವಾಪಸ್ ಕರೆತರಲಿದೆ ಎಂದು ರಾಯಭಾರಿ ಕಚೇರಿ ತಿಳಿಸಿದೆ. ಹೀಗಾಗಿ ಪರಿಸ್ಥಿತಿ ಮತ್ತಷ್ಟು ಗಂಬೀರವಾಗಿದೆ.

Articles You Might Like

Share This Article