ಮೊಹಾಲಿ, ಸೆ. 18- ಚುಟುಕು ವಿಶ್ವಕಪ್‍ನ ತಯಾರಿಯಲ್ಲಿರುವ ರೋಹಿತ್ ಶರ್ಮಾ ಸಾರಥ್ಯದ ಭಾರತ ತಂಡವು ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ 3 ಪಂದ್ಯಗಳ ಟ್ವೆಂಟಿ-20 ಸರಣಿಯನ್ನು ಆಡುವ ಸಲುವಾಗಿ ಇಂದು ಮೊಹಾಲಿಯ ವಿಮಾನ ನಿಲ್ದಾಣಕ್ಕೆ ಇಂದು ಬಂದು ಇಳಿದಿದೆ.
ಸೆಪ್ಟೆಂಬರ್ 20 ರಂದು ಮೊಹಾಲಿಯಲ್ಲಿ ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಮೊದಲ ಚುಟುಕು ಪಂದ್ಯ ನಡೆಯಲಿದ್ದು, ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಚುಟುಕು ವಿಶ್ವಕಪ್ ಹಿನ್ನೆಲೆಯಲ್ಲಿ ಈ ಸರಣಿಯು ಮಹತ್ವ ಪಡೆದುಕೊಂಡಿದೆ.
ಸೆಪ್ಟೆಂಬರ್ 23 ರಂದು ನಾಗ್ಪುರ ಹಾಗೂ ಸೆ.25 ರಂದು ಹೈದ್ರಾಬಾದ್‍ನಲ್ಲಿ ಎರಡನೇ ಹಾಗೂ ಮೂರನೇ ಪಂದ್ಯ ನಡೆಯಲಿದೆ.
ಗಾಯಗೊಂಡು ಏಷ್ಯಾಕಪ್‍ನಿಂದ ದೂರ ಉಳಿದಿದ್ದ ಅನುಭವಿ ವೇಗಿಗಳಾದ ಜಸ್‍ಪ್ರೀತ್ ಬೂಮ್ರಾ, ಹರ್ಷಲ್‍ಪಟೇಲ್ ಅವರು ತಂಡಕ್ಕೆ ಮರಳಿರುವುದರಿಂದ ಬೌಲಿಂಗ್ ಬಲ ಹೆಚ್ಚಾಗಿದೆ.
ಏಷ್ಯಾಕಪ್‍ನಲ್ಲಿ ಆಫಾನಿಸ್ತಾನ ವಿರುದ್ಧ ಶತಕ ಸಿಡಿಸಿರುವ ವಿರಾಟ್ ಕೊಹ್ಲಿಯು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲೂ ಉತ್ತಮ ಪ್ರದರ್ಶನ ನೀಡುವತ್ತ ಚಿತ್ತ ಹರಿಸಿದ್ದಾರೆ.