ಉದ್ದ ಜಿಗಿತದಲ್ಲಿ ಫೈನಲ್ ಪ್ರವೇಶಿಸಿದ ಭಾರತೀಯ ಅಥ್ಲೆಟಿಕ್

Social Share

ಯೂಜಿನ್,ಜು.22- ಉದ್ದಜಿಗಿತ ಸ್ಪರ್ಧೆಯಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಅಥ್ಲೆಟಿಕ್ ಕೆರೆಲೈಟ್ ಎಲ್ದೋಸ್‍ಪೌಲ್ ಅವರು 16.68 ಮೀಟರ್ ಪ್ರದರ್ಶನದ ಮೂಲಕ ವಿಶ್ವ ಚಾಪಿಂಯ್‍ಶಿಪ್‍ನಲ್ಲಿ ಪೈನಲ್ಸ್‍ಗೆ ಪ್ರವೇಶಿಸಿದ್ದಾರೆ.

ಕೇರಳದ ಎರ್ಯಾಕುಲಮ್ ಮೂಲದ 25 ವರ್ಷದ ಪೌಲ್, 12 ಜನ ಸ್ರ್ಪಧಿಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಗುರುವಾರ ನಡೆದ ಸ್ಪರ್ಧೆಯಲ್ಲಿ ವಿಜೇತರಾಗಿ ಫೈನಲ್ ಸ್ರ್ಪಧಿಸಿರುವ ಪೌಲ್ ಭಾರತೀಯ ಕಾಲಮಾನ ಭಾನುವಾರ ಮುಂಜಾನೆ ನಡೆಯುವ ಸ್ಪರ್ಧೆಯಲ್ಲಿ ಸೆಣೆಸಲಿದ್ದಾರೆ.

ವೀಸಾ ಕುರಿತ ತಗಾದೆಯಿಂದಾಗಿ ತಡವಾಗಿ ಯೂಜಿನ್‍ಗೆ ಆಗಮಿಸಿದ ಪೌಲ್ ಕೊನೆಗೂ ತಮ್ಮ ಸಾಮಥ್ರ್ಯವನ್ನು ಪ್ರದರ್ಶಿಸಿದ್ದಾರೆ. ಈ ಮೊದಲು ಏಪ್ರಿಲ್‍ನಲ್ಲಿ ಕಾಚಿಕೋಡಾದಲ್ಲಿ ನಡೆದ ಫೆಡರೇಶನ್ ಕಪ್‍ನಲ್ಲಿ 16.99 ಮೀಟರ್ ಜಿಗಿದು ಚಿನ್ನ ಗೆದ್ದಿದ್ದರು.

ಭಾರತೀಯ ನೌಕಾಪಡೆಯ ಉದ್ಯೋಗಿಯಾಗಿರುವ ಅವರು, ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಎಂ.ಹರಿಕೃಷ್ಣನ್ ಅವರಿಂದ ತರಬೇತಿ ಪಡೆದಿದ್ದಾರೆ.

Articles You Might Like

Share This Article