ಆರ್ಚರಿ ವಿಶ್ವಕಪ್ : ಭಾರತೀಯ ಮಹಿಳಾ ತಂಡಕ್ಕೆ ಕಂಚು

Spread the love

ಗ್ವಾಂಗ್ಜು (ದಕ್ಷಿಣ ಕೊರಿಯಾ), ಮೇ 19 – ಇಲ್ಲಿ ನಡೆದ ವಿಶ್ವಕಪ್‍ಬಿಲ್ಲುಗಾರಿಕೆಯ 2 ನೇ ಹಂತದಲ್ಲಿ ಭಾರತೀಯ ಮಹಿಳಾ ತಂಡ ರಿಕವರ್‍ವಿಭಾಗದಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ.

ಕೋಮಲಿಕಾ ಬರಿ ಮತ್ತು ಅಂಕಿತಾ ಭಕತ್ ಅವರು ಚೈನೀಸ್ ತೈಪೆ ತಂಡವನ್ನು 6-2 (56-52, 54-51, 54-55, 55)ಅಂತರಲ್ಲಿ ಸೋಲಿಸಿದರು. ಇದಕ್ಕೂ ಮುನ್ನ ಭಾರತದ ವನಿತೆಯರ ತಂಡ ಸೆಮಿಫೈನಲ್‍ನಲ್ಲಿ ಲ್ಲಿ 2-6 (53-55, 57-55, 51-53, 43-53) ಅಂತರದಲ್ಲಿ ಕೊರಿಯಾ ವಿರುದ್ಧ ಸೋತ ನಂತರ ಕಂಚಿಗಾಗಿ ಹೋರಾಡಬೇಕಾಯಿತು.

ಇದಕ್ಕೂ ಮೊದಲು ಅನುಭವಿ ಜೋಡಿಯಾದ ತರುಣ್ದೀಪ್ ರೈ , ಜಯಂತ ಮತ್ತು ನೀರಜ್ ಚೌಹಾಣ್ ಅವರ ತಂಡ ಫ್ರಾನ್ಸ್ ತಂಡವನ್ನು 2-6 (54-57, 55-52, 53-55) ಪ್ರಭಲ ಹೋರಾಟ ನಡೆಸಿ ಪಂದ್ಯವನ್ನು ಗೆದ್ದುಕೊಂಡಿತು.

ಪುರುಷರ ಸಂಯುಕ್ತ ತಂಡ ಕನಿಷ್ಠ ಬೆಳ್ಳಿಯನ್ನು ಖಚಿತಪಡಿಸಿಕೊಳ್ಳಲು ಫೈನನ್ ಪ್ರವೇಶಿಸಿದರೆ, ಮಹಿಳಾ ತಂಡವು ಕಂಚಿನ ಪದಕ ಗೆಲ್ಲುವ ಮೂಲಕ ತನ್ನ ಖಾತೆಯನ್ನು ತೆರೆಯಿತು.ಇದರೊಂದಿಗೆ ಸದ್ಯಭಾರತ ಮೂರನೇ ಪದಕ ಗೆದ್ದಂತಾಗಿದೆ

Facebook Comments