ಅಮೆರಿಕಾದಲ್ಲೇ ನೆಲೆಸಲು ಸಹಕರಿಸಿ

Spread the love

ವಾಷಿಂಗ್ಟನ್,ಜೂ.25-ಅಮೆರಿಕಾದಾದ್ಯಂತ ಇರುವ ಭಾರತೀಯ ಯುವಕರು ಗಡಿಪಾರು ಭೀತಿಗೆ ಒಳಗಾಗಿದ್ದು, ನಮ್ಮನ್ನು ಅಮೆರಿಕಾದಲ್ಲಿ ಉಳಿದುಕೊಳ್ಳಲು ಸಹಕರಿಸುವಂತೆ ಬೈಡೆನ್ ಆಡಳಿತ ಹಿರಿಯ ಅಧಿಕಾರಿಗಳು ಹಾಗೂ ಪ್ರಭಾವಿ ಸಂಸದರಿಗೆ ಮನವಿ ಮಾಡಿಕೊಂಡಿದ್ದಾರೆ.

ಅಮೆರಿಕಾದಲ್ಲಿರುವ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಮಂದಿ ತಮ್ಮ ಬಾಲ್ಯ ಮತ್ತು ಹರಯವನ್ನು ಅಲ್ಲೇ ಕಳೆದಿದ್ದಾರೆ. 21 ವರ್ಷ ತಲುಪಿದ ಯುವಕರು ತಮ್ಮ ಪೋಷಕರ ವೀಸಾ ಆಧಾರದ ಮೇಲೆ ಅಮೆರಿಕಾದಲ್ಲಿ ನೆಲೆಸಲು ಅವಕಾಶವಿಲ್ಲದ ಕಾರಣ ತಮ್ಮ ದೇಶಗಳಿಗೆ ವಾಪಸ್ ತೆರಳುವ ಅನಿವಾರ್ಯತೆ ಎದುರಿಸುತ್ತಿದ್ದಾರೆ.

ಗಡಿಪಾರಾಗುವ ಭೀತಿ ಎದುರಿಸುತ್ತಿರುವ ಯುವಕರ ಪೋಷಕರು ಹಲವಾರು ವರ್ಷಗಳಿಂದ ಅಮೆರಿಕಾದಲ್ಲೇ ನೆಲೆಸಿದ್ದರು ಇನ್ನು ಕೆಲವರಿಗೆ ಗ್ರೀನ್ ಕಾರ್ಡ್ ಸೌಲಭ್ಯ ದೊರಕಿಲ್ಲದಿರುವುದು ಇಂತಹ ಪರಿಸ್ಥಿತಿಗೆ ಪ್ರಮುಖ ಕಾರಣ ಎನ್ನಲಾಗಿದೆ.

ಹೀಗಾಗಿ ಗಡಿಪಾರು ಭೀತಿಗೆ ಒಳಗಾಗಿರುವ ಭಾರತೀಯ ಮೂಲದ ಯುವಕರು ಅಮೆರಿಕಾದಲ್ಲೇ ನೆಲೆ ಕಂಡುಕೊಳ್ಳಲು ಸಹಕರಿಸುವಂತೆ ಸರ್ಕಾರದ ಉನ್ನತ ಅಧಿಕಾರಿಗಳು ಹಾಗೂ ಪ್ರಭಾವಿ ಸಂಸದರ ಮೊರೆ ಹೋಗಿದ್ದಾರೆ.