ಅಮೆರಿಕದಲ್ಲಿ ಭಾರತೀಯರನ್ನು ಒಗ್ಗೂಡಿಸಿದ್ದ ಕನ್ನಡಿಗ ಹನುಮಂತಯ್ಯ ಮರೂರು ವಿಧಿವಶ

Social Share

ಬೆಂಗಳೂರು ನ.12- ಅಮೆರಿಕಾದಲ್ಲಿ ಭಾರತೀಯರನ್ನು ಒಗ್ಗೂಡಿಸುವಲ್ಲಿ ಮತ್ತು ಸನಾತನ ಸಂಸ್ಕøತಿಯನ್ನು ಪ್ರೋತ್ಸಾಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹನುಮಂತಯ್ಯ ಮರೂರು (82) ನಿನ್ನೆ ಸಂಜೆ ಮಿಂಚಿಂಗನ್‍ನಲ್ಲಿ ನಿಧನರಾಗಿದ್ದಾರೆ.

ಕಳೆದ ಹತ್ತು ದಿನಗಳಿಂದ ಉಸಿರಾಟದ ಸಮಸ್ಯೆಯಿಂದ ಅಮೆರಿಕಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ನಿನ್ನೆ ಸಂಜೆ ಇಹಲೋಕ ತ್ಯಜಿಸಿದ್ದಾರೆ. ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಮರೂರು ಗ್ರಾಮದವರಾದ ಹನುಮಂತಯ್ಯ ಎಂಜಿನಿಯರ್ ಪದವೀಧರರಾಗಿದ್ದು, 70ರ ದಶಕದಲ್ಲಿ ಅಮೆರಿಕಾಗೆ ತೆರಳಿದ್ದರು.

ವೃತ್ತಿ ಜೀವನದಲ್ಲಿ ಸಾಕಷ್ಟು ಯಶಸ್ಸು ಗಳಿಸಿದ ಅವರು, ಅಮೆರಿಕಾದ ಮಿಂಚಿಂಗನ್‍ನ ಪ್ಲಿಂಟ್‍ನಲ್ಲಿ ನೆಲೆಸಿದ್ದರು. ಪತ್ನಿ ಲಲಿತಮ್ಮ, ಮಕ್ಕಳಾದ ರವೀಂದ್ರ, ಸುರೇಂದ್ರ ಮತ್ತು ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಕಾಲಮಿತಿಯೊಳಗೆ ಕಡತ ವಿಲೇವಾರಿ ಮಾಡುವಂತೆ ಸಿಎಂ ಎಚ್ಚರಿಕೆ

ಅಮೆರಿಕಾದಲ್ಲಿ ಭಾರತೀಯರನ್ನು ಒಗ್ಗೂಡಿಸುವಲ್ಲಿ ಮತ್ತು ಸನಾತನ ಸಂಸ್ಕøತಿಯನ್ನು ಪ್ರೋತ್ಸಾಹಿಸುವಲ್ಲಿ ಹನುಮಂತಯ್ಯ ಪ್ರಮುಖ ಪಾತ್ರ ವಹಿಸಿದ್ದರು. ಅಮೆರಿಕಾಗೆ ತೆರಳಿದ್ದ ಆರಂಭದಲ್ಲಿ ಅಲ್ಲಿನ ಸರ್ಕಾರಕ್ಕೆ ಎಂಜಿನಿಯರಿಂಗ್ ಸೇವೆ ಸಲ್ಲಿಸಿದ್ದ ಅವರು ಬಳಿಕ ಸ್ವಯಂ ಗುತ್ತಿಗೆ ನಿರ್ವಹಿಸಲಾರಂಭಿಸಿದರು.

ಮಿಂಚಿಂಗನ್ ರಾಜ್ಯದಲ್ಲಿ ಹಿಂದೂ ದೇವಾಲಯದ ಪುನರುತ್ಥಾನದ ಮೂಲಕ ಅಮೆರಿಕಾದಲ್ಲಿ ಭಾರತೀಯ ಸಂಸ್ಕøತಿ ಮತ್ತು ಧಾರ್ಮಿಕ ಆಚರಣೆಗೆ ಬೆಂಬಲವಾಗಿದ್ದರು. ಪಶ್ಚಿಮ ಕಾಶಿ ವಿಶ್ವನಾಥ ದೇವಾಲಯದ ಸಂಸ್ಥಾಪಕ ನಿರ್ದೇಶಕರಾಗಿ, ಬಳಿಕ ಅಧ್ಯಕ್ಷರಾಗಿ ಇತ್ತೀಚಿನವರೆಗೂ ಸೇವೆ ಸಲ್ಲಿಸಿದ್ದರು.

ದೇವಾಲಯದ ಪುನರುಜ್ಜೀವನದ ಸಂದರ್ಭದಲ್ಲಿ ಭವ್ಯ ನಿರ್ಮಾಣದಿಂದ ಗಮನ ಸೆಳೆದಿದ್ದರು. ಧಾರ್ಮಿಕ ಆಚರಣೆ ಹಾಗೂ ದೇವಾಲಯದ ನಿರ್ಮಾಣಗಳಿಗೆ ಮೈಸೂರಿನಿಂದ ಅರ್ಚಕರು ಹಾಗೂ ವಾಸ್ತು ಶಿಲ್ಪಿಗಳನ್ನು ಅಮೆರಿಕಾಕ್ಕೆ ಕರೆಸಿಕೊಳ್ಳುತ್ತಿದ್ದರು.

ಮೋದಿ ಕಾರ್ಯಕ್ರಮದಲ್ಲಿ ಖಾಲಿ ಕುರ್ಚಿ, ಕಾಂಗ್ರೆಸ್ ಲೇವಡಿ

ಸಾಂಪ್ರದಾಯಿಕ ಚಟುವಟಿಕೆ ಜೊತೆಗೆ ಕೃಷಿಗೂ ಬೆಂಬಲವಾಗಿದ್ದ ಹನುಮಂತಯ್ಯ ಅವರು, ಇಸ್ರೇಲ್ ಮಾದರಿ ಕೃಷಿ ಪದ್ಧತಿಯನ್ನು ಭಾರತ ಅದರಲ್ಲೂ ಕರ್ನಾಟಕದಲ್ಲಿ ಹೆಚ್ಚಾಗಿ ಅಳವಡಿಸಬೇಕು ಎಂಬ ಒತ್ತಾಸೆಯಿಂದ ಸಾಕಷ್ಟು ಶ್ರಮಿಸಿದರು.

ಕೃಷಿ ಯಂತ್ರೋಪಕರಣಗಳನ್ನು ಕರ್ನಾಟಕದ ರೈತರಿಗೆ ಇಸ್ರೇಲ್‍ನಿಂದ ತರಿಸಿ ನೀಡುತ್ತಿದ್ದರು. ಭಾರತೀಯ ವಿಜ್ಞಾನಿಗಳು ಹಾಗೂ ತಂತ್ರಜ್ಞರನ್ನು ಅಮೆರಿಕಾಗೆ ಕರೆಸಿಕೊಂಡು ಹಲವು ಮಾಹಿತಿಗಳ ವಿನಿಮಯಕ್ಕೆ ನೆರವಾಗಿದ್ದರು. ಕೋವಿಡ್ ಸಮಯದಲ್ಲೂ ಹಲವು ವೈದ್ಯಕೀಯ ಸೌಲಭ್ಯಗಳನ್ನು ಕರ್ನಾಟಕಕ್ಕೆ ಒದಗಿಸುವ ಮೂಲಕ ಮಾನವೀಯತೆ ಮೆರೆದಿ ದ್ದರು. ಮಿಂಚಿಂಗನ್‍ನಲ್ಲಿ ರೋಟರಿ ಸಂಸ್ಥೆಯ ಪದಾಕಾರಿಯಾಗಿ, ಅಧ್ಯಕ್ಷರಾಗಿ ಕೆಲಸ ಮಾಡಿದ್ದರು.

ಸ್ವಾಮೀಜಿ ಹೆಗಲ ಮೇಲೆ ಕೈ ಇಟ್ಟು ಪೋಸ್ ಕೊಟ್ಟ ಅಶೋಕ್ ವಿರುದ್ಧ ಆಕ್ರೋಶ

ಅಮೆರಿಕದ ಅಕ್ಕ, ಒಕ್ಕಲಿಗರ ಪರಿಷತ್ ಸಮ್ಮೇಳನ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದರು. ಆದಿಚುಂಚನಗಿರಿ ಮಠದೊಂದಿಗೆ ನಿರಂತರ ಸಂಪರ್ಕ ಹೊಂದಿದ್ದರು ಎಂದು ಅಕ್ಕದ ಅಧ್ಯಕ್ಷ ಅಮರನಾಥ್ ಗೌಡರು ಹನುಮಂತಯ್ಯ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Articles You Might Like

Share This Article