ಬೆಂಗಳೂರು, ಜ.27- ಇಂಡಿಯನ್ ಆಯಿಲ್ ಕಾರ್ಪೋರೇಶನ್ ಬೃಹತ್ ಕೈಗಾರಿಕಾ ಪ್ರವರ್ಗದಲ್ಲಿ ಜಾಗತಿಕ ಆರೋಗ್ಯಪೂರ್ಣ ಕಾರ್ಯ ಸ್ಥಳ ಪ್ರಶಸ್ತಿಗೆ ಭಾಜನವಾಗಿದೆ. ಈ ಗೌರವಕ್ಕೆ ಪಾತ್ರವಾದ ಮೊದಲ ಪಿ.ಎಸ್.ಯು. ಎಂಬ ಹೆಗ್ಗಳಿಯನ್ನೂ ಪಡೆದಿದೆ. ಇಂಡಿಯನ್ ಆಯಿಲ್ ಕಾರ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಆರೋಗ್ಯಪೂರ್ಣ ರೂಢಿಗಳನ್ನು ಎತ್ತಿಹಿಡಿಯಲು ಅವಿರತವಾಗಿ ಶ್ರಮಿಸುತ್ತಿರುವುದಕ್ಕೆ ಈ ಪ್ರಶಸ್ತಿ ದೊರೆತಿದೆ.
ನ.17 ಮತ್ತು 18ರಂದು ಆಯೋಜಿಸಲಾಗಿದ್ದ 9ನೆ ಜಾಗತಿಕ ಆರೋಗ್ಯಪೂರ್ಣ ಕಾರ್ಯಸ್ಥಳದ ಶೃಂಗಸಭೆಯಲ್ಲಿ ಈ ಪ್ರಶಸ್ತಿಯನ್ನು ಘೋಷಿಸಲಾಗಿತ್ತು. ಡಿಜಿಟಲ್ ವೇದಿಕೆಯಲ್ಲಿ ಆಯೋಜಿಸಲಾದ ವಿಶೇಷ ಸಮಾರಂಭದಲ್ಲಿ ಇಂಡಿಯನ್ ಆಯಿಲ್ ಅಧ್ಯಕ್ಷ ಶ್ರೀಕಾಂತ್ ಮಾಧವ್ ವೈದ್ಯ ಅವರು ಇಂಡಿಯನ್ ಆಯಿಲ್ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು.
ಆರೋಗ್ಯಪೂರ್ಣ ಕಾರ್ಯ ಸ್ಥಳ ಕುರಿತ ಜಾಗತಿಕ ಕೇಂದ್ರದ ಸಹ-ನಿರ್ದೇಶಕ ಮತ್ತು ಸಹ-ಸಂಸ್ಥಾಪಕರಾದ ವುಲï ಕ್ರಿಸ್ಟನ್ ಮತ್ತು ಟಾಮಿ ಹಚಿನ್ಸನ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಕಾಂತ್ ಮಾಧವ್ ವೈದ್ಯ ಅವರು, ಮಾನಸಿಕವಾಗಿ, ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಆರೋಗ್ಯಪೂರ್ಣ ಕಾರ್ಯ ಸ್ಥಳವನ್ನು ರೂಪಿಸುವಲ್ಲಿ ಇಂಡಿಯನ್ ಆಯಿಲ್‍ನ ನಿರಂತರ ಪ್ರಯತ್ನಗಳನ್ನು ಗುರುತಿಸಿದ್ದಕ್ಕಾಗಿ ತಾವು ಆರೋಗ್ಯಪೂರ್ಣ ಕಾರ್ಯ ಸ್ಥಳ ಕುರಿತ ಜಾಗತಿಕ ಕೇಂದ್ರಕ್ಕೆ ಧನ್ಯವಾದ ಅರ್ಪಿಸುತ್ತೇನೆ.
ಉದ್ಯೋಗಕ್ಕೆ ಸಂಬಂಧಿಸಿದಂತೆ ಇಂಡಿಯನ್ ಆಯಿಲ್ ಜಾಗತಿಕ ಮಾನದಂಡಗಳನ್ನು ಹೇಗೆ ಪೂರೈಸುತ್ತಿದೆ ಎಂಬುದನ್ನು ಈ ಗೌರವವು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ. ಸಾಂಕ್ರಾಮಿಕದ ನಡುವೆಯೂ ಜನರ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಗಮನ ಹರಿಸಿದ ಇಂಡಿಯನ್ ಆಯಿಲ್‍ನ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
