ಉಕ್ರೇನ್‍ನಲ್ಲಿರುವ ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೆ ನೆರವು ನೀಡಲಿದೆ ರಷ್ಯಾ

Social Share

ಮಾಸ್ಕೋವ್, ಮಾ.2- ಭಾರತದೊಂದಿಗೆ ತಾಂತ್ರಿಕ ಮೈತ್ರಿ ಹೊಂದಿರುವ ರಷ್ಯಾ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತರಲು ಸಹಕಾರ ನೀಡಲಿದೆ ಎಂದು ರಷ್ಯಾದ ರಾಯಭಾರಿ ಡೆನಿಸ್ ಆಲಿಪೊವ್ ಹೇಳಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಲಿ ಮತ್ತು ಸಾಮಾನ್ಯ ಅಧಿವೇಶನದಲ್ಲಿ ಭಾರತ ಸಮತೋಲಿತ ನಿಲುವು ಅನುಸರಿಸಿದ್ದನ್ನು ರಷ್ಯಾ ಶ್ಲಾಘಿಸಿದೆ. ಪ್ರಸ್ತುತ ಸಂಕಷ್ಟದ ತೀವ್ರತೆಯನ್ನು ಭಾರತ ಅರ್ಥ ಮಾಡಿಕೊಳ್ಳಲಿದೆ ಎಂದು ಭಾವಿಸಿರುವುದಾಗಿ ತಿಳಿಸಿದ್ದಾರೆ.
ನಾವು ಭಾರತೀಯ ಅಧಿಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೇವೆ. ಉಕ್ರೇನ್‍ನ ಖರ್ಕಿವ್ ಸೇರಿದಂತೆ ಹಲವು ಭಾಗಗಳಲ್ಲಿ ಸಿಲುಕಿರುವವರನ್ನು ಸುರಕ್ಷಿತವಾಗಿ ರಷ್ಯಾ ನೆಲದ ಮೂಲಕ ಸ್ಥಳಾಂತರಿಸಲು ಸಹಕಾರ ನೀಡಬೇಕು ಎಂದು ಭಾರತ ಸರ್ಕಾರ ಮನವಿ ಮಾಡಿದೆ. ತುರ್ತು ಸ್ಥಳಾಂತರ ಕಾರ್ಯಾಚರಣೆಗೆ ರಷ್ಯಾ ನೆರವು ನೀಡಲಿದೆ ಎಂದಿದ್ದಾರೆ.
ಸಂಘರ್ಷ ಪರಿಸ್ಥಿತಿ ಹೊರತಾಗಿಯೂ ರಷ್ಯಾದಿಂದ ಭಾರತಕ್ಕೆ ಎಸ್-400 ಕ್ಷಿಪಣಿಗಳ ಪೂರೈಕೆಯಲ್ಲಿ ಅಡೆತಡೆಯಾಗುವ ಮುನ್ಸೂಚನೆಗಳಿಲ್ಲ. ಒಪ್ಪಂದ ಹಳೆಯದೋ-ಹೊಸದು ಅದು ಮುಖ್ಯವಲ್ಲ. ಭಾರತ ಯಾವುದೇ ದಾರಿಯಲ್ಲೂ ಮಧ್ಯ ಪ್ರವೇಶ ಮಾಡಬಾರದು ಎಂದಿದ್ದಾರೆ.
 

Articles You Might Like

Share This Article