BIG NEWS : ಕರ್ನಾಟಕ, ಹರಿಯಾಣದಲ್ಲಿ H3N2ಗೆ ಇಬ್ಬರು ಬಲಿ

Social Share

ನವದೆಹಲಿ,ಮಾ.10- ಇತ್ತಿಚೆಗೆ ಕಾಣಿಸಿಕೊಂಡಿರುವ ಎಚ್3ಎನ್2 ವೈರಸ್‍ಗೆ ಕರ್ನಾಟಕದಲ್ಲಿ ಒಬ್ಬ ವ್ಯಕ್ತಿ ಬಲಿಯಾಗಿದ್ದಾನೆ. ಎಚ್3ಎನ್2 ವೈರಸ್‍ನಿಂದ ಕಾಣಿಸಿಕೊಂಡ ಜ್ವರದಿಂದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳುತಿಳಿಸಿವೆ.

ಕರ್ನಾಟಕ ಹಾಗೂ ಹರಿಯಾಣದಲ್ಲಿ ಒಬ್ಬೊಬ್ಬರು ಸೋಂಕಿಗೆ ಬಲಿಯಾಗಿದ್ದಾರೆ ಎಂದು ಸಚಿವಾಲಯದ ಮೂಲಗಳು ಸ್ಪಷ್ಟಪಡಿಸಿವೆ. ಕೊರೊನಾದಿಂದ ಚೇತರಿಸಿಕೊಳ್ಳುತ್ತಿರುವ ದೇಶದಲ್ಲಿ ಸುಮಾರು 90 ಎಚ್3ಎನ್2 ಪ್ರಕರಣಗಳ ಜತೆಗೆ ಎಂಟು ಎಚ್ ಎನ್ 1 ಪ್ರಕರಣಗಳು ವರದಿಯಾಗಿವೆ ಎಂದು ತಿಳಿದುಬಂದಿದೆ.

ದೇಶದಲ್ಲಿ ಕೊರೊನಾ ಮಹಾಮಾರಿಗೆ ಮತ್ತೆ ಮೂರು ಬಲಿ

ದೇಶದಲ್ಲಿ ಜ್ವರ ಪ್ರಕರಣಗಳು ಹೆಚ್ಚುತ್ತಿವೆ. ಹೆಚ್ಚಿನ ಸೋಂಕುಗಳು ಎಚ್3ಎನ್2 ವೈರಸ್‍ನಿಂದ ಉಂಟಾಗುತ್ತವೆ, ಇದನ್ನು ಹಾಂಗ್ ಕಾಂಗ್ ಫ್ಲೂ ಎಂದೂ ಕರೆಯುತ್ತಾರೆ. ರೋಗಲಕ್ಷಣಗಳು ಜ್ವರ, ಶೀತ, ಕೆಮ್ಮು, ಉಸಿರಾಟದ ತೊಂದರೆ ಮತ್ತು ಉಬ್ಬಸವನ್ನು ಒಳಗೊಂಡಿವೆ.

ಗೋ ಮಾಂಸ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಡಿದು ಕೊಂದ ಗುಂಪು

ರೋಗಿಗಳು ವಾಕರಿಕೆ, ನೋಯುತ್ತಿರುವ ಗಂಟಲು, ದೇಹ-ನೋವು ಮತ್ತು ಅತಿಸಾರದಿಂದ ಬಳಲುತ್ತಾರೆ. ರೋಗಲಕ್ಷಣಗಳು ಸುಮಾರು ಒಂದು ವಾರದವರೆಗೆ ಇರುತ್ತವೆ.

India, H3N2, Influenza, Deaths, Haryana, Karnataka,

Articles You Might Like

Share This Article