ಭಾರತದ ಪ್ರಥಮ ಖಾಸಗಿ ರಾಕೆಟ್‌ನ್ನು ಯಶಸ್ವಿಯಾಗಿ ನಬಕ್ಕೆ ಸೇರಿಸಿದ ಇಸ್ರೋ

Social Share

ಶ್ರೀ ಹರಿಕೋಟ,ನ.18- ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಿರುವ ದೇಶದ ಮೊದಲ ಖಾಸಗಿ ವಿಕ್ರಮ್-ಎಸ್(Vikram-S) ರಾಕೆಟ್‍(India’s 1st Privately Built Rocket)ನ್ನು ನಬಕ್ಕೆ ಯಶಸ್ವಿಯಾಗಿ ಇಸ್ರೋ ಹಾರಿಸಿದೆ.

ಕಳೆದ ನಾಲ್ಕು ವರ್ಷಗಳ ಹಿಂದೆ ಸ್ಟಾರ್ಟ್ ಆಫ್ ಸಂಸ್ಥೆ ಸ್ಕೈರೂಟ್ ಏರೋ ಸ್ಪೇಸ್ ಸಂಸ್ಥೆ ಅಭಿವೃದ್ಧಿ ಪಡಿಸಿದ್ದ ವಿಕ್ರಮ್-ಎಸ್ ರಾಕೆಟ್‍ನ್ನು ಇಂದು ಮುಂಜಾನೆ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಿಗ್ಗೆ 11.30ಕ್ಕೆ ಉಡಾವಣೆ ಮಾಡಲಾಯಿತು.

ಖಾಸಗಿ ಕಂಪನಿಯ ಸಹಭಾಗಿತ್ವದಲ್ಲಿ ಇಸ್ರೋ ಮೊದಲ ಭಾರಿಗೆ ಖಾಸಗಿ ವಲಯಕ್ಕೂ ಅವಕಾಶವನ್ನು ಕಲ್ಪಿಸಿ ಯೋಜನೆಯನ್ನು ಕಾರ್ಯಗತ ಗೊಳಿಸಿದೆ.

ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹಾ ಎಂದೇ ಖ್ಯಾತಿ ಹೊಂದಿದ್ದ ವಿಕ್ರಮ್ ಸಾರಾಬಾಯ್ ಅವರ ಗೌರವಾರ್ಥ ರಾಕೆಟ್‍ಗೆ ವಿಕ್ರಮ್ ಹೆಸರು ಇರಿಸಲಾಗಿತ್ತು ಇದು 81 ಕಿ.ಮೀ ಎತ್ತರಕ್ಕೆ ಹಾರಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(18-11-2022)

ಈ ಯೋಜನೆಯನ್ನು ಪ್ರಾರಂಭ ಎಂದು ಹೆಸರಿಡಲಾಗಿದ್ದು , 6 ಮೀಟರ್ ಎತ್ತರದ ಈ ವಿಕ್ರಮ್ ರಾಕೆಟ್ ಉಡಾವಣೆ ಯಶಸ್ವಿಯಾದರೆ ಇಸ್ರೋ ದೇಶದ ಬಾಹ್ಯಾಕಾಶದ ಉದ್ಯಮಕ್ಕೆ ಖಾಸಗಿ ವಲಯವನ್ನು ಕೂಡ ಸೇರ್ಪಡೆ ಮಾಡಿಕೊಂಡ ಖ್ಯಾತಿ ಗಳಿಸಲಿದ್ದು, ಹೊಸ ಮನ್ವಂತರಕ್ಕೆ ಮುನ್ನುಡಿ ಇಟ್ಟಂತಾಗುತ್ತದೆ.

#India, #PrivatelyBuiltRocket, #VikramS #Launch #ISTRO,

Articles You Might Like

Share This Article