ನವದೆಹಲಿ,ಫೆ.13-ದೇಶದಲ್ಲಿ ಕೊರೊನಾ ಅಬ್ಬರ ಕಡಿಮೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 44,877 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಸೋಂಕಿಗೆ 684 ಮಂದಿ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಪ್ರತಿದಿನದ ಪಾಸಿವಿಟಿ ದರ ಶೇ.3.7ರಷ್ಟಿದೆ.
ನಿನ್ನೆ 1,17,591 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಒಟ್ಟಾರೆ 4,15,85,711 ಮಂದಿ ಈ ಸೋಂಕಿನಿಂದ ಚೇತರಿಸಿಕೊಂಡಿದ್ದು, ಚೇತರಿಕೆಯ ಪ್ರಮಾಣ 97.55ರಷ್ಟಿದೆ. ಪ್ರಸ್ತುತ ದೇಶದಲ್ಲಿ 5,37, 045 ಸಕ್ರಿಯ ಪ್ರಕರಣಗಳಿವೆ. ಕೊರೊನಾ ಇಳಿಕೆಯಾಗುತ್ತಿರುವ ನಡುವೆಯೇ ಕೊರೊನಾ ತಪಾಸಣೆಗಳನ್ನು ಮಾಡಲಾಗುತ್ತಿದ್ದು, ನಿನ್ನೆ 14,15,279 ಪರೀಕ್ಷೆಗಳನ್ನು ಮಾಡಲಾಗಿದ್ದು, ಒಟ್ಟಾರೆ ಈವರೆಗೆ 750 ಮಿಲಿಯನ್ ಪರೀಕ್ಷೆಗಳನ್ನು ನಡೆಸಲಾಗಿದೆ.
ಸೋಂಕು ನಿಯಂತ್ರಣಕ್ಕೆ ಕೊರೊನಾ ವ್ಯಾಕ್ಸಿನ್‍ನನ್ನು ಸಮಾರೋಪಾದಿಯಲ್ಲಿ ನೀಡಲಾಗುತ್ತಿದ್ದು, 172.29 ಕೋಟಿಗಳಷ್ಟು ವ್ಯಾಕ್ಸಿನ್ ಈವರೆಗೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಮಹಾರಾಷ್ಟ್ರದ ಮುಂಬೈನಲ್ಲಿ 3ನೇ ಅಲೆ ಸಂದರ್ಭದಲ್ಲೂ ಕೂಡ ಹೆಚ್ಚು ಕೊರೊನಾ ಸೋಂಕು ಕಂಡುಬಂದಿತ್ತು. ಈಗ ಅಲ್ಲೂ ಕೂಡ ಪಾಸಿಟಿವಿಟಿ ದರ ಶೇ.1ಕ್ಕಿಂತ ಕಡಿಮೆಯಾಗಿದೆ.
