24 ಗಂಟೆಯಲ್ಲಿ 83,776 ಕೇಸ್, ದೇಶದಲ್ಲಿ ಕಡಿಮೆಯಾಯ್ತು ಕೊರೋನಾ ಅಬ್ಬರ

Social Share

ಬೆಂಗಳೂರು,ಫೆ.7-ದೇಶಾದ್ಯಂತ ಕೊರೊನಾ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಇಳಿಮುಖವಾಗುತ್ತಿದೆ. ಕಳೆದ 24 ಗಂಟೆಯಲ್ಲಿ 83,776 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಕೊರೊನಾ ಸೋಂಕಿನಿಂದ ನಿನ್ನೆ 895 ಮಂದಿ ಬಲಿಯಾಗಿದ್ದಾರೆ. ಈವರೆಗೆ ದೇಶದಲ್ಲಿ ಸುಮಾರು 5,0, 874 ಮಂದಿ ಮೃತಪಟ್ಟಿದ್ದಾರೆ.
ದೇಶದಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 11,08,938 ಆಗಿದೆ. ಕೊರೊನಾ ಸೋಂಕು ದಿನೇ ದಿನೇ ಇಳಿಕೆಯಾಗುತ್ತಿರುವುದ ದೇಶದ ಜನರಲ್ಲಿ ಸಂತಸ ಮೂಡುತ್ತಿದೆ.
ಸೋಂಕು ನಿವಾರಣೆಗಾಗಿ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸೋಂಕು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಹುತೇಕ ರಾಜ್ಯಗಳಲ್ಲಿ ವಿಸಿದ್ದ ನಿರ್ಬಂಧಗಳನ್ನು ತೆರವು ಮಾಡಲಾಗಿದೆ.
ನೈಟ್ ಕಫ್ರ್ಯೂ, ವೀಕೆಂಡ್ ಕಫ್ರ್ಯೂ ಸೇರಿದಂತೆ ಹಲವು ನಿಬಂಧನೆಗಳನ್ನು ತೆಗೆದು ಹಾಕಲಾಗಿದೆ. ಕೊರೊನಾ ಸಾಂಕ್ರಾಮಿಕ ರೋಗಕ್ಕೆ ತಡೆಗಟ್ಟಲು ವಾಕ್ಸಿನೇಷನ್ ನೀಡಲಾಗುತ್ತಿದ್ದು, 1,69,63,80,755 ಡೋಸ್ ವ್ಯಾಕ್ಸಿನೇಷನ್ ನೀಡಲಾಗಿದೆ.

Articles You Might Like

Share This Article