ಭಯೋತ್ಪಾದನೆ ಹತ್ತಿಕ್ಕುವ ಪ್ರಯತ್ನ ತಡೆಹಿಡಿಯಲಾಗಿದೆ : ಭಾರತ ಕಳವಳ

Social Share

ವಿಶ್ವಸಂಸ್ಥೆ, ನ.25- ಮುಂಬೈ ದಾಳಿಗೆ 14 ವರ್ಷಗಳು ಕಳೆದಿದ್ದು, ಈ ವೇಳೆ ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ರಾಯಭಾರಿ ಜಾಗತಿಕ ಭಯೋತ್ಪಾದನೆಗಳನ್ನು ಹತ್ತಿಕ್ಕುವ ಪ್ರಯತ್ನಗಳನ್ನು ರಾಜಕೀಯ ಕಾರಣಕ್ಕಾಗಿ ತಡೆಹಿಡಿಯಲಾಗಿದೆ ಎಂದು ಆರೋಪಿಸಿದ್ದಾರೆ.

ವಿಶ್ವಸಂಸ್ಥೆಯ ಖಾಯಂ ಪ್ರತಿನಿಧಿಯಾಗಿರುವ ಭಾರತೀಯ ರಾಯಭಾರಿ ರೋಜಿರಾ ಕಾಂಬೋಜ್ ಅವರು ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಭಯೋತ್ಪಾದನೆ ದೊಡ್ಡ ಸವಾಲು ಎಂದು ಎಚ್ಚರಿಸಿದ್ದಾರೆ.
ಐಸೀಸ್, ಆಲ್ಖೈದ ಸಂಯೋಜಿತ ಉಗ್ರಸಂಘಟನೆಗಳ ಪ್ರಭಾವದಿಂದ ಏಷ್ಯಾ ಮತ್ತು ಆಫ್ರಿಕಾ ಭಾಗದಲ್ಲಿ ನಾಗರಿಕರನ್ನು ಮತ್ತು ಭದ್ರತಾ ಪಡೆಗಳನ್ನು ಗುರಿಯಾಗಿಸಿ ದಾಳಿ ಮಾಡುವ ಪ್ರವೃತ್ತಿಗಳು ಹೆಚ್ಚಾಗಿವೆ ಎಂದು ವಿವರಿಸಿದ್ದಾರೆ.

2008ರಲ್ಲಿ ಪಾಕಿಸ್ತಾನದಿಂದ ಆಗಮಿಸಿದ 10ಕ್ಕೂ ಹೆಚ್ಚು ಮಂದಿ ಉಗ್ರರು ದೇಶದ ವಾಣಿಜ್ಯ ನಗರಿ ಮುಂಬೈ ಮೇಲೆ ನ.26ರಂದು ದಾಳಿ ನಡೆಸಿತ್ತು. ಈ ಆಕ್ರಮಣದಲ್ಲಿ 26 ವಿದೇಶಿಯರು ಸೇರಿ 166 ಮಂದಿ ಹತ್ಯೆಯಾಗಿದ್ದನ್ನು ಮರೆಯಲಾಗುವುದಿಲ್ಲ ಎಂದು ಅವರು ಭದ್ರತಾ ಮಂಡಳಿ ಸಮಿತಿಗಳ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ.

ಏಕನಾಥ್ ಶಿಂಧೆಗೆ ಕರ್ನಾಟಕ ಸಿಎಂ ವಿರುದ್ಧ ಮಾತನಾಡುವ ಧೈರ್ಯವಿಲ್ಲ: ಠಾಕ್ರೆ

ನಾಳೆಗೆ ಮುಂಬೈ ದಾಳಿಗೆ 14 ವರ್ಷವಾಗಲಿದೆ. ಭಯೋತ್ಪಾದನೆಯನ್ನು ಹತ್ತಿಕ್ಕುವ ಭಾರತದ ಪ್ರಯತ್ನ ಮತ್ತು ಪೂರ್ವ ತಯಾರಿಗೆ ರಾಜಕೀಯ ಕಾರಣಗಳಿಗಾಗಿ ತಡೆಯೊಡ್ಡಲಾಗಿದೆ.

ಪಾಕಿಸ್ತಾನ ಮೂಲದ ಅಫೀಜ್ ತಲಹಾ ಶಾಹಿದ್, ಲಕ್ಷರ್-ಇ-ತೊಯಿಬಾ ಮುಖಂಡ ಶಾಹಿದ್ ಮೊಹಮ್ಮದ್, ಶಾಜಿದ್ಮಿರ್, ಜೈಸ್-ಇ-ಮೊಹಮ್ಮದ್ ಸಂಘಟನೆಯ ಮುಖಂಡ ಅಬ್ದುಲ್ ರವೂಫ್ ಅಜರ್ ಮತ್ತು ಅಲ್ಖೈದ ಸಂಘಟನೆಯ ಅಬ್ದುಲ್ ರೆಹಮಾನ್ ಮಕ್ಕಿ ಅವರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಕಳೆದ ಜೂನ್ನಲ್ಲಿ ಭಾರತ ಸಲ್ಲಿಸಿದ ಪ್ರಸ್ತಾವನೆಯನ್ನು ಚೀನಾ ತಡೆಹಿಡಿದಿದೆ ಎಂದು ಆಕ್ಷೇಪಿಸಿದ್ದಾರೆ.

ಕಾಂಗ್ರೆಸ್‌ ಸಭೆಯಲ್ಲೇ ಹೃದಯಾಘಾತದಿಂದ ಮಾಜಿ ಶಾಸಕ ಶ್ರೀಶೈಲಪ್ಪ ಬಿದನೂರು ನಿಧನ

India, efforts, sanction, perpetrators, terror, attacks, blocked, political reasons, Ruchira Kamboj,

Articles You Might Like

Share This Article