ನೇರ ತೆರಿಗೆ ಸಂಗ್ರಹದಲ್ಲಿ ಶೇ.22ರಷ್ಟು ಬೆಳವಣಿಗೆ

Social Share

ನವದೆಹಲಿ,ಮಾ.11- ದೇಶದ ಆರ್ಥಿಕತೆ ಹಂತ ಹಂತವಾಗಿ ಸುಧಾರಣೆಯಾಗುತ್ತಿದ್ದು, ಚಾಲ್ತಿಯಲ್ಲಿರುವ ಆರ್ಥಿಕ ವರ್ಷದಲ್ಲಿ ಹಿಂದಿನ ವರ್ಷಕ್ಕಿಂತಲೂ ಶೇ.22.58ರಷ್ಟು ನೇರ ತೆರಿಗೆ ಸಂಗ್ರಹವಾಗಿದೆ.

ಕಳೆದ ಏಪ್ರಿಲ್ 1ರಿಂದ ನಿನ್ನೆಯವರೆಗೆ ದೇಶದಲ್ಲಿ ಒಟ್ಟು 16.68 ಲಕ್ಷ ಕೋಟಿ ರೂಪಾಯಿ ನೇರ ತೆರಿಗೆ ಸಂಗ್ರಹವಾಗಿದೆ. ಕಳೆದ ವರ್ಷಕ್ಕಿಂತಲೂ ಶೇ.22.58ರಷ್ಟು ಸಂಪನ್ಮೂಲ ಸಂಗ್ರಹ ವೃದ್ಧಿಯಾಗಿದೆ. ನಿವ್ವಳ ಸಂಗ್ರಹ 13.73 ಲಕ್ಷ ಕೋಟಿ ರೂಪಾಯಿಗಳಾಗಿದ್ದು, ಇದು ಶೇ.16.78ರಷ್ಟು ಬೆಳವಣಿಗೆ ದಾಖಲಿಸಿದೆ.

2.95 ಲಕ್ಷ ಕೋಟಿ ರೂಪಾಯಿಯನ್ನು ಮರುಪಾವತಿಸಲಾಗಿದೆ. ಇದು ಕಳೆದ ವರ್ಷಕ್ಕಿಂತಲೂ ಶೇ.59.44ರಷ್ಟು ಹೆಚ್ಚಾಗಿದ್ದು, ದಾಖಲಾರ್ಹ ಮಟ್ಟಕ್ಕೆ ತಲುಪಿದೆ ಎಂದು ಕೇಂದ್ರ ಹಣಕಾಸು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಮದ್ಯದಮಲಿನಲ್ಲಿ 7 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಕುಡುಕ

2022-23ನೇ ಸಾಲಿನ ಬಜೆಟ್‍ನಲ್ಲಿ ನಿರೀಕ್ಷಿತ ಗುರಿಯಲ್ಲಿ ಇದು ಶೇ.96.67ರಷ್ಟಾಗಿದೆ ಮತ್ತು ಒಟ್ಟು ಸ್ವಿಕೃತ ರಾಜಸ್ವದಲ್ಲಿ ಶೇ.83.19ರಷ್ಟಾಗಿದೆ ಎಂದು ತಿಳಿಸಲಾಗಿದೆ. ಆದಾಗ್ಯೂ ಕಾಪೆರ್ಪೋರೆಟ್ ಆದಾಯ ತೆರಿಗೆ ಮತ್ತು ವೈಯಕ್ತಿಕ ಆದಾಯ ತೆರಿಗೆ ಸಂಗ್ರಹ ಕಳವಳಕಾರಿಯಾಗಿದೆ.

ಕಾಪೆರ್ಪೋರೆಟ್‍ಆದಾಯ ತೆರಿಗೆ ಒಟ್ಟು ಶೇ.18.08ರಷ್ಟು ಸಂಗ್ರಹವಾಗಿದೆ, ಮರುಪಾವತಿ ಬಳಿಕ ಶೇ.13.62ರಷ್ಟು ಉಳಿದಿದೆ. ವೈಯಕ್ತಿಕ ತೆರಿಗೆ ಶೇ.27.57ರಷ್ಟು ಸಂಗ್ರಹವಾಗಿದ್ದು, ಮರುಪಾವತಿಯ ಬಳಿಕ ಶೇ.20.73ರಷ್ಟು ಉಳಿದಿದೆ ಎಂದು ತಿಳಿಸಲಾಗಿದೆ.

India, net, direct tax, collections, up, 16.8%, March,

Articles You Might Like

Share This Article