ಭಾರತದ ಅಭಿವೃದ್ಧಿಯನ್ನು ಶ್ಲಾಘಿಸಿದ ಅಮೆರಿಕಾದ ಅನಿವಾಸಿ ಭಾರತೀಯರು

Social Share

ವಾಷಿಂಗ್ಟನ್, ಫೆ 27- ಮುಂದಿನ 25 ವರ್ಷದಲ್ಲಿ ಭಾರತ ಮುಂದುವರೆದ ಸಾಲಿನಲ್ಲಿ ನಿಲ್ಲಲು ಪೂರಕವಾಗಿ ಮುನ್ನೆಡೆಯುತ್ತಿದೆ. ಪರಿವರ್ತನೆಯ ಭಾರತದ ಬೆಳವಣಿಗೆ ನೋಡಲು ಸಂತೋಷವಾಗುತ್ತಿದೆ ಎಂದು ಅಮೆರಿಕಾದಲ್ಲಿನ ಅನಿವಾಸಿ ಭಾರತೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಮೆರಿಕಾದ ಭಾರತೀಯ ರಾಯಭಾರ ಕಚೇರಿಯಲ್ಲಿ ಆಯೋಜಿಸಲಾದ ಭಾರತೀಯ-ಅಮೆರಿಕನ್ ಸಮುದಾಯದ ಮುಖಂಡರೊಂದಿಗಿನ ಸಂವಾದದಲ್ಲಿ ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಅನೇಕ ಅನಿವಾಸಿ ಭಾರತೀಯರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಸಚಿವ ಶೇಖಾವತ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತವು 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಪರಿವರ್ತನೆಯ ಯುಗದತ್ತ ಹೆಜ್ಜೆ ಹಾಕುತ್ತಿದೆ. ಇದು ಶತಮಾನಕ್ಕೊಮ್ಮೆ ನಡೆಯುವ ಅಥವಾ ಜೀವನದಲ್ಲಿ ಒಮ್ಮೆ ಘಟಿಸುವ ಪರಿವರ್ತನೆಯಾಗಿದೆ. ವಿದೇಶದಲ್ಲಿ ನೆಲಸಿರುವ ವಲಸಿಗರು ಅಂತಾರಾಷ್ಟ್ರೀಯ ರಾಯಭಾರಿಗಳಾಗಿದ್ದು, ಪರಿವರ್ತನೆಯ ಪಾತ್ರದಾರಿಗಳಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಡು ಹಂದಿಯೊಂದಿಗೆ ಹೋರಾಡಿ ಮಗಳನ್ನು ರಕ್ಷಿಸಿ ಬಲಿದಾನವಾದ ಮಹಿಳೆ

ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಫಲವಾಗಿ ಇಂದು ಭಾರತವು ತ್ವರಿತ ಅಭಿವೃದ್ಧಿ ಹೊಂದುತ್ತಿದೆ. ಜಾಗತಿಕವಾಗಿ ಉಪಗ್ರಹಗಳ ಉಡಾವಣಾ ತಾಣವಾಗಿದೆ. ಸ್ವಾತಂತ್ತ್ಯ ಸಂಭ್ರಮದ ಶತಮಾನೋತ್ಸವದ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯನ್ನು ಸಾಧಿಸಲು ಸಜ್ಜಾಗಿದೆ ಎಂದು ಅವರು ಹೇಳಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂದು ಭಾರತವನ್ನು ನಿರ್ಲಕ್ಷಿಸುವ ಯಾವುದೇ ವೇದಿಕೆ ಇಲ್ಲ. ಜಾಗತಿಕವಾಗಿ ಭಾರತದ ಪಾತ್ರ ಗಣನೀಯವಾಗಿ ಪ್ರಾಮುಖ್ಯತೆ ಪಡೆದಿದೆ. ಹಲವಾರು ವಿಷಯಗಳ ಮೇಲೆ ಭಾರತ ನಿರ್ಣಾಯಕ ಸ್ಥಾನ ವಹಿಸಿದೆ. ಭಾರತವನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಅದೇ ಸಮಯದಲ್ಲಿ ದೇಶದ ಒಳಗಿನ ಸಾಮಾನ್ಯ ಜನರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಹೇಳಿದರು.

ಭಾರತೀಯ ಮೂಲದ ಅಮೆರಿಕಾ ವೈದ್ಯರ ಸಂಘದ ಮಾಜಿ ಅಧ್ಯಕ್ಷ (ಎಎಪಿಐ) ಅಧ್ಯಕ್ಷ ಡಾ ವಿನೋದ್.ಕೆ.ಷಾ ಅವರು, ಅಮೆರಿಕಾದಲ್ಲಿ ವಾಸಿಸುತ್ತಿರುವ ಭಾರತೀಯರು ತಮ್ಮ ತಾಯ್ನಾಡಿನ ಈ ಮಟ್ಟಿನ ಅಭಿವೃದ್ಧಿ ವೇಗವನ್ನು ಎಂದು ನೋಡಿರಲಿಲ್ಲ. ದೇಶವನ್ನು ಈ ಮಟ್ಟಕ್ಕೆ ತಂದಿದ್ದಕ್ಕಾಗಿ ಪ್ರಧಾನಿ ಮೋದಿ ಮತ್ತು ಅವರ ಸಂಪುಟದ ಸಚಿವರಿಗೆ ಕೃತಜ್ಞತೆ ಹೇಳ ಬಯಸುತ್ತೇನೆ ಎಂದಿದ್ದಾರೆ.

ಕನ್ನಡಿಗನ ಸಂಶೋಧನೆ: ಮಕ್ಕಳಿಗೆ ಪಾಠ ಮಾಡಲಿದೆ ‘ಶಿಕ್ಷಾ’ ರೋಬೋಟ್

ವ್ಹೀಲ್ಸ್ ಗ್ಲೋಬಲ್ ಫೌಂಡೇಶನ್‍ನ ಸುರೇಶ್ ಚೆನೊಯ್ ಅವರು, ಭಾರತದಲ್ಲಿನ ಎಫ್‍ಸಿಆರ್‍ಎ (ವಿದೇಶಿ ಕೊಡುಗೆ ನಿಯಂತ್ರಣ ಕಾಯಿದೆ) ನಿಯಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇದು ದೇಶಕ್ಕಾಗಿ ಲಾಭೋದ್ದೇಶವಿಲ್ಲದ ಕೆಲಸ ಮಾಡುವ ಸಂಸ್ಥೆಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಶೇಖಾವತ್ ಪ್ರತಿಕ್ರಿಯಿಸಿ, ಸರ್ಕಾರಕ್ಕೆ ಸಮಸ್ಯೆಅರಿವಿದ್ದು, ಸೂಕ್ತ ಕಾಲದಲ್ಲಿ ಅವುಗಳನ್ನು ಬಗೆ ಹರಿಸಲಾಗುವುದು ಎಂದು ಭರವಸೆ ನೀಡಿದರು. ಸುಮಾರು 20 ಸಾವಿರಕ್ಕೂ ಹೆಚ್ಚು ಭಾರತೀಯ ಸ್ವಯಂ ಸೇವಾ ಸಂಸ್ಥೆಗಳು (ಎನ್‍ಜಿಒಗಳು) ವಿದೇಶದಿಂದ ಹಣ ಪಡೆದು ಭಾರತ ವಿರೋ ಚಟುವಟಿಕೆಗಳಲ್ಲಿ ತೊಡಗಿರುವುದು ಸರ್ಕಾರದ ಆಂತರಿಕ ತನಿಖೆಯಲ್ಲಿ ಕಂಡುಬಂದಿದೆ.

ಅಗ್ನಿಪತ್ ಯೋಜನೆಗೆ ನ್ಯಾಯಾಲಯದ ಬೆಂಬಲ : ಆಕ್ಷೇಪಣಾ ಅರ್ಜಿಗಳು ವಜಾ

ಹೀಗಾಗಿ ಭಾರತ ಸರ್ಕಾರ ನಿಯಮ ಹಾಗೂ ನಿಬಂಧನೆಗಳನ್ನು ಬಿಗಿಗೊಳಿಸಿದೆ. ಇದು ಪ್ರಾಮಾಣಿಕವಾಗಿ ಕೆಲಸ ಮಾಡುವ ಸಂಸ್ಥೆಗಳ ಮೇಲೂ ಪರಿಣಾಮ ಬೀರಿರುವುದು ಸರ್ಕಾರದ ಗಮನದಲ್ಲಿದೆ. ಮುಂದಿನ ದಿನಗಳಲ್ಲಿ ಇದನ್ನು ತಿದ್ದುಪಡಿ ಮಾಡುವುದಾಗಿ ತಿಳಿಸಿದರು.

India, role, global, stage, continues, grow, USofficial,

Articles You Might Like

Share This Article