2022ರಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಭಾರತದ ಸಾಧಿಸಿದ್ದೇನು..?

Social Share

ಭಾರತ ಕ್ರಿಕೆಟ್ ತಂಡಕ್ಕೆ ಹೊಸ ಹುರುಪು ತಂದುಕೊಟ್ಟ ವರ್ಷ 2022. ಈ ವರ್ಷ ಭಾರತ ತಂಡಕ್ಕೆ ಕೆಲವು ಉದಯೋನ್ಮುಖ ಯುವ ಆಟಗಾರರ ಪಾದಾರ್ಪಣೆ ಜತೆಗೆ ಹಲವು ಸರಣಿಗಳನ್ನು ಗೆಲ್ಲುವ ಮೂಲಕ ಅಭಿಮಾನಿಗಳ ಸಂತಸವನ್ನು ಹೆಚ್ಚಿಸಿದ ವರ್ಷವಾಗಿದೆ.

ಸೋಲೇ ಗೆಲುವಿನ ಮೆಟ್ಟಿಲು ಎಂಬಂತೆ ಭಾರತ ತಂಡವು ವರ್ಷದ ಆರಂಭದಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ಸೋಲು ಕಂಡರೂ, ಟೀಮ್ ಇಂಡಿಯಾ ಆಟಗಾರರು ವರ್ಷವಿಡೀ ಗೆಲುವಿನ ಹುಮ್ಮಸ್ಸು ತೋರಿದ್ದರಿಂದ 2022ರಲ್ಲಿ 14 ಸರಣಿಗಳನ್ನು ಗೆದ್ದು ಗಮನ ಸೆಳೆಯಿತು. ಆದರೆ ಐಸಿಸಿ ಆಯೋಜಿಸಿದ್ದ ಏಷ್ಯಾ ಕಪ್ ಟೂರ್ನಿ ಹಾಗೂ ಟಿ 20 ವಿಶ್ವಕಪ್ ಟೂರ್ನಿಗಳಲ್ಲಿ ಕಂಡ ಸೋಲು ಅಭಿಮಾನಿಗಳಲ್ಲಿ ನಿರಾಸೆ ತರಿಸಿತು.

ಟಿ 20 ಸ್ವರೂಪದಲ್ಲಿ 2022ರಲ್ಲಿ ಭಾರತ ತಂಡವು 27 ಪಂದ್ಯಗಳಲ್ಲಿ ಗೆಲುವು ಸಾಸುವ ದಾಖಲೆ ನಿರ್ಮಿಸಿದ್ದು ವರ್ಷದ ದೊಡ್ಡ ಮೈಲುಗಲ್ಲಾಯಿತು. ಭಾರತ ತಂಡವು 2022ರಲ್ಲಿ ಆಡಿದ ಸರಣಿಗಳು ಹಾಗೂ ಫಲಿತಾಂಶಗಳ ಬಗ್ಗೆ ಇಲ್ಲಿ ಬೆಳಕು ಚೆಲ್ಲಲಾಗಿದೆ.

# ಟಿ 20 ದಾಖಲೆ ಬರೆದ ಟೀಮ್ ಇಂಡಿಯಾ:
ಭಾರತ ತಂಡವು 2022ರಲ್ಲಿ 41 ಪಂದ್ಯಗಳಲ್ಲಿ 27 ಪಂದ್ಯಗಳನ್ನು ಗೆಲ್ಲುವ ಮೂಲಕ ದಾಖಲೆ ನಿರ್ಮಿಸಿತು. ಈ ಮಾದರಿಯಲ್ಲಿ ಟೀಮ್ ಇಂಡಿಯಾವು 8 ಸರಣಿಗಳನ್ನು ಗೆದ್ದು ಸಂಭ್ರಮಿಸಿತು.

ಫೆಬ್ರವರಿಯಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ವೆಸ್ಟ್ಇಂಡೀಸ್ ವಿರುದ್ಧ ರೋಹಿತ್ ಶರ್ಮಾ ಸಾರಥ್ಯದ ಟೀಮ್ ಇಂಡಿಯಾ 3-0 ಯಿಂದ ಕ್ಲೀನ್ ಸ್ವೀಪ್ ಸಾಸಿದರೆ, ಅದೇ ಹುಮ್ಮಸ್ಸನ್ನು ಶ್ರೀಲಂಕಾ ವಿರುದ್ಧವೂ ಪ್ರದರ್ಶಿಸಿ ಶ್ರೀಲಂಕಾ ವಿರುದ್ಧವೂ 3-0ಯಿಂದ ಸರಣಿ ಕೈವಶಪಡಿಸಿಕೊಂಡು ಗೆದ್ದು ಬೀಗಿತು.

2022ರ ವರ್ಷದ ಆರಂಭದಲ್ಲೇ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಹಾಗೂ ಏಕದಿನ ಸರಣಿ ಸೋತಿದ್ದ ಭಾರತ ತಂಡ, ಜೂನ್ನಲ್ಲಿ ತವರಿನಲ್ಲೇ ಹರಿಣಿಗಳ ವಿರುದ್ಧ ರಿಷಭ್ ಪಂತ್ ಸಾರಥ್ಯದಲ್ಲಿ 5 ಟ್ವೆಂಟಿ 20 ಪಂದ್ಯಗಳನ್ನಾಡಿ 2-2 ರಿಂದ ಟಿ 20 ಸರಣಿಯನ್ನು ಸಮಬಲಗೊಳಿಸಿತು.

ಜೂನ್ ತಿಂಗಳಲ್ಲಿ ಐಪಿಎಲ್ ವಿಜೇತ ನಾಯಕ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಐರ್ಲೆಂಡ್ ಪ್ರವಾಸದಲ್ಲಿದ್ದ ಭಾರತ 2-0ಯಿಂದ ಸರಣಿ ಗೆದ್ದರೆ, ಜುಲೈ ತಿಂಗಳಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡ ಟೀಮ್ ಇಂಡಿಯಾ 2-1 ರಿಂದ ಸರಣಿ ತನ್ನದಾಗಿಸಿಕೊಂಡಿತು. ಜುಲೈನಲ್ಲಿ ಹಾರ್ದಿಕ್ ಪಾಂಡ್ಯ ಸಾರಥ್ಯದಲ್ಲಿ ವೆಸ್ಟ್ಇಂಡೀಸ್ ನೆಲದಲ್ಲಿ 5 ಪಂದ್ಯಗಳಲ್ಲಿ ಆಡಿದ ಭಾರತ ತಂಡ 4-1 ರಿಂದ ಜಯಿಸಿತು.

ಹೊಸ ವರ್ಷಕ್ಕೆ ಕಿಕ್ಕೇರಿಸಿಕೊಳ್ಳಲು ತಂದಿದ್ದ 6 ಕೋಟಿ ಮೌಲ್ಯದ ಡ್ರಗ್ಸ್ ವಶ..!

ಸೆಪ್ಟೆಂಬರ್ನಲ್ಲಿ ಆಸ್ಟ್ರೇಲಿಯಾ ತಂಡವು ಭಾರತ ತಂಡದ ಪ್ರವಾಸ ಕೈಗೊಂಡಿತ್ತು. ಸೀಮಿತ ನಾಯಕ ರೋಹಿತ್ ಶರ್ಮಾರೇ ತಂಡವನ್ನು ಮುನ್ನಡೆಸಿದ್ದರು. ಟೀಮ್ ಇಂಡಿಯಾ ಆಟಗಾರರು ಉತ್ತಮ ಹೋರಾಟ ತೋರಿದ್ದರಿಂದ 2-1 ರಿಂದ ರೋಹಿತ್ ಪಡೆ ವಶಪಡಿಸಿಕೊಂಡಿತು. ನಂತರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲೂ 2-0 ಟಿ 20 ಸರಣಿ ಗೆದ್ದು ಸಂಭ್ರಮಿಸಿತು.

ಹಾರ್ದಿಕ್ ಪಾಂಡ್ಯ ಸಾರಥ್ಯದಲ್ಲಿ ನವೆಂಬರ್ನಲ್ಲಿ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದ್ದ ಭಾರತ 3 ಪಂದ್ಯಗಳ ಟಿ 20 ಸರಣಿ ಪ್ರವಾಸ ಕೈಗೊಂಡಿತ್ತಾದರೂ 2 ಪಂದ್ಯಗಳು ಮಳೆಯಿಂದ ರದ್ದಾದರೂ ಭಾರತ ತಂಡ 1-0 ಯಿಂದ ಸರಣಿ ತನ್ನದಾಗಿಸಿಕೊಂಡಿತು. 2022ರಲ್ಲಿ ಟಿ 20 ಸ್ವರೂಪದಲ್ಲಿ ಭಾರತ ತಂಡವು 8 ಸರಣಿಗಳನ್ನು ಜಯಿಸಿದರೂ ಐಸಿಸಿ ಆಯೋಜಿಸಿದ್ದ ಏಷ್ಯಾ ಕಪ್ ಟೂರ್ನಿ ಹಾಗೂ ಟಿ 20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ನಲ್ಲಿ ಸೋಲು ಕಂಡು ವಿಶ್ವಚಾಂಪಿಯನ್ ಆಗುವ ಕನಸು ಕೈಚೆಲ್ಲಿತು.

ಏಕದಿನ ಸ್ವರೂಪದಲ್ಲಿ ಕ್ಲೀನ್ ಸ್ವೀಪ್ ಸಾಸಿದ ಭಾರತ:

ಟಿ 20 ಸ್ವರೂಪದಂತೆ ಏಕದಿನ ಮಾದರಿಯಲ್ಲೂ ಪ್ರಾಬಲ್ಯ ಮೆರೆದ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ 3-0 ಯಿಂದ ಕ್ಲೀನ್ ಸ್ವೀಪ್ ಸೋಲು ಕಂಡಿತು. ನಂತರ ಉತ್ತಮ ಪ್ರದರ್ಶನ ತೋರಿದ ಟೀಮ್ ಇಂಡಿಯಾ, ಫೆಬ್ರವರಿಯಲ್ಲಿ ತವರಿನಲ್ಲಿ ವೆಸ್ಟ್ ಇಂಡೀಸ್ (3-0), ಜುಲೈನಲ್ಲಿ 3-0 ಯಿಂದ ಸರಣಿ ಸ್ವೀಪ್ ಸಾಸಿತು.

ಕನ್ನಡಿಗ ಕೆ.ಎಲ್.ರಾಹುಲ್ ಸಾರಥ್ಯದಲ್ಲಿ ಜಿಂಬಾಬ್ವೆ ಪ್ರವಾಸದಲ್ಲಿ ಕೈಗೊಂಡಿದ್ದ ಭಾರತ ತಂಡ 3-0ಯಿಂದ ಕ್ಲೀನ್ ಸ್ವೀಪ್ ಸರಣಿ ಕೈವಶಪಡಿಸಿಕೊಂಡಿತು. ಇಂಗ್ಲೆಂಡ್ ವಿರುದ್ಧ (2-1), ದಕ್ಷಿಣ ಆಫ್ರಿಕಾ ವಿರುದ್ಧ (2-1) ಗೆದ್ದು ಸಂಭ್ರಮಿಸಿದ ಭಾರತ ತಂಡ, ನ್ಯೂಜಿಲೆಂಡ್ (1-0) ಹಾಗೂ ಬಾಂಗ್ಲಾದೇಶ (2-1) ರಿಂದ ಸೋಲು ಕಂಡಿತು.

ಟೆಸ್ಟ್ನಲ್ಲಿ ಮಿಶ್ರ ಫಲ:

2022ರಲ್ಲಿ ಟೆಸ್ಟ್ನಲ್ಲಿ ಮಿಶ್ರಫಲ ಫಲಿತಾಂಶ ಕಂಡಿರುವ ಭಾರತ ತಂಡವು ಜನವರಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿತು. 3 ಪಂದ್ಯಗಳ ಸರಣಿಯಲ್ಲಿ ಭಾರತ ತಂಡವು 2-1 ರಿಂದ ಸೋಲು ಕಂಡಿತು. ಈ ಸರಣಿಯ ನಂತರ ವಿರಾಟ್ ಕೊಹ್ಲಿ 3 ಸ್ವರೂಪದ ನಾಯಕತ್ವವನ್ನು ತ್ಯಜಿಸಿದರು.

ಮಾರ್ಚ್ನಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಶ್ರೀಲಂಕಾ ತಂಡವು ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ವಿರುದ್ಧ 2-0ಯಿಂದ ಸರಣಿ ಕೈಚೆಲ್ಲಿತು. 2021 ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ 5 ಟೆಸ್ಟ್ ಸರಣಿಯ ಅಂತಿಮ ಪಂದ್ಯ ಕೊರೊನಾದಿಂದ ಸ್ಥಗಿತಗೊಂಡಿತ್ತು.

2022ರಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಜಸ್ಪ್ರೀತ್ ಬೂಮ್ರಾ ನಾಯಕತ್ವದ ಭಾರತ ತಂಡವು ಸೋಲು ಕಂಡು, ಸರಣಿಯನ್ನು 2-2 ಯಿಂದ ಸಮಬಲಗೊಳಿಸಿಕೊಂಡಿತು. 2022ರ ಡಿಸೆಂಬರ್ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ 2 ಪಂದ್ಯಗಳ ಸರಣಿಯಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಸಾರಥ್ಯದ ಭಾರತ ತಂಡವು ವೈಟ್ ವಾಶ್ ಮಾಡುವ ಮೂಲಕ 2022ರ ವರ್ಷವನ್ನು ಗೆಲುವಿನೊಂದಿಗೆ ಮುಕ್ತಾಯಗೊಳಿಸಿದರು.

ವಿಶ್ವಕಪ್ ಗೆದ್ದ ಅಂಧರ ತಂಡ :

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಅಂಧರ ಟಿ 20 ವಿಶ್ವಕಪ್ನಲ್ಲಿ ಭಾರತ ತಂಡವು ನಾಯಕ ಅಜಯ್ಕುಮಾರ್ ರೆಡ್ಡಿ (100* ರನ್) ಹಾಗೂ ಸುನೀಲ್ ರಮೇಶ್ (136* ರನ್) ಶತಕದ ನೆರವಿನಿಂದ 277 ರನ್ ಗಳಿಸಿತು. ಬಾಂಗ್ಲಾ ದೇಶ 3 ವಿಕೆಟ್ ಕಳೆದುಕೊಂಡು 157 ರನ್ ಗಳಿಸಿತು. 120 ರನ್ಗಳ ಭರ್ಜರಿ ಗೆಲುವು ಸಾಸಿದ ಭಾರತ ತಂಡವು ಹ್ಯಾಟ್ರಿಕ್ ವಿಶ್ವಕಪ್ ಗೆದ್ದು ಸಂಭ್ರಮಿಸಿತು.
2014,2018ರಲ್ಲೂ ಭಾರತ ಅಂಧರ ತಂಡವು ಟಿ 20 ವಿಶ್ವಕಪ್ ಮುಕುಟ ಗೆದ್ದಿತ್ತು.

ಕಾಮನ್ವೆಲ್ತ್ನಲ್ಲಿ ಬೆಳ್ಳಿ ಮಿಂಚು :

ಭಾರತ ಮಹಿಳಾ ತಂಡವು ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಕಾಮನ್ ವೆಲ್ತ್ ಗೇಮ್ಸ್ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 9 ರನ್ಗಳಿಂದ ಸೋಲು ಕಂಡರೂ, ಬೆಳ್ಳಿ ಪದಕ ಗೆದ್ದು ಸಂಭ್ರಮಿಸಿತ್ತು. ಆಸ್ಟ್ರೇಲಿಯಾ 161 ರನ್ ಗಳಿಸಿದರೆ, ಭಾರತ 152 ರನ್ ಬಾರಿಸಿತ್ತು. 2022ರ ಏಷ್ಯಾ ಕಪ್ ಮುಕುಟ ಗೆದ್ದು ಸಂಭ್ರಮಿಸಿದ ಮಹಿಳಾ ತಂಡಕ್ಕೆ ಬಿಸಿಸಿಐ ಪುರುಷರಷ್ಟೇ ಸಮಾನ ವೇತನವನ್ನು ಘೋಷಿಸಿತು.

Articles You Might Like

Share This Article