ಹೈದರಾಬಾದ್‍ಗೆ ಬರುತ್ತಿದ್ದ ಇಂಡಿಗೋ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

Social Share

ನವದೆಹಲಿ, ಜು.17- ಹೈದರಾಬಾದ್‍ಗೆ ಬರುತ್ತಿದ್ದ ಇಂಡಿಗೋ ವಿಮಾನ ತುರ್ತಾಗಿ ಪಾಕಿಸ್ತಾನದ ಕರಾಚಿಯಲ್ಲಿ ಇಳಿದಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಅರಬ್ ಎಮಿರೇಟ್ಸ್ ಶಾಜರ್ ದಿಂದ ಇಂದು ಬೆಳಿಗ್ಗೆ ಪಯಣ ಆರಂಭಿಸಿದ ಇಂಡಿಗೋ 6ಇ1406 ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾರ್ಗಮಧ್ಯೆ ಕರಾಚಿ ವಿಮಾನ ನಿಲ್ದಾಣದಲ್ಲಿ ಇಳಿದಿದೆ.

ಎರಡನೇ ಇಂಜಿನ್‍ನಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ವಿಮಾನ ತುರ್ತು ಭೂ ಸ್ಪರ್ಶ ಮಾಡಬೇಕಾಯಿತು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ ಮತ್ತು ಮತ್ತೊಂದು ವಿಮಾನದಲ್ಲಿ ಅವರನ್ನು ಹೈದರಾಬಾದ್‍ಗೆ ಕಳುಹಿಸಲಾಗಿದೆ ಎಂದು ತಿಳಿಸಲಾಗಿದೆ.

ಕಳೆದ ವಾರವೂ ಇದೇ ರೀತಿ ಸ್ಪೆ ೈಸ್ ಜೆಟ್ ವಿಮಾನ ನವದೆಹಲಿಯಿಂದ ದುಬೈಗೆ ತೆರಳುವಾಗ ಕರಾಚಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು.

Articles You Might Like

Share This Article