ಜಕಾರ್ತಾ, ಮಾ.4- ಸರ್ಕಾರಿ ಇಂಧನ ಸಂಗ್ರಹಣ ಡಿಪೋದಲ್ಲಿ ಬೆಂಕಿ ಅವಘಡ ಸಂಭವಿಸಿ ಇಬ್ಬರು ಮಕ್ಕಳು ಸೇರಿದಂತೆ 16 ಜನ ಸಾವನ್ನಪ್ಪಿ 50ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ಇಂಡೋನೇಷ್ಯಾ ರಾಜಧಾನಿ ಉತ್ತರ ಜಕಾರ್ತಾದಲ್ಲಿ ಸಂಭವಿಸಿದೆ.
ಬೆಂಕಿಯ ಕೆನ್ನಾಲಿಗೆಗೆ ಹಲವು ಮನೆಗಳು ಸುಟ್ಟು ಕರಕಲಾಗಿವೆ. ನಿನ್ನೆ ಬೆಂಕಿ ಅವಘಡ ಸಂಭವಿಸುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಕಾರ್ತಾ ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ ತಿಳಿಸಿದೆ.
ಸದ್ಯ ಇಂಧನ ಸಂಗ್ರಹಣಾ ಡಿಪೋ ಸುತ್ತಮುತ್ತ ಇರುವ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳೀಯ ಕಾಲಮಾನದ ಪ್ರಕಾರ, ನಿನ್ನೆ ರಾತ್ರಿ 8 ಗಂಟೆಗೆ ಡಿಪೋದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಮಕ್ಕಳು ಸೇರಿದಂತೆ 16 ಜನ ಬಲಿಯಾಗಿದ್ದಾರೆ. ಈ ಅವಘಡಕ್ಕೆ ನಿಖರ ಕಾರಣ ಈವರೆಗೆ ತಿಳಿದುಬಂದಿಲ್ಲ.
ಕ್ರೆಡಿಟ್ ಕಾರ್ಡ್ ವಂಚನೆಗೆ ಧೋನಿ, ಅಭಿಷೇಕ್ ಬಚ್ಚನ್ ಪ್ಯಾನ್ ಬಳಸುತ್ತಿದ್ದ ಐವರ ಬಂಧನ
ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಗಾಯಗೊಂಡವರಲ್ಲಿ ಹಲವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಅಲ್ಲಿನ ರಕ್ಷಣಾ ಇಲಾಖೆ ಮುಖ್ಯಸ್ಥ ಅಬ್ದುಲ್ ರಾಚ್‍ಮನ್ ತಿಳಿಸಿದ್ದಾರೆ.
ಈ ಘಟನೆಯಿಂದ ದೇಶದ ಇಂಧನ ಪೂರೈಕೆಯಲ್ಲಿ ಯಾವುದೂ ಕೊರತೆ ಇಲ್ಲ. ಲಭ್ಯವಿರುವ ಟರ್ಮಿನಲ್‍ಗಳಿಂದ ಬ್ಯಾಕಪ್ ಮೂಲಕ ಇಂಧನ ಪೂರೈಕೆ ಮಾಡಲಾಗುತ್ತಿದೆ ಎಂದು ತೈಲ ಮತ್ತು ಅನಿಲ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕರಾದ ವಿದ್ಯಾವತಿ ತಿಳಿಸಿದ್ದಾರೆ.
ಬಗೆದಷ್ಟೂ ಹೊರ ಬರುತ್ತಿದೆ ಪ್ರಶಾಂತ್ `ಲಂಚ’ ಪುರಾಣ
2009 ಹಾಗೂ 2014ರಲ್ಲಿ ಇದೇ ರೀತಿಯ ಬೆಂಕಿ ಅವಘಡ ಸಂಭವಿಸಿ 40 ಮನೆಗಳಿಗೆ ಹಾನಿಯಾಗಿತ್ತಾದರೂ ಯಾವುದೇ ಸಾವು-ನೋವು ಸಂಭವಿಸಿರಲಿಲ್ಲ. ಆದರೆ, ಈ ಬಾರಿಯ ಅಗ್ನಿ ದುರಂತದಲ್ಲಿ ಸಾವು-ನೋವು ಸಂಭವಿಸಿ ಅಪಾರ ನಷ್ಟ ಉಂಟಾಗಿದೆ.
Indonesia, 16 killed, massive fire, outbreak, fuel, storage, depot, Jakarta,