ವಾಷಿಂಗ್ಟನï, ಫೆ 11- ಇಂಡೋ-ಪೆಸಿಫಿಕ್‍ನಲ್ಲಿ ಹೆಚ್ಚುತ್ತಿರುವ ಚೀನಾದ ಸಮರ್ಥನೆಯನ್ನು ಎದುರಿಸಲು ಇಂಡೋನೇಷ್ಯಾಕ್ಕೆ ಸುಮಾರು 14 ಶತಕೋಟಿ ಶಸ್ತ್ರಾಸ್ತ್ರಗಳ ಮಾರಾಟಕ್ಕೆ ಅಮೆರಿಕ ಮುಂದಾಗಿದೆ. ಬಿಡೆನ್ ಆಡಳಿತವು ಇದಕ್ಕೆ ಅನುಮೋದನೆ ನೀಡಿದ್ದು ಈ ನಡುವೆ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಆಸ್ಟ್ರೇಲಿಯಾಕ್ಕೆ ಭೇಟಿ ನೀಡುತ್ತಿದ್ದು ಇದೇ ವೇಳೆ 13.9 ಶತಕೋಟಿ ಸುಧಾರಿತ ಯುದ್ಧ ವಿಮಾನಗಳ ಇಂಡೋನೇಷ್ಯಾಕ್ಕೆ ಮಾರಾಟವನ್ನು ಘೋಷಿಲಾಗಿದೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಬೆಳವಣಿಗೆಗಳ ಹೊರತಾಗಿಯೂ, ಚೀನಾ ಮುಕ್ತ ನಿಯಂತ್ರಣವನ್ನು ನಿಯಂತ್ರಿಸಲು ಹೊಸ ತಂತ್ರ ರೋಪಿಸಲಾಗಿದೆ. ಇಂಡೋನೇಷ್ಯಾಕ್ಕೆ 36 ಎಫ್-15 ಫೈಟರ್ ಜೆಟ್‍ಗಳು, ಇಂಜಿನ್‍ಗಳು ,ಯುದ್ಧಸಾಮಗ್ರಿಗಳು ಮತ್ತು ಸಂವಹನ ವ್ಯವಸ್ಥೆಗಳು ಸೇರಿದಂತೆ ಹಲವು ಉಪಕರಣಗಳು ಸಿಗಲಿವೆ, ರಾಜಕೀಯ ಸ್ಥಿರತೆ ಮತ್ತು ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಆರ್ಥಿಕ ಪ್ರಗತಿಗೆ ಶಕ್ತಿಯಾಗಿರುವ ಪ್ರಮುಖ ಪ್ರಾದೇಶಿಕ ಪಾಲುದಾರರ ಭದ್ರತೆಯನ್ನು ಸುಧಾರಿಸುಲು ಅಮೆರಿಕ ವಿದೇಶಾಂಗ ಇಲಾಖೆ ಜಾಣ ನಡೆ ಅನುಸರಿಸುತ್ತಿದೆ.
ಇಂಡೋನೇಷಾರಾಷ್ಟ್ರೀಯ ಭದ್ರತಾ ಉದ್ದೇಶಗಳನ್ನು ಬೆಂಬಲಿಸುತ್ತದೆ ಎಂದು ತಿಳಿಸಿದೆ. ಬಲವಾದ ಮತ್ತು ಪರಿಣಾಮಕಾರಿ ಸ್ವರಕ್ಷಣೆ ಸಾಮಥ್ರ್ಯವನ್ನು ಅಭಿವೃದ್ಧಿಪಡಿಸಲು ಮತ್ತು ನಿರ್ವಹಿಸಲು ಇಂಡೋನೇಷ್ಯಾಕ್ಕೆ ಸಹಾಯ ಮಾಡುವುದು ಅಮೆರಿಕ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಅತ್ಯಗತ್ಯ ಎಂದು ಅದು ಹೇಳಿದೆ.
