ತ್ಯಾಜ್ಯ ಸಂಸ್ಕರಣೆ ಸ್ವಾವಲಂಬನೆಯೇ ಇಂದೋರ್ ಯಶಸ್ಸಿಗೆ ಕಾರಣ

Social Share

ಇಂದೋರ್, ಅ.2-ಸತತ ಆರನೇ ಬಾರಿಗೆ ಇಂದೋರ್ ದೇಶದ ನಂಬರ್ 1 ಸ್ವಚ್ಚ ನಗರವಾಗಿ ಹೊರ ಹೊಮ್ಮಲು ಆ ನಗರ ಅಳವಡಿಸಿಕೊಂಡಿರುವ ತ್ಯಾಜ್ಯ ಸಂಸ್ಕರಣಾ ನೀತಿಯೇ ಕಾರಣ ಎನ್ನುವುದು ಇದೀಗ ಬಹಿರಂಗಗೊಂಡಿದೆ.

ಪ್ರತಿದಿನ 1,900 ಟನ್ ನಗರ ತ್ಯಾಜ್ಯವನ್ನು ಸಂಸ್ಕರಣೆ ಮಾಡುವ ಮೂಲಕ ಕೋಟ್ಯಂತರ ರೂಪಾಯಿಗಳನ್ನು ಗಳಿಸುವುದರ ಜೊತೆಗೆ ಅದರಿಂದ ಉತ್ಪಾದಿಸುವ ಜೈವಿಕ ಇಂಧನವನ್ನು ಬಸ್ ಸಂಚಾರಕ್ಕೆ ಅಳವಡಿಸಿಕೊಂಡಿರುವುದರಿಂದಲೇ ಇಂದೋರ್ ದೇಶದ ಅತ್ಯಂತ ಸ್ವಚ್ಚ ನಗರಿ ಖ್ಯಾತಿಗೆ ಒಳಗಾಗಲು ಕಾರಣ ಎನ್ನುಲಾಗಿದೆ.

ಇಂದೋರ್ ಅಳವಡಿಸಿಕೊಂಡಿರುವ ಈ ತ್ಯಾಜ್ಯ ನೀತಿಯನ್ನು ಬೆಂಗಳೂರಲ್ಲೂ ಅಳವಡಿಸಿಕೊಳ್ಳುವುದು ಸೂಕ್ತ ಆಗಲಾದರೂ ವಿಶ್ವದ ಸಿಲಿಕಾನ್ ಸಿಟಿ ಎಂದು ಗುರುತಿಸಿಕೊಂಡಿರುವ ಬೆಂಗಳೂರು ಸ್ವಚ್ಚ ನಗರಿಯ ಗರಿಮೆಗೆ ಪಾತ್ರವಾಗಬಹುದೆನೋ.

35 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಮಧ್ಯಪ್ರದೇಶದ ವಾಣಿಜ್ಯ ರಾಜಧಾನಿ ಎಂದು ಗುರುತಿಸಿಕೊಂಡಿರುವ ಇಂದೋರ್‍ನಲ್ಲಿ ಪ್ರತಿದಿನ 1,200 ಟನ್ ಒಣ ಮತ್ತು 700 ಟನ್ ಹಸಿ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದರೂ ಆ ನಗರ ತೊಟ್ಟಿ ಮುಕ್ತ ಪ್ರದೇಶವೆಂಬ ಹಿರಿಮೆಗೂ ಪಾತ್ರವಾಗಿದೆ.

ನಮ್ಮಲ್ಲಿ 850 ವಾಹನಗಳಿವೆ, ಮನೆಗಳು ಮತ್ತು ವ್ಯಾಪಾರ ಸಂಸ್ಥೆಗಳಿಂದ ತ್ಯಾಜ್ಯವನ್ನು ಸಂಗ್ರಹಿಸಿ ಅದನ್ನು ಆರು ವಿಭಾಗಗಳಾಗಿ ವಿಂಗಡಿಸಿ ವಿಲೇವಾರಿ ಮಾಡುವ ಮೂಲಕ ನಾವು ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದೇವೆ ಎಂದು ಇಂದೋರ್ ಮುನ್ಸಿಪಲ್ ಕಾಪೆರ್ರೇಷನ್ ಸ್ವಚ್ಛತಾ ವಿಭಾಗದ ಸೂಪರಿಂಟೆಂಡೆಂಟ್ ಎಂಜಿನಿಯರ್ ಮಹೇಶ್ ಶರ್ಮಾ ತಿಳಿಸಿದ್ದಾರೆ.

ಕಸದ ವಾಹನಗಳಲ್ಲಿ ವಿವಿಧ ರೀತಿಯ ತ್ಯಾಜ್ಯಕ್ಕಾಗಿ ಪ್ರತ್ಯೇಕ ವಿಭಾಗಗಳಿವೆ. ಒಂದೊಂದು ಕಂಪಾರ್ಟ್‍ಮೆಂಟ್‍ಗಳಲ್ಲಿ ತಿರಸ್ಕರಿಸಿದಸ್ಯಾನಿಟರಿ ನ್ಯಾಪ್‍ಕಿನ್, ಹಸಿ, ಒಣ ಮತ್ತಿತರ ಕಸಗಳನ್ನು ಪ್ರತ್ಯೇಕವಾಗಿ ಸಂಗ್ರಹ ಮಾಡುತ್ತಿರುವುದರಿಂದ ಕಸ ವಿಲೇವಾರಿ ನಮಗೆ ಸಮಸ್ಯೆಯಾಗಿಲ್ಲ ಎನ್ನುತ್ತಾರೆ ಅವರು.

ಹಸಿ ತ್ಯಾಜ್ಯದಿಂದ ಜೈವಿಕ ಇಂಧನ ತಯಾರಿಸಿ ಅದನ್ನು 150 ಬಸ್‍ಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಈ ಇಂಧನ ವಾಣಿಜ್ಯ ಇಂಧನಕ್ಕಿಂತ ಅಗ್ಗವಾಗಿರುವುದು ಪ್ಲಸ್ ಪಾಯಿಂಟ್ ಎಂದು ಅವರು ಹೇಳಿದ್ದಾರೆ. ಕಳೆದ ಹಣಕಾಸು ವರ್ಷದಲ್ಲಿ ತ್ಯಾಜ್ಯ ವಿಲೇವಾರಿಯಿಂದ 14.45 ಕೋಟಿ ರೂ. ಆದಾಯ ಬಂದಿದೆ ಹೀಗಾಗಿ ನಾವು ದೇಶದ ಅತ್ಯಂತ ಸ್ವಚ್ಚ ನಗರಿ ಪ್ರಶಸ್ತಿ ಪಡೆದುಕೊಂಡಿದ್ದೇವೆ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

Articles You Might Like

Share This Article