ಇಂದೋರ್‌ : ವಸತಿ ಕಟ್ಟಡದಲ್ಲಿ ಅಗ್ನಿ ಅವಘಡ, 7 ಮಂದಿ ಸಾವು

ಇಂದೋರ್ (ಮಧ್ಯಪ್ರದೇಶ),ಮೇ 7 – ಇಂದೋರ್‍ನ ವಿಜಯ್ ನಗರ ಪ್ರದೇಶದ ವಸತಿ ಕಟ್ಟಡದಲ್ಲಿ ಇಂದು ಮುಂಜಾನೆ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಲೆಕ್ಟ್ರಿಕ್ ಮೀಟರ್‍ನಲ್ಲಿ ಶಾರ್ಟ್ ಸಕ್ರ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡಿತು, ನಂತರ ವಸತಿ ಸಂಕೀರ್ಣದ ಪಾರ್ಕಿಂಗ್‍ನಲ್ಲಿದ್ದ ವಾಹನಗಳನ್ನು ಆವರಿಸಿದೆ ,ನಂತರ ಜನವಸತಿ ಪ್ಲಾಟ್‍ಗೂ ಹಬ್ಬಿದೆ ಎಂದು ವಿಜಯನಗರ ಪೊಲೀಸ್ ಠಾಣೆ ಇನ್ಸೆಪೆಕ್ಟರ್ ತಹಜೀಬ್ ಖಾಜಿ ಸ್ಧುಧಿಗಾರರಿಗೆ ತಿಳಿಸಿದ್ದಾರೆ.

ಸುಮಾರು ಮುಂಜಾನೆ 5 ಗಂಟೆಗೆ ಬೆಂಕಿ ಕಾಣಿಸಿಕೊಂಡಿದ್ದು ,ಪ್ಲಾಟ್‍ನಲ್ಲಿದ್ದ ಹೆಚ್ಚಿನ ಜನರು ಮಲಗಿದ್ದರು ಎಂದು ಹೇಳಲಾಗಿದೆ.ಕೆಲವರು ಬಾಗಿಲು ಬಡಿದು ಎಚ್ಚರಿಸಿದ್ದಾರೆ ,ಜೀವ ಉಳಿಸಿಕೊಳ್ಳಲು ಮೆಟ್ಟಿಲು ಇಳಿದು ಹೊರಗೆ ಬಂದಿದ್ದಾರೆ,ಹಲವು ಮನೆಗಳಲ್ಲಿ ಗೃಹೊಪಯೊಗಿ ವಸ್ತುಗಳು ಸುಟ್ಟುಹೊಗಿದೆ.

7 ಮೃತದೇಹಗಳನ್ನು ಕಟ್ಟಡದಿಂದ ಹೊರತೆಗೆಯಲಾಗಿದ್ದು, 11 ಮಂದಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ, ಹೆಚ್ಚಿನ ಸಾವುಗಳು ಉಸಿರುಕಟ್ಟುವಿಕೆಯಿಂದ ಸಂಭವಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿಶಾಮಕ ತಂಡ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ ಮತ್ತು ತನಿಖೆ ನಡೆಯುತ್ತಿದೆ ಎಂದು ಹೇಳಿದರು.