ಕಾಸಿಯಾದಲ್ಲಿ ಅ.21ರಿಂದ ಕೈಗಾರಿಕಾ ವಸ್ತು ಪ್ರದರ್ಶನ

ಕೇಂದ್ರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವಾಲಯ, ಬೆಂಗಳೂರಿನ ಎಂಎಸ್‍ಎಂಇ ಹಾಗೂ ಅಭಿವೃದ್ಧಿ ಮತ್ತು ಸೌಲಭ್ಯ ಕಛೇರಿ ಸಹಯೋಗದಲ್ಲಿ ಇದೇ 21 ಮತ್ತು 22 ರಂದು ಕಾಸಿಯ ಉದ್ಯೋಗ ಭವನದಲ್ಲಿ ಮಾರಾಟಗಾರರ ಅಭಿವೃದ್ಧಿ ಕಾರ್ಯಕ್ರಮ ಮತ್ತು ಕೈಗಾರಿಕ ವಸ್ತು ಪ್ರದರ್ಶನ ಆಯೋಜಿಸುತ್ತಿದೆ
Social Share

ಬೆಂಗಳೂರು, ಅ.19- ಕೇಂದ್ರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವಾಲಯ, ಬೆಂಗಳೂರಿನ ಎಂಎಸ್‍ಎಂಇ ಹಾಗೂ ಅಭಿವೃದ್ಧಿ ಮತ್ತು ಸೌಲಭ್ಯ ಕಛೇರಿ ಸಹಯೋಗದಲ್ಲಿ ಇದೇ 21 ಮತ್ತು 22 ರಂದು ಕಾಸಿಯ ಉದ್ಯೋಗ ಭವನದಲ್ಲಿ ಮಾರಾಟಗಾರರ ಅಭಿವೃದ್ಧಿ ಕಾರ್ಯಕ್ರಮ ಮತ್ತು ಕೈಗಾರಿಕ ವಸ್ತು ಪ್ರದರ್ಶನ ಆಯೋಜಿಸುತ್ತಿದೆ ಎಂದು ಕಾಸಿಯ ಅಧ್ಯಕ್ಷ ಕೆ.ಎನ್.ನರಸಿಂಹಮೂರ್ತಿ ತಿಳಿಸಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೈಗಾರಿಕಾ ವಸ್ತು ಪ್ರದರ್ಶನವನ್ನು ರಾಜ್ಯದ ಸಣ್ಣ ಕೈಗಾರಿಕೆಗಳ ಸಚಿವ ಎಂ.ಟಿ.ಬಿ. ನಾಗರಾಜ್ ಉದ್ಘಾಟಿಸಲಿದ್ದಾರೆ. ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಂಡೆ, ಎಂಎಸ್‍ಎಂಇ, ಮುಖ್ಯ ಅತಿಥಿಗಳಾಗಿ,ಎಂಎಸ್‍ಎಂಇ ಅಭಿವೃದ್ಧಿ ಮತ್ತು ಸೌಲಭ್ಯ ಕಛೇರಿ ನಿರ್ದೇಶಕ ಬಿ.ಆರ್. ಅಕಾದಾಸ್, ಪ್ರಧಾನ ವ್ಯವಸ್ಥಾಪಕ ಶ್ರೀವಾತ್ಸನ್ ವ್ಯವಸ್ಥಾಪಕ ನಿರ್ದೇಶಕರಾ ಸತ್ಯಾಂ ರನ್ನೋಗಿಮತ್ತು ಸುರೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಸಾರ್ವಜನಿಕ ವಲಯದ ಘಟಕಗಳು / ಸರ್ಕಾರಿ ಸಂಸ್ಥೆಗಳು, ಬೃಹತ್ ಕೈಗಾರಿಕೆಗಳು, ಬಹು ರಾಷ್ಟ್ರೀಯ ಕಂಪೆನಿಗಳು, ಮೂಲ ಪರಿಕರಗಳ ತಯಾರಕ (Original equipment manufacturers)ರಿಗೆ ಎಂಎಸ್‍ಎಂಇ ಘಟಕಗಳು ತಮ್ಮ ಉತ್ಪನ್ನಗಳನ್ನು ಸೇವೆಗಳನ್ನು ಮತ್ತು ಸಾಮಥ್ರ್ಯUಳನ್ನು ಪ್ರದರ್ಶಿಸಲು, ನಮ್ಮ ಮಾರಾಟ ಮತ್ತು ಮಾರುಕಟ್ಟೆ ಸಂಪರ್ಕ ಅಭಿವೃದ್ಧಿಪಡಿಸಲು ಪ್ರೋತ್ಸಾಹ ನೀಡುವ ಸಲುವಾಗಿ ಮಳಿಗೆಗಳನ್ನು ನೀಡಲಾಗುವುದು.

ವಿಮಾನದಲ್ಲಿ ಹಾವು ಪ್ರತ್ಯಕ್ಷ, ಬೆಚ್ಚಿಬಿದ್ದ ಪ್ರಯಾಣಿಕರು

ವಸ್ತು ಪ್ರದರ್ಶನದಲ್ಲಿ 80 ಎಂಎಸ್‍ಎಂಇ, ಘಟಕಗಳು ಭಾಗವಹಿಸಲಿದ್ದು, ಸಾರ್ವಜನಿಕ ವಲಯದ ಘಟಕಗಳು ಸೇರಿದಂತೆ ಉನ್ನತ ಮಟ್ಟದ ಬ್ಯಾಂಕುಗಳು ಭಾಗವಹಿಸಲಿವೆ.

ಪ್ರವೇಶ ಉಚಿತ: ಉದ್ದಿಮೆ ಪ್ರಾರಂಭಿಸಲು ಬಯಸುವ ಭಾವಿ ಉದ್ದಿಮೆದಾರರು, ಎಂಜಿನಿಯರಿಂಗ್, ಕಲೆ ಮತ್ತು ವಿಜ್ಞಾನ ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಉತ್ತಮ ತಿಳುವಳಿಕೆಗಾಗಿ ಕೈಗಾರಿಕಾ ಪ್ರದರ್ಶನಕ್ಕೆ ಭೇಟಿ ನೀಡಬಹುದು ಎಂದು ತಿಳಿಸಿದರು.

ದೇಶಿಯ ಶಸ್ತ್ರಾಸ್ತ್ರಗಳಿಗೆ ಪ್ರಧಾನಿ ಮೋದಿ ಮೆಚ್ಚುಗೆ

ಕಾಸಿಯಾ ವಿವಿಧ ಕೈಗಾರಿಕಾ ವಲಯಗಳಿಂದ ಭಾಗವಹಿಸುವವರಿಗೆ ಬಿಟಿ ಸಭೆಗಳನ್ನು ಏರ್ಪಸುತ್ತದೆ. ನಾಳೆ ನಡೆಯಲಿರುವ ಸಮಾರೋಪ ಸಮಾರಂಭಲ್ಲಿ ಉತ್ತಮ ಮಳಿಗೆಗಳಿಗೆ ಪ್ರಶಸ್ತಿ ನೀಡಲಾಗುವುದು. ಎಂಎಸಎಂಇ ಕೈಗಾರಿಕಾ ವಸ್ತು ಪ್ರದರ್ಶನವನ್ನು ಕೆನರಾ ಬ್ಯಾಂಕ್, ಬ್ಯಾಂಕ್ ಆಪ್ ಬರೋಡಾ, ಎಸ್‍ಐಡಿಬಿಐ ಮತ್ತು ಯೂನಿಯನ್ ಬ್ಯಾಂಕ್ ಬೆಂಬಲಿಸುತ್ತವೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಪ್ರವೀಣ್ ಜಂಟಿ ಕಾರ್ಯದರ್ಶಿ ವೆಂಕಟೇಶನ್, ಜಂಟಿ ಕಾರ್ಯದರ್ಶಿ ರೂರಲ್ ಭೀಮಾಶಂಕರ್ ಪಾಟೀಲï, ಡೆಪ್ಯುಟಿ ಡೈರೆಕ್ಟರ್ ಎಂಎಸ್‍ಎಂಇ ಗೋಪಿನಾಥ್ ರಾವ್ ಉಪಸ್ಥಿತರಿದ್ದರು.

Articles You Might Like

Share This Article