ಕೈಗಾರಿಕೆಗಳಿಗೆ ಉತ್ತೇಜನ : 1747.37 ಕೋಟಿಯ 35 ಯೋಜನೆಗಳಿಗೆ ಅನುಮೋದನೆ

Social Share

ಬೆಂಗಳೂರು ಅ.22- ಕೈಗಾರಿಕೆಗಳ ಬೆಳವಣಿಗೆ ಹಾಗೂ ಉದ್ಯೋಗ ಸೃಷ್ಟಿಗೆ ಮತ್ತಷ್ಟು ಉತ್ತೇಜನ ನೀಡಿರುವ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು 1747.37 ಕೋಟಿ ಬಂಡವಾಳ ಹೂಡಿಕೆಯ 35 ಯೋಜನೆಗಳಿಗೆ ಅನುಮೋದನೆ ನೀಡಿದೆ.

ಕರ್ನಾಟಕ ಉದ್ಯೋಗ ಮಿತ್ರ ಕಚೇರಿಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅಧ್ಯಕ್ಷತೆಯಲ್ಲಿ ನಡೆದ 135ನೇ ರಾಜ್ಯ ಮಟ್ಟದ ಏಕಗಾವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ ಬಂಡವಾಳ ಹೂಡಿಕೆಯ ಯೋಜನೆಗೆ ಅನುಮೋದನೆ ನೀಡಲಾಗಿದೆ.

ಒಟ್ಟು 35 ಬೃಹತ್ ಮತ್ತು ಮಧ್ಯಮ ಯೋಜನೆಗಳಿಂದ 1747.47 ಕೋಟಿ ಬಂಡವಾಳ ಹೂಡಿಕೆಯಾಗಲಿದ್ದು , ಇದರಿಂದಾಗಿ 4904 ಉದ್ಯೋಗಗಳು ಸೃಷ್ಡಿಯಾಗಲಿವೆ ಎಂದು ಸಚಿವ ಮುರುಗೇಶ್ ಆರ್ ನಿರಾಣಿ ಅವರು ತಿಳಿಸಿದ್ದಾರೆ.

50 ಕೋಟಿ ರೂ.ಗೂ ಹೆಚ್ಚು ಬಂಡವಾಳ ಹೂಡಿಕೆಯ 8 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಇವುಗಳಿಂದ g949,11 ಕೋಟಿ ಬಂಡವಾಳ ಹೂಡಿಕೆಯಾಗಿ ಸುಮಾರು 2461 ಜನರಿಗೆ ಉದ್ಯೋಗಾವಕಾಶ ಲಭ್ಯವಾಗಲಿದೆ ಎಂದು ಹೇಳಿದರು.

ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಆರ್ಭಟ

15 ಕೋಟೆಯಿಂದ 50 ಕೋಟಿ ರೂ. ಒಳಗಿನ ಬಂಡವಾಳ ಹೂಡಿಕೆಯ 25 ಹೊಸ ಯೋಜನೆಗಳಿಗೆ ಸಮಿತಿಯು ಒಪ್ಪಿಗೆ ನೀಡಿದ್ದು, ಇವುಗಳಿಂದ ರೂ. 567.43 ಕೋಟಿ ಬಂಡವಾಳ ಹೂಡಿಕೆ ಹಾಗೂ 2443 ಜನರಿಗೆ ಉದ್ಯೋಗವಕಾಶ ಲಭ್ಯವಾಗಲಿದೆ.

ಹೆಚ್ಚುವರಿ ಬಂಡವಾಳ ಹೂಡಿಕೆಯ 2 ಯೋಜನೆಗೆ ಅನುಮೋದನೆ ನೀಡಿದ್ದು, ಇದರಿಂದ 230.83 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದೆ. ಮೇಲ್ಕಂಡ ಒಟ್ಟು 35ಯೋಜನೆಗಳಿಂದ ರೂ. 1747.37 ಕೋಟಿ ಬಂಡವಾಳ ಹೂಡಿಕೆಯಾಗಲಿದ್ದು, ಇವುಗಳಿಂದ 4904 ಜನರಿಗೆ ಉದ್ಯೋಗವಕಾಶ ಲಭ್ಯವಾಗಲಿದೆ.

ಪುನೀತ ಪರ್ವ ಕಾರ್ಯಕ್ರಮದಲ್ಲೇ ಅಪ್ಪು ಅಭಿಮಾನಿ ಸಾವು

ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ಆಯುಕ್ತೆ ಗುಂಜನ್ ಕೃಷ್ಣ,ಕೈಗಾರಿಕಾಭಿವೃದ್ಧಿ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕಾರ್ಯ ನಿರ್ವಾಹಣಾಕಾರಿಗಳು ಹ ಕಾರ್ಯಕಾರಿ ಸದಸ್ಯರು, ಕೆಐಎಡಿಬಿ, ವ್ಯವಸ್ಥಾಪಕ ನಿರ್ದೆಶಕರು, ಕರ್ನಾಟಕ ಉದ್ಯೋಗ ಮಿತ್ರ ಹಾಗೂ ವಿವಿಧ ಇಲಾಖೆಗಳ ಅಕಾರಿಗಳು ಹಾಜರಿದ್ದರು.

ಪ್ರಸ್ತಾವಿತ ಯೋಜನೆಗಳು
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್.
ಹೂಡಿಕೆ ರೂ. 170 ಕೋಟಿ ರೂ.
ಉದ್ಯೋಗ – 770

ಪ್ರಭಾರ್ಥಿ ಎಥ್ನಾಲ್ ಪ್ರೈ ಲಿಮಿಟೆಡ್.
ಹೂಡಿಕೆ – 150 ಕೋಟಿ ರೂ.
ಉದ್ಯೋಗ – 93

ಶ್ರೀ ವೇದ್ ಪ್ರಕಾಶ್ ಡಿಸ್ಟಿಲರಿ ಪೆಟ್ರೋ ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್,
ಹೂಡಿಕೆ – 149 ಕೋಟಿ ರೂ.
ಉದ್ಯೋಗ -72

ಅವಂಟಿನಿಯಾ ಆಗ್ರೋವೆಟ್
ಪ್ರೈ ಲಿಮಿಟೆಡ್.
ಹೂಡಿಕೆ 138.36 ಕೋಟಿ ರೂ.
ಉದ್ಯೋಗ- 65

ಎಸ್.ಕೆ. ಸ್ಟೀಲ್ಟೆಕ್ ಪ್ರೈವೇಟ್ ಲಿಮಿಟೆಡ್.
ಹೂಡಿಕೆ – 120 ಕೋಟಿ ರೂ.
ಉದ್ಯೋಗ -190

ಟ್ರಕ್‍ಗೆ ಬಸ್ ಡಿಕ್ಕಿ, 15 ಕಾರ್ಮಿಕರ ದುರ್ಮರಣ,ಮಧ್ಯಪ್ರದೇಶದಲ್ಲಿ ಘೋರ ದುರಂತ

ಬೆಂಗಳೂರು ಮೆಟಲರ್ಜಿಕಲ್ಸ್ ಪ್ರೈವೇಟ್ ಲಿಮಿಟೆಡ್.
ಹೂಡಿಕೆ – ರೂ. 100.29 ಕೋಟಿ ರೂ.
ಉದ್ಯೋಗ -300

ಶ್ರೀ ಲಕ್ಷ್ಮಿ ಸ್ಟೀಲ್ ಸಪ್ಲೈಯರ್ಸ್.
ಹೂಡಿಕೆ 64.28 ಕೋಟಿ ರೂ.
ಉದ್ಯೋಗ – 250

ಸೂರ್ಯ ಕೋಲ್ಡ್ ಸ್ಟೋರೇಜ್.
ಹೂಡಿಕೆ 56.38ಕೋಟಿ ರೂ.
ಉದ್ಯೋಗ -70.

ಗೋಪಾಲನ್ ಎಂಟರ್‍ಪ್ರೈಸಸ್ (ಲಾಜಿಸ್ಟಿಕ್ಸ್).
ಹೂಡಿಕೆ 48.46 ರೂ.
ಉದ್ಯೋಗ – 300

Articles You Might Like

Share This Article