ಲಾಕ್‍ಡೌನ್‍ನಿಂದ ಆರ್ಥಿಕತೆ ಕುಂಠಿತ: ಕಾಸಿಯಾ ಆತಂಕ

Social Share

ಬೆಂಗಳೂರು, ಜ.4- ಕಾಸಿಯಾ ವಿಶೇಷವಾಗಿ ಎಂಎಸ್‍ಎಂಇಗಳ ಸ್ಥಿತಿ ಬಗ್ಗೆ ಚಿಂತಿಸುತ್ತಿದೆ. ಪ್ರತಿದಿನ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳಿಂದಾಗಿ ರಾಜ್ಯ ಸರ್ಕಾರ ಲಾಕ್‍ಡೌನ್ ಅಥವಾ ಇತರ ಕಠಿಣ ಕ್ರಮಗಳ ರೂಪದಲ್ಲಿ ಯಾವುದೇ ರೀತಿಯ ಪ್ರಕ್ರಿಯೆ ಕೈಗೊಳ್ಳಬಾರದು ಎಂದು ಕಾಸಿಯಾ ಕೋರಿದೆ.
ಏಕೆಂದರೆ ಸಾಂಕ್ರಾಮಿಕ ರೋಗದ ಮೊದಲ ಮತ್ತು ಎರಡನೆಯ ಅಲೆಯ ಬಿಕ್ಕಟ್ಟಿನ ಸಮಯದಲ್ಲಿ ಘೋಷಿಸಲಾದ ಲಾಕ್‍ಡೌನ್‍ನಿಂದಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಸೂಕ್ಷ ್ಮ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳ ಭಯವನ್ನು ಪ್ರತಿಬಿಂಬಿಸುತ್ತದೆ. ಮತ್ತು ಲಾಕ್‍ಡೌನ್ ಘೋಷಿಸಿದಲ್ಲಿ ಬಹುತೇಕ ಉದ್ದಿಮೆದಾರರು ಅಭಿಪ್ರಾಯಪಟ್ಟಂತೆ ಉದ್ಯಮದ ಅಸ್ಥಿತ್ವ ವಿಶೇಷವಾಗಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಅಸ್ಥಿತ್ವ ಏನಾಗಬಹುದು ಎಂದು ಸಹ ಚಿಂತಿತವಾಗಿದೆ.
ಕೈಗಾರಿಕೆಗಳನ್ನು ಮತ್ತು ಕಚ್ಚಾ ಸಾಮಗ್ರಿಗಳ ಮಳಿಗೆಗಳನ್ನು ಭಾಗಶಃ ಅಥವಾ ಸಂಪೂರ್ಣವಾಗಿ ಮುಚ್ಚುವ ಮತ್ತು ಕೈಗಾರಿಕೆಗಳಿಗೆ ಕೈಗಾರಿಕಾ ಆಮ್ಲಜನಕದ ಪೂರೈಕೆಯನ್ನು ಕಡಿಮೆ ಮಾಡುವ ಬದಲು, ಅಗತ್ಯ ಶಿಷ್ಟಾಚಾರಗಳನ್ನು ಅನುಸರಿಸಿ ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಸಾಮೂಹಿಕ ಸಭೆಗಳನ್ನು ನಡೆಸುವ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಾಗರಿಕರು ಮುಖಗವುಸುಗಳನ್ನು ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರ ಗಮನಹರಿಸಬೇಕು ಎಂದು ಕಾಸಿಯಾ ಸೂಚಿಸಿದೆ.
ಹಿಂದಿನ ಲಾಕ್ ಡೌನ್ ಪರಿಣಾಮದಿಂದ ಈಗಾಗಲೇ ಸಾಕಷ್ಟು ಉದ್ಯಮಗಳು ಶಾಶ್ವತವಾಗಿ ಮುಚ್ಚಿವೆ. ಇಂತಹ ಸಮಯದಲ್ಲಿ ಮತ್ತೊಂದು ಲಾಕ್‍ಡೌನ್ ಘೋಷಿಸಿದಲ್ಲಿ ಮತ್ತಷ್ಟು ಉದ್ಯಮಗಳು ಶಾಶ್ವತವಾಗಿ ಮುಚ್ಚಲು ಕಾರಣವಾಗುತ್ತದೆ. ಏಕೆಂದರೆ ಉತ್ಪಾದನೆಯನ್ನು ದೀರ್ಘಕಾಲದ ವರೆಗೆ ಸ್ಥಗಿತಗೊಳಿಸುವುದರಿಂದ ಬದುಕುಳಿಯಲು ಕಷ್ಟಸಾಧ್ಯವಾಗುವುದು.
ಪೂರೈಕೆ ಸರಪಳಿಗಳ ಕೊಂಡಿಗಳು ಕಳಚಿಕೊಳ್ಳಲಿರುವುದರಿಂದ ಉದ್ಯಮಗಳು ವಿಶೇಷವಾಗಿ ಎಸ್‍ಎಂಇಗಳು ಸಂಪೂರ್ಣವಾಗಿ ನಾಶವಾಗುವುದಲ್ಲದೆ ಕಾರ್ಮಿಕರು ಶಾಶ್ವತವಾಗಿ ಉದ್ಯೋಗ ಕಳೆದುಕೊಳ್ಳುವ ಮೂಲಕ ನಿರುದ್ಯೋಗ ಸಮಸ್ಯೆ ಉಂಟು ಮಾಡುವುದಲ್ಲದೆ ಯಾವುದೇ ಸಮಯದಲ್ಲಿ ಆರ್ಥಿಕತೆಯ ಕುಸಿತ ಮರುಕಳಿಸಲಿದೆ ಎಂದು ಕಾಸಿಯಾ ಸಿಳಿಸಿದೆ.

Articles You Might Like

Share This Article