ಗಡಿಯಲ್ಲಿ ಒಳನುಸುಳುತ್ತಿದ್ದ ಉಗ್ರನನ್ನ ಹೊಡೆದುರುಳಿಸಿದ ಸೇನೆ

Social Share

ಶ್ರೀನಗರ,ಫೆ.16-ಗಡಿ ನುಸುಳಲು ಯತ್ನಿಸಿದ ಭಯೋತ್ಪಾದಕನೊಬ್ಬನನ್ನು ಹತ್ಯೆ ಮಾಡುವಲ್ಲಿ ರಕ್ಷಣಾಪಡೆಗಳು ಯಶಸ್ವಿಯಾಗಿವೆ.ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಉಗ್ರ ಗಡಿ ನುಸುಳಲು ಯತ್ನಿಸಿದಾದ ಭದ್ರತಾ ಪಡೆಗಳು ಆತನನ್ನು ಹತ್ಯೆ ಮಾಡಿವೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ಗಡಿ ನಿಯಂತ್ರಣ ರೇಖೆ ಬಳಿ ಉಗ್ರರು ಗಡಿ ನುಸುಳಲು ಹವಣಿಸುತ್ತಿದ್ದಾರೆ ಎಂಬ ಬಗ್ಗೆ ಬಂದ ಖಚಿತ ಮಾಹಿತಿಯನ್ನಾಧರಿಸಿ ಭದ್ರತಾ ಪಡೆಗಳು ಕಾರ್ಯಚರಣೆ ನಡೆಸುತ್ತಿದ್ದವು.

ಈ ಸಂದರ್ಭದಲ್ಲಿ ಉಗ್ರನೊಬ್ಬ ಸೈದೋರಾ ಫಾರ್ವರ್ಡ್ ಪ್ರದೇಶದಲ್ಲಿ ಗಡಿ ನುಸುಳಲು ಯತ್ನಿಸುತ್ತಿದ್ದ ಉಗ್ರರ ಕಾರ್ಯವನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿವೆ. ಈ ಕಾರ್ಯಚರಣೆ ವೇಳೆ ಓರ್ವ ಉಗ್ರ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾನೆ ಎಂದು ಸೇನಾಧಿಕಾರಿಗಳು ಟ್ವಿಟರ್‍ನಲ್ಲಿ ಮಾಹಿತಿ ನೀಡಿದ್ದಾರೆ.

ಸ್ಥಳದಲ್ಲಿ ಶೋಧ ಕಾರ್ಯ ಮುಂದುವರೆಸಲಾಗಿದೆ. ಯಾವುದೆ ದುಷ್ಟಶಕ್ತಿಗಳು ಗಡಿ ನುಸುಳಲು ಭಾರತೀಯ ಸೇನೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಸೇನಾ ಮೂಲಗಳು ತಿಳಿಸಿವೆ.

#Infiltration, #foiled, #J&K’s, #Kupwara, #TerroristKilled,

Articles You Might Like

Share This Article