ಮತ್ತೊಮ್ಮೆ ಕೇಂದ್ರ ಸರ್ಕಾರದ ಟ್ವಿಟರ್ ಖಾತೆ ಹ್ಯಾಕ್

Social Share

ನವದೆಹಲಿ, ಜ.12- ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರಾಂಗ ಇಲಾಖೆಯ ಟ್ವಿಟರ್ ಖಾತೆ ಹ್ಯಾಕ್ ಆಗಿದ್ದು, ನುಸುಳುಕೋರರು ಇಲಾಖೆಯ ಖಾತೆಯ ಹೆಸರನ್ನು ಎಲೋನ್ ಮುಸ್ಕ್ ಎಂದು ಬದಲಾವಣೆ ಮಾಡಿ, ಗ್ರೆಟ್ ಜಾಬ್ ಎಂದು ಟ್ವಿಟ್ ಮಾಡಿದ್ದಾರೆ. ಈ ಮೂಲಕ ಡಿಜಿಟಲ್ ಇಂಡಿಯಾಗೆ ಸವಾಲು ಎದುರಾಗಿದೆ.
ಕೆಲವೇ ಸಮಯದಲ್ಲಿ ಮಾಹಿತಿ ಮತ್ತು ಪ್ರಸಾರಾಂಗ ಇಲಾಖೆ ಖಾತೆಯನ್ನು ಮರುಗಳಿಕೆ ಮಾಡಿಕೊಂಡಿದ್ದು, ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಪ್ರೋಪೈಲ್ ಚಿತ್ರ ಮತ್ತು ಹ್ಯಾಕರ್ ಪೋಸ್ಟ್ ಮಾಡಿದ ಕೆಲವು ಲಿಂಕ್‍ಗಳನ್ನು ಖಾತೆಯಲ್ಲಿ ಡಿಲಿಟ್ ಮಾಡಲಾಗಿದೆ.
ಕಳೆದ ಡಿಸೆಂಬರ್ 12ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಖಾತೆ ಹ್ಯಾಕ್ ಮಾಡಲಾಗಿತ್ತು. ಅದನ್ನು ಕೂಡಲೇ ಮರುಗಳಿಕೆ ಮಾಡಲಾಯಿತು. ಜನವರಿ 3ರಂದು ಇಂಡಿಯನ್ ಕೌನ್ಸಿಲ್ ಆಫ್ ವಲ್ರ್ಡ್ ಅಫೈರ್ (ಐಸಿಡಬ್ಲ್ಯೂಎ), ಭಾರತೀಯ ವೈದ್ಯಕೀಯ ಪರಿಷತ್ (ಐಎಂಎ), ಮನ್ನ್ ದೇಶಿ ಮಹಿಳಾ ಬ್ಯಾಂಕ್ ಖಾತೆಗಳು ಹ್ಯಾಕ್ ಆಗಿದ್ದವು.
ಜನವರಿ 3ರಂದು ಮತ್ತು ಇಂದು ಹ್ಯಾಕ್ ಮಾಡಿರುವ ವ್ಯಕ್ತಿ ಖಾತೆ ಹೆಸರು ಬದಲಾವಣೆಗೆ ಒಂದೇ ರೀತಿಯ ಅಕ್ಷರಗಳನ್ನು ಬಳಕೆ ಮಾಡಿರುವುದು ಕಂಡು ಬಂದಿದೆ. ಅಮೇಜಿಂಗ್ ಫೋಸ್ಟ್ ಮಾಡಿದ್ದಾನೆ. ಆದರೆ ಎರಡು ಪ್ರಕರಣಗಳು ಬೇರೆ ಬೇರೆ ಎಂದು ಹೇಳಲಾಗಿದೆ.

Articles You Might Like

Share This Article