ಸೈಬರ್ ದಾಳಿಗಳ ಬಗ್ಗೆ ಎಚ್ಚರ ಅಗತ್ಯ : ರಾಜನಾಥ್‍ಸಿಂಗ್

Social Share

ನವದೆಹಲಿ,ನ.10- ಭವಿಷ್ಯದಲ್ಲಿ ಯುದ್ಧದ ಸ್ವರೂಪಗಳು ಬದಲಾಗಲಿದ್ದು, ಸೈಬರ್ ದಾಳಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಮತ್ತು ಅದನ್ನು ನಿಭಾಯಿಸುವ ಮೂಲ ಸಂಪನ್ಮೂಲಗಳನ್ನು ಬಲಿಷ್ಠಗೊಳಿಸಬೇಕೆಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್‍ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ನ್ಯಾಷನಲ್ ಡಿಫೆನ್ಸ್ ಕಾಲೇಜಿನಲ್ಲಿ ಭದ್ರತೆ ಮತ್ತು ವಾಸ್ತವ ಸಮಗ್ರ ಉದ್ಯಮಶೀಲತೆ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ಜಾಗತಿಕ ಕ್ರಮಾಂಕದ ಮೇಲೆ ನಂಬಿಕೆ ಹೊಂದಿಲ್ಲ. ಆದರೆ, ಕೆಲವರು ತಮ್ಮನ್ನು ತಾವು ಇತರರಿಗಿಂತಲೂ ಶ್ರೇಷ್ಠರು ಎಂದು ಭಾವಿಸಿಕೊಳ್ಳುತ್ತಾರೆ ಎಂದು ಪರೋಕ್ಷವಾಗಿ ತಿರುಗೇಟು ನೀಡಿದರು.

ನಾಳೆ ಬೆಂಗಳೂರಲ್ಲಿ ಮೋದಿ ಮೇನಿಯಾ, ಇಲ್ಲಿದೆ ಕಾರ್ಯಕ್ರಮಗಳ ಕಂಪ್ಲೀಟ್ ಡೀಟೇಲ್ಸ್

ಭಾರತ ಸದಾಕಾಲ ಮಾನವ ಸಮಾನತೆ ಮತ್ತು ಘನತೆಯ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲು ಆಸಕ್ತಿ ಹೊಂದಿದೆ. ನಮ್ಮ ಪುರಾತನ ಭದ್ರಬುನಾದಿ ಮತ್ತು ನೈತಿಕ ತಳಹದಿ ಸಬಲತೆಯನ್ನು ಹೆಚ್ಚಿಸಿದೆ. ನಮ್ಮ ಸ್ವಾತಂತ್ರ ಹೋರಾಟದಲ್ಲೂ ಅತ್ಯುನ್ನತ ಮೌಲ್ಯಯುತ ಕಲ್ಲು ಹಾಸಿನ ಮೇಲೆ ನಾವು ನಡೆದಿದ್ದೇವೆ ಎಂದು ಹೇಳಿದ್ದಾರೆ.

ಭಾರತದ ಇಂಡೋಪೆಸಿಫಿಕ್ ಗಡಿ ಭಾಗದಲ್ಲಿ ಚೀನಾದ ಸೇನಾ ಜಮಾವಣೆ ಹೆಚ್ಚುತ್ತಿರುವ ಸಂದರ್ಭದಲ್ಲಿ ರಕ್ಷಣಾ ಸಚಿವರ ಹೇಳಿಕೆ ಗಮನ ಸೆಳೆದಿದೆ.

Articles You Might Like

Share This Article