ಬೆಂಗಳೂರು,ಮಾ.11- ಮಾಹಿತಿ ತಂತ್ರಜ್ಞಾನದ ದಿಗ್ಗಜ ಸಂಸ್ಥೆ ಇನೋಸಿಸ್ ಅಧ್ಯಕ್ಷ ಸ್ಥಾನಕ್ಕೆ ಮೋಹಿತ್ ಜೋಶಿ ರಾಜೀನಾಮೆ ನೀಡಿದ್ದಾರೆ. ಸಂಸ್ಥೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿರುವ ಜೋಶಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮುಂದಿನ ಪೀಳಿಗೆಯ ಡಿಜಿಟಲ್ ಸೇವೆಗಳು ಮತ್ತು ಕನ್ಸಲ್ಟಿಂಗ್‍ನಲ್ಲಿ ಜಾಗತಿಕ ಮುಂಚೂಣಿಯಲ್ಲಿರುವ ಇನೋಸಿಸ್ ಅಧ್ಯಕ್ಷ ಸ್ಥಾನಕ್ಕೆ ಮೋಹಿತ್ ಜೋಶಿ ಅವರ ರಾಜೀನಾಮೆ ನೀಡಿರುವುದನ್ನು ಸಂಸ್ಥೆ ಖಚಿತಪಡಿಸಿದೆ.
ಇಂದಿನಿಂದ ಜೋಶಿ ಅವರು ರಜೆಯ ಮೇಲೆ ತೆರಳಲಿದ್ದಾರೆ ಹಾಗೂ ಅವರ ಅಧ್ಯಕ್ಷ ಸ್ಥಾನದ ಅವಧಿ ಜೂನ್ ತಿಂಗಳಿನಲ್ಲಿ ಅಂತ್ಯಗೊಳ್ಳಲಿದೆ ಅವರ ಇಲ್ಲಿವರೆಗಿನ ಸೇವೆ ಸಂಸ್ಥೆಯ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ನಿರ್ದೇಶಕ ಮಂಡಳಿ ತಿಳಿಸಿದೆ.
ಜೈಲಿಗೆ ಹಾಕಬಹುದು ನನ್ನ ಉತ್ಸಾಹ ಕುಂದಿಸಲು ನಿಮ್ಮಿಂದ ಸಾಧ್ಯವಿಲ್ಲ : ಮನೀಶ್ ಸಿಸೋಡಿಯಾ
ಕಂಪನಿಯ ಅಧ್ಯಕ್ಷರಾಗಿ, ಮೋಹಿತ್ ಜೋಶಿ ಅವರು ಇನೋಸಿಸ್‍ನಲ್ಲಿ ಹಣಕಾಸು ಸೇವೆಗಳು ಮತ್ತು ಆರೋಗ್ಯ, ಜೀವ ವಿಜ್ಞಾನ ವ್ಯವಹಾರಗಳಿಗೆ ಜವಾಬ್ದಾರರಾಗಿದ್ದರು. ಜೊತೆಗೆ, ಅವರು ಎಡ್ಜ್‍ವರ್ವ್ ಸಿಸ್ಟಮ್ ನ ಅಧ್ಯಕ್ಷರಾಗಿದ್ದರು ಹಾಗೂ ನಮ್ಮ ಗ್ಲೋಬಲ್ ಬ್ಯಾಂಕಿಂಗ್ ವೇದಿಕೆಯಾದ ಫಿನಾಕಲ್ ಅನ್ನು ಒಳಗೊಂಡಿರುವ ಸಂಸ್ಥೆಯ ಸಾಫ್ಟ್‍ವೇರ್ ವ್ಯವಹಾರವನ್ನು ಮುನ್ನಡೆಸಿದರು.
ಕೆಪಿಸಿಸಿ ಕಾರ್ಯಧ್ಯಕ್ಷ ಆರ್. ಧೃವ ನಾರಾಯಣ್ ನಿಧನ
ರಾಜೀನಾಮೆ ನೀಡಿದ ನಂತರ ಜೋಶಿ ಅವರು ಟೆಕ್ ಮಹೀಂದ್ರಾದಲ್ಲಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.
Infosys, president, Mohit Joshi, resigns,