ವಾಷಿಂಗ್ಟನ್,ಫೆ.14- ಭಾರತ ಮತ್ತು ಅಮೆರಿಕ ನಡುವೆ ಹಲವು ಒಪ್ಪಂದಗಳನ್ನೂ ಕೈಗೊಳ್ಳಲಾಗಿದೆ. ಇದು ವಸ್ತುನಿಷ್ಠ ಹಾಗೂ ಫಲಪ್ರದಾಯಕ ಭೇಟಿ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ಬಗ್ಗೆ ಮೋದಿ ಅಭಿಪ್ರಾಯಪಟ್ಟಿದ್ದಾರೆ. 2030ರ ವೇಳೆಗೆ ಭಾರತ-ಅಮೆರಿಕ ವ್ಯಾಪಾರವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ 500 ಶತಕೋಟಿ ಡಾಲರ್‌ಗೆ ಹೆಚ್ಚಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಹೇಳಿದ್ದಾರೆ.
ಉಭಯ ನಾಯಕರು ಮಾತುಕತೆಯ ನಂತರ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಎರಡೂ ಕಡೆಯಿಂದಲೂ ಶೀಘ್ರದಲ್ಲೇ ಪ್ರಮುಖ ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳಲು ನೋಡುತ್ತಿದ್ದಾರೆ. ಕೆಲವು ಅಮೆರಿಕನ್ ಉತ್ಪನ್ನಗಳ ಮೇಲೆ ಭಾರತ ವಿಧಿಸಿರುವ ಆಮದು ಸುಂಕಗಳನ್ನು ತೀರಾ ಅನ್ಯಾಯದ ಕಠಿಣ ಕ್ರಮ ಎಂದು ಕರೆದರು.
ತಮ್ಮ ಅಮೆರಿಕಾ ಭೇಟಿಯಲ್ಲಿ ಪ್ರಧಾನಿ ಮೋದಿ ಅವರು ವ್ಯಾಪಾರ ಮತ್ತು ತಂತ್ರಜ್ಞಾನ, ರಕ್ಷಣೆ ಮತ್ತು ಭದ್ರತೆ, ಇಂಧನ ಮತ್ತು ಜನರ ನಡುವಿನ ಸಂಬಂಧಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಉನ್ನತ ಮಟ್ಟದ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಮೋದಿ ಅವರೊಂದಿಗಿನ ಮಾತುಕತೆಯ ನಂತರ, ಟ್ರಂಪ್ ಅವರು ಅಮೆರಿಕಾ ಶತಕೋಟಿ ಡಾಲರ್‌ಗಳಷ್ಟು ಮಿಲಿಟರಿ ಸರಬರಾಜುಗಳನ್ನು ಹೆಚ್ಚಿಸುವ ಭಾಗವಾಗಿ ದೆಹಲಿಗೆ ಈ-35 ಫೈಟರ್ ಜೆಟ್‌ಗಳನ್ನು ಒದಗಿಸಲು ದಾರಿ ಮಾಡಿಕೊಡುತ್ತಿದೆ ಎಂದು ಘೋಷಿಸಿದರು.
ಭಾರತಕ್ಕೆ ಎಫ್ -35 ಸ್ಟೆಲ್ತ್ ಯುದ್ಧ ವಿಮಾನಗಳನ್ನು ಒದಗಿಸಲು ನಾವು ದಾರಿ ಮಾಡಿಕೊಡುತ್ತಿದ್ದೇವೆ.
ಎಫ್ 35 ಜೆಟ್‌ಗಳನ್ನು ವಿಶ್ವದ ಅತ್ಯಂತ ಮಾರಕ, ಬದುಕುಳಿಯಬಹುದಾದ ಮತ್ತು ಸಂಪರ್ಕಿತ ಯುದ್ಧ ವಿಮಾನಗಳು ಎಂದು ಕರೆಯಲಾಗುತ್ತದೆ. ಪ್ರಪಂಚದಾದ್ಯಂತದ ಮೂಲಭೂತ ಇಸ್ಲಾಮಿಕ್ ಭಯೋತ್ಪಾದನೆಯ ಬೆದರಿಕೆಯನ್ನು ಎದುರಿಸಲು ಭಾರತ ಮತ್ತು ಅಮೆರಿಕ ಮುಂದಿನ ದಿನಗಳಲ್ಲಿ ಇನ್ನಷ್ಟು ಬಲಿಷ್ಠವಾಗಿ ಕೆಲಸ ಮಾಡುತ್ತದೆ ಎಂದರು.
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಅಮೆರಿಕಕ್ಕೆ ಭೇಟಿ ನೀಡಿದ್ದು ಅವರ ಪ್ರವಾಸ ಅತ್ಯಂತ ಫಲಪ್ರದವಾಗಿ ಮುಗಿಯಿತು ಎಂದು ಹೇಳಿದರು.
ಅಧ್ಯಕ್ಷ ಟ್ರಂಪ್ ಅವರ ಎರಡನೇ ಅವಧಿಯ ಅಧಿಕಾರ ಸ್ವೀಕಾರದ ನಂತರ ಇದು ಪ್ರಧಾನಿಯವರ ಮೊದಲ ಭೇಟಿ ಇದಾಗಿದೆ. ಇಬ್ಬರೂ ನಾಯಕರು ಭಾರತ-ಅಮೆರಿಕ ಸಂಬಂಧಕ್ಕೆ ನೀಡಿರುವ ಆದ್ಯತೆಯ ಸಂಕೇತವಾಗಿದೆ. ಟ್ರಂಪ್ ಮತ್ತು ಪ್ರಧಾನಿ ಮೋದಿ ಅವರು ಅಮೆರಿಕವನ್ನು ಭಾರತಕ್ಕೆ ತೈಲ ಮತ್ತು ಅನಿಲದ ನಂಬರ್ ಒನ್ ಪೂರೈಕೆದಾರವನ್ನಾಗಿ ಮಾಡುವ ಒಪ್ಪಂದಕ್ಕೆ ಬಂದಿದ್ದಾರೆ ಎಂದು ಹೇಳಿದರು.
ಇದು ಸುಮಾರು 45 ಬಿಲಿಯನ್ ಯುಎಸ್ ಡಾಲರ್‌ಗಳಷ್ಟಿರುವ ಭಾರತದೊಂದಿಗಿನ ಅಮೆರಿಕದ ವ್ಯಾಪಾರ ಕೊರತೆಯನ್ನು ಕಡಿಮೆ ಮಾಡುವ ಕ್ರಮಗಳ ಭಾಗವಾಗಿರಬೇಕೆಂದು ಸೂಚಿಸಿದರು. ಒಟ್ಟಾರೆ ರಕ್ಷಣಾ ಪಾಲುದಾರಿಕೆಯನ್ನು ವಿಸ್ತರಿಸಲು ಎರಡೂ ಕಡೆಯವರು ನಿರ್ಧರಿಸಿದ್ದಾರೆ ಎಂದು ತಿಳಿಸಿದರು.
ವ್ಯಾಪಾರ ಕೊರತೆಯನ್ನು ತಗ್ಗಿಸಲು ಭಾರತವು ಅಮೆರಿಕದಿಂದ ಹೆಚ್ಚಿನ ತೈಲ, ಅನಿಲ ಮತ್ತು ಮಿಲಿಟರಿ ಯಂತ್ರಾಂಶಗಳನ್ನು ಖರೀದಿಸುವುದಾಗಿ ಅಧ್ಯಕ್ಷ ಡೊನಾಲ್‌್ಡ ಟ್ರಂಪ್ ಘೋಷಿಸಿದರು, ಆದರೆ ಅಮೆರಿಕಾ ಭಾರತದ ಮೇಲೆ ವ್ಯಾಪಾರದಲ್ಲಿ ಸುಂಕ ಹೇರುವ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಭಾರತ ಮತ್ತು ಅಮೆರಿಕ ಪ್ರಮುಖ ವ್ಯಾಪಾರ ಮಾರ್ಗಕ್ಕಾಗಿ ಒಟ್ಟಾಗಿ ಕೆಲಸ ಮಾಡಲು ಒಪ್ಪಿಕೊಂಡಿವೆ. ಟ್ರಂಪ್ ಪ್ರಕಾರ, ಇದು ವಿಶ್ವದ ಶ್ರೇಷ್ಠ ವ್ಯಾಪಾರ ಮಾರ್ಗಗಳಲ್ಲಿ ಒಂದಾಗಲಿದೆ. ಇದು ಭಾರತದಿಂದ ಇಸ್ರೇಲ್‌ನಿಂದ ಇಟಲಿಗೆ ಮತ್ತು ಮುಂದೆ ಅಮೆರಿಕಕ್ಕೆ ಸಾಗುತ್ತದೆ. ಇದು ಪಾಲುದಾರ ರಾಷ್ಟ್ರಗಳನ್ನು ರಸ್ತೆಗಳು, ರೈಲುಮಾರ್ಗಗಳು ಮತ್ತು ಸಮುದ್ರದೊಳಗಿನ ಕೇಬಲ್‌ಗಳ ಮೂಲಕ ಸಂಪರ್ಕಿಸುತ್ತದೆ.
ಈ ವರ್ಷದಿಂದ ಅಮೆರಿಕವು ಭಾರತಕ್ಕೆ ಮಿಲಿಟರಿ ಮಾರಾಟವನ್ನು ಹಲವಾರು ಶತಕೋಟಿ ಡಾಲರ್‌ಗಳಷ್ಟು ಹೆಚ್ಚಿಸಲಿದೆ. ಭಾರತಕ್ಕೆ ಈ35 ಸ್ಟೆಲ್ತ್ ಯುದ್ಧ ವಿಮಾನಗಳನ್ನು ಒದಗಿಸುವ ಮಾರ್ಗವನ್ನು ಸಹ ಸಿದ್ಧಪಡಿಸಲಾಗುತ್ತಿದೆ. ಯಾವುದೇ ಭಾರತೀಯ ಅಮೆರಿಕದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದರೆ, ಅವರನ್ನು ವಾಪಸ್ ಕರೆದುಕೊಂಡು ಹೋಗಲು ಭಾರತ ಸಿದ್ಧವಾಗಿದೆ ಎಂದು ಪ್ರಧಾನಿ ಮೋದಿ ಸ್ಪಷ್ಟವಾಗಿ ಹೇಳಿದ್ದಾರೆ.
ಅಮೆರಿಕದ ಹೊಸ ಸರ್ಕಾರದಲ್ಲಿ ಒಂದು ನಿರೂಪಣೆ ಸ್ಪಷ್ಟವಾಗಿದೆ. ಅಂದರೆ, ಡೊನಾಲ್‌್ಡ ಟ್ರಂಪ್ ಆಡಳಿತದಲ್ಲಿ ಎಲೋನ್ ಮಸ್ಕ್ ಅವರನ್ನು ಅತ್ಯಂತ ಬಲಿಷ್ಠ ಎಂದು ಪರಿಗಣಿಸಲಾಗಿದೆ. ಅವರು ಟ್ರಂಪ್‌ಗೆ ತುಂಬಾ ಹತ್ತಿರವಾಗಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಟ್ರಂಪ್ ಅವರೊಂದಿಗಿನ ಭೇಟಿಗೂ ಮುನ್ನ ಪ್ರಧಾನಿ ಮೋದಿ ಅವರೊಂದಿಗಿನ ಎಲೋನ್ ಮಸ್ಕ್ ಅವರ ಭೇಟಿ ಬಹಳ ಮುಖ್ಯವಾಗಿತ್ತು. ಸಭೆಯ ಸಮಯದಲ್ಲಿ, ಪ್ರಧಾನಿ ಮೋದಿ ವಿಶೇಷವಾಗಿ ಎಲೋನ್ ಮಸ್ಕ್ ಅವರ ಮಕ್ಕಳೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿತು.
ಶ್ವೇತಭವನದಲ್ಲಿರುವ ತಮ ಓವಲ್ ಕಚೇರಿಯಲ್ಲಿ ಟ್ರಂಪ್ ಮೋದಿ ಅವರನ್ನು ಹಸ್ತಾಲಾಘವ ನೀಡಿ ಅಪ್ಪುಗೆಯೊಂದಿಗೆ ಸ್ವಾಗತಿಸಿ ಪ್ರಧಾನಿ ಮೋದಿ ತಮ ದೀರ್ಘಕಾಲದ ಸ್ನೇಹಿತ ಮತ್ತು ಅದ್ಭುತ ವ್ಯಕ್ತಿ ಎಂದು ಬಣ್ಣಿಸಿದರು. ನಾನು ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ಭೇಟಿಯಾದಾಗ, ಇದು ಯುದ್ಧದ ಯುಗವಲ್ಲ ಎಂದು ಹೇಳಿದ್ದೆ. ಯುದ್ಧಭೂಮಿಯಲ್ಲಿ ಪರಿಹಾರಗಳನ್ನು ಕಂಡುಹಿಡಿಯಲಾಗುವುದಿಲ್ಲ ಎಂದು ನಾನು ಹೇಳಿದ್ದೆ. ಈ ಬಗ್ಗೆ ಎಲ್ಲಾ ದೇಶಗಳು ಒಟ್ಟಿಗೆ ಕುಳಿತು ಮಾತುಕತೆಯಾಡಿ ಸಮಸ್ಯೆ ಬಗೆಹರಿಸಬೇಕು ಎಂದರು.
ಮಹತ್ವಾಕಾಂಕ್ಷೆಯ ಭಾರತ- ಮಧ್ಯಪ್ರಾಚ್ಯ- ಯುರೋಪ್ ಆರ್ಥಿಕ ಕಾರಿಡಾರ್ ಕುರಿತು, ಜಾಗತಿಕವಾಗಿ ಇತಿಹಾಸದಲ್ಲಿ ಶ್ರೇಷ್ಠ ವ್ಯಾಪಾರ ಮಾರ್ಗಗಳಲ್ಲಿ ಒಂದನ್ನು ನಿರ್ಮಿಸಲು ಸಹಾಯ ಮಾಡಲು ಎರಡೂ ಕಡೆಯವರು ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ.ಟ್ರಂಪ್ ಅವರನ್ನು ಭೇಟಿ ಮಾಡುವ ಮೊದಲು, ಪ್ರಧಾನಿ ಮೋದಿ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕ್ ವಾಲ್‌್ಟ್ಜ, ರಾಷ್ಟ್ರೀಯ ಗುಪ್ತಚರ ನಿರ್ದೇಶಕ ತುಳಸಿ ಗಬ್ಬಾರ್ಡ್, ಬಿಲಿಯನೇರ್ ಎಲೋನ್ ಮಸ್ಕ್ ಮತ್ತು ರಿಪಬ್ಲಿಕನ್ ನಾಯಕ ವಿವೇಕ್ ರಾಮಸ್ವಾಮಿ ಅವರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದ್ದರು.
ವೈಟ್‌ಹೌಸ್‌ನಲ್ಲಿ ಭೇಟಿ ಮಾಡಿದ ಸಂದರ್ಭ ಡೊನಾಲ್ಡ್ ಟ್ರಂಪ್ ಮೋದಿಗೆ ಅವರ್ ಜರ್ನಿ ಟುಗೆದರ್ ಎಂಬ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಪುಸ್ತಕದಲ್ಲಿ ಹೌಡಿ ಮೋದಿ ಹಾಗೂ ನಮಸ್ತೆ ಟ್ರಂಪ್ ಕಾರ್ಯಕ್ರಮದ ಹಲವು ಫೋಟೋಗಳು ಕೂಡ ಇವೆ.