ಬೆಂಗಳೂರು,ಜ.20- ಕರ್ತವ್ಯಕ್ಕೆ ಅಡ್ಡಿಪಡಿಸಿ ಇನ್ಸ್ಪೆಕ್ಟರ್ ಮೇಲೆಯೇ ಹಲ್ಲೆ ನಡೆಸಿದ್ದ ಪಾಲಿಕೆ ಮಾಜಿ ಸದಸ್ಯ ಬಾಲಕೃಷ್ಣ ಎಂಬುವರನ್ನು ಕಗ್ಗಲಿಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಯಲಚೇನಹಳ್ಳಿ ವಾರ್ಡ್ನ ಪಾಲಿಕೆ ಮಾಜಿ ಸದಸ್ಯರಾಗಿರುವ ಬಾಲಕೃಷ್ಣ ಅವರು ಕಗ್ಗಲಿಪುರ ಸಮೀಪದ ಬೈರಸಂದ್ರದಲ್ಲಿ ಜಮೀನು ವಿವಾದ ಮಾಡಿಕೊಂಡಿದ್ದರು.
ನಿನ್ನೆ ಕಗ್ಗಲಿಪುರ ಠಾಣೆ ಇನ್ಸ್ಪೆಕ್ಟರ್ ವಿಜಯಕುಮಾರ್ ಸ್ಥಳಕ್ಕೆ ಹೋಗಿ ವಿವಾದ ಬಗೆಹರಿಸಲು ಮುಂದಾದಾಗ ಬಾಲಕೃಷ್ಣ ಏಕಾಏಕಿ ವಿಜಯಕುಮಾರ್ ಜೊತೆ ಗಲಾಟೆ ಮಾಡಿಕೊಂಡರು. ಇವರ ನಡುವೆ ಮಾತಿಗೆ ಮಾತು ಬೆಳೆದಾಗ ಬಾಲಕೃಷ್ಣ ಏಕಾಏಕಿ ಇನ್ಸ್ಪೆಕ್ಟರ್ ವಿಜಯಕುಮಾರ್ ಅವರ ಕುತ್ತಿಗೆ ಪಟ್ಟಿ ಹಿಡಿದು ಹಲ್ಲೆ ಮಾಡಿದ್ದರು.
ಘಟನೆ ಸಂಬಂಧ ಇನ್ಸ್ಪೆಕ್ಟರ್ ಕಗ್ಗಲಿಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ಗಂಭೀರತೆ ಅರಿತ ಪೊಲೀಸರು, ಇನ್ಸ್ಪೆಕ್ಟರ್ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ, ಅವರ ಮೇಲೆ ಹಲ್ಲೆ ನಡೆಸಿದ್ದ ಬಾಲಕೃಷ್ಣನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Inspector, Assault, Balakrishna, Arrested,