ಅತ್ತೆ ಮಗಳ ಮೇಲೆ ಅತ್ಯಾಚಾರ ಆರೋ : ಇನ್‍ಸ್ಪೆಕ್ಟರ್ ಅಮಾನತು

Social Share

ಚಿತ್ರದುರ್ಗ,ಅ.24-ಅತ್ತೆ ಮಗಳ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಜಿಲ್ಲೆಯ ಚಳ್ಳಕೆರೆ ಪೊಲೀಸ್ ಠಾಣೆ ಇನ್‍ಸ್ಪೆಕ್ಟರ್ ಉಮೇಶ್ ವಿರುದ್ಧ ಅತ್ಯಾಚಾರ ಆರೋಪ ದಾಖಲಾಗಿದೆ.

ಈ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಇನ್‍ಸ್ಪೆಕ್ಟರ್ ಉಮೇಶ್ ಅವರನ್ನು ಸೇವೆಯಿಂದ ಅಮಾನತುಪಡಿಸಿ ದಾವಣಗೆರೆ ಪೂರ್ವ ವಲಯದ ಐಜಿಪಿ ತ್ಯಾಗರಾಜನ್ ಆದೇಶ ಹೊರಡಿಸಿದ್ದಾರೆ.

ಚಳ್ಳಕೆರೆ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಆಗಿದ್ದ ಜಿ.ಬಿ.ಉಮೇಶ್ ಅವರು ತಮ್ಮ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಚಿತ್ರದುರ್ಗದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ಉಮೇಶ್ ವಿರುದ್ಧ 376 (2)(ಇ)(ಟಿ), 323, 504, 506ರಡಿ ದೂರು ದಾಖಲಿಸಿದ್ದರು. ಯಾವಾಗ ತಮ್ಮ ವಿರುದ್ಧ ಅತ್ಯಾಚಾರ ಆರೋಪ ದಾಖಲಾಯಿತೋ ಬಂಧನದ ಭೀತಿಯಿಂದ ಪಾರಾಗಲು ಉಮೇಶ್ ನಾಪತ್ತೆಯಾಗಿದ್ದಾರೆ.

ಇನ್‍ಸ್ಪೆಕ್ಟರ್ ನಾಪತ್ತೆಯಾಗುತ್ತಿದ್ದಂತೆ ಎಚ್ಚೆತ್ತುಕೊಂಡು ಐಜಿಪಿ ತ್ಯಾಗರಾಜನ್ ತತ್‍ಕ್ಷಣದಿಂದಲೇ ಜಾರಿಗೆ ಬರುವಂತೆ ಕರ್ತವ್ಯದಿಂದ ಅಮಾನತುಪಡಿಸಿದ್ದಾರೆ.

ದೂರು ನೀಡಿದ ಯುವತಿ ಶಿವಮೊಗ್ಗದಲ್ಲಿ ವ್ಯಾಸಂಗ ಮಾಡುತ್ತಿದ್ದರು. ದಾವಣಗೆರೆಯಲ್ಲಿ ಇನ್‍ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ದಾವಣಗೆರೆಯಲ್ಲಿ ನಿವೇಶನ ಸಮಸ್ಯೆ ಹೇಳಲು ಯುವತಿ ಠಾಣೆಗೆ ಬಂದಿದ್ದಳು. ಈ ಸಮಯದಲ್ಲಿ ಯುವತಿ ಬಿಎಡ್ ವ್ಯಾಸಂಗ ಮಾಡುತ್ತಿದ್ದರು.

ಸಹಾಯ ಮಾಡುವ ನೆಪದಲ್ಲಿ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ ಉಮೇಶ್ ಅತ್ಯಾಚಾರ ಮಾಡಿ, ಐದು ಬಾರಿ ಗರ್ಭಪಾತ ಮಾಡಿಸಿರುವ ಆರೋಪಗಳು ಕೇಳಿ ಬಂದಿದೆ. ಅಲ್ಲದೆ ತಾನು ಕರೆದಾಗ ಬರುವಂತೆಯೂ ಹೇಳಿದ್ದಾರೆ. ಅದಾದ ಬಳಿಕ ಇನ್ನೊಮ್ಮೆ ಶಿವಮೊಗ್ಗಕ್ಕೆ ಬಂದು ಅತ್ಯಾಚಾರ ಎಸಗಿದ್ದಾರೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈಗಾಗಲೇ ಇನ್‍ಸ್ಪೆಕ್ಟರ್‍ಗೆ ಇಬ್ಬರು ಪತ್ನಿಯರಿದ್ದು, ಯುವತಿಯನ್ನು ಮದುವೆಯಾಗುವಂತೆ ಒತ್ತಡ ಹಾಕಿದ್ದರು. ಅವರ ಕಿರುಕುಳವನ್ನು ತಾಳಲಾರದೆ ಯುವತಿ ಚಿತ್ರದುರ್ಗ ಮಹಿಳಾ ಠಾಣೆಗೆ ಬಂದು ದೂರು ಕೊಟ್ಟಿದ್ದರು ಎಂದು ಹೇಳಲಾಗಿದೆ.

Articles You Might Like

Share This Article